ಜಾಗತಿಕ ಆರ್ಥಿಕ ಹಿಂಜರಿತ ಆರಂಭ, ಲಕ್ಷಾಂತರ ಜನರು ಆರ್ಥಿಕವಾಗಿ ನಾಶವಾಗುತ್ತಾರೆ ! – ಹೂಡಿಕೆ (ಆರ್ಥಿಕ) ತಜ್ಞ ರಾಬರ್ಟ್ ಕಿಯೋಸಾಕಿ ಇವರ ಎಚ್ಚರಿಕೆ Robert Kiyosaki Financial Expert Warning

ವಾಷಿಂಗ್ಟನ್ – ಜಾಗತಿಕ ಆರ್ಥಿಕ ಹಿಂಜರಿತವು ಪ್ರಾರಂಭವಾಗಿದ್ದು ಅದರಿಂದ ಲಕ್ಷಾಂತರ ಜನರು ಆರ್ಥಿಕವಾಗಿ ನಾಶವಾಗಲಿದ್ದಾರೆ, ಎಂದು ‘ರಿಚ್ ಡ್ಯಾಡ್ ಪೂರ್ ಡ್ಯಾಡ್’  ಎಂಬ ಪ್ರಸಿದ್ಧ ಪುಸ್ತಕದ ಲೇಖಕ ಮತ್ತು ಖ್ಯಾತ ಹೂಡಿಕೆ ತಜ್ಞ ರಾಬರ್ಟ್ ಕಿಯೋಸಾಕಿ ಅವರು ‘ಎಕ್ಸ್’ ಮೂಲಕ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಕಿಯೋಸಾಕಿ ಅವರು ಮಾತು ಮುಂದುವರೆಸಿ, “ಅಮೆರಿಕಾದ ಮಾರುಕಟ್ಟೆಯು ಗಂಭೀರ ಬಿಕ್ಕಟ್ಟಿನಲ್ಲಿದೆ. ಇದರಿಂದಾಗಿ ಜಗತ್ತಿನಾದ್ಯಂತ ಆರ್ಥಿಕ ಅಸ್ಥಿರತೆ ಉಂಟಾಗಲಿದೆ. ‘ಷೇರುಗಳು’ (ಸಮಭಾಗ) ಮತ್ತು ‘ಬಾಂಡ್‌ಗಳು’ (Bonds) ಕೇವಲ ಆಭಾಸಿ ಕರೆನ್ಸಿಯಾಗಿವೆ (ವರ್ಚುಯಲ್ ). ಆರ್ಥಿಕ ಹಿಂಜರಿತ ಅಥವಾ ಹಣದುಬ್ಬರದ ಸಮಯದಲ್ಲಿ ಇಂತಹ ವರ್ಚುಯಲ್ ಕರೆನ್ಸಿಗಳ ಮೌಲ್ಯ ಕುಸಿಯುತ್ತದೆ. ಅದರ ಬದಲು,

ಚಿನ್ನ ಮತ್ತು ಬೆಳ್ಳಿಯಂತಹ ಅಮೂಲ್ಯ ಲೋಹಗಳು ನಿಜವಾದ ಸಂಪತ್ತಾಗಿವೆ; ಏಕೆಂದರೆ ಅವು ಆರ್ಥಿಕ ಬಿಕ್ಕಟ್ಟಿನಲ್ಲೂ ಸ್ಥಿರವಾಗಿರುತ್ತವೆ. ಆದ್ದರಿಂದ ಆರ್ಥಿಕ ಅಸ್ಥಿರತೆಯ ಸಮಯದಲ್ಲಿ ಚಿನ್ನ, ಬೆಳ್ಳಿ ಮತ್ತು ‘ಬಿಟ್‌ಕಾಯಿನ್’ (ಒಂದು ರೀತಿಯ ವರ್ಚುಯಲ್ ಕರೆನ್ಸಿ) ಮಾತ್ರ ಹೂಡಿಕೆಗೆ ಸುರಕ್ಷಿತ ಪರ್ಯಾಯ ಆಯ್ಕೆಗಳಾಗಿವೆ. ಜಾಗತಿಕ ಆರ್ಥಿಕ ಹಿಂಜರಿತ ಆರಂಭಗೊಂಡಿದ್ದು, ಜನರು ಜಾಗರೂಕರಾಗಿರಬೇಕು ಮತ್ತು ತಮ್ಮ ಸಂಪತ್ತನ್ನು ಸರಿಯಾಗಿ ರಕ್ಷಿಸಿಕೊಳ್ಳಬೇಕು,” ಎಂದು ಹೇಳಿದ್ದಾರೆ.