ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುತ್ತಾ ಫಿನ್ಲೆಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರ ಹೇಳಿಕೆ!

ಹೆಲ್ಸಿಂಕಿ (ಫಿನ್ಲೆಂಡ್) – ನಾನು ಭಾರತದ ದೊಡ್ಡ ಅಭಿಮಾನಿ ಮತ್ತು ಭಾರತವು ಅಮೆರಿಕಾದ ನಂತರ ಹಾಗೂ ಚೀನಾದ ಜೊತೆಗೆ ಮುಂದಿನ ಜಾಗತಿಕ ಮಹಾಶಕ್ತಿಯ ದೇಶವಾಗಲಿದೆ ಎಂಬ ಖಚಿತತೆ ನನಗಿದೆ. ಭಾರತಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ನೀಡುವುದು ಅತ್ಯಗತ್ಯ. ಒಂದು ವೇಳೆ ಭಾರತಕ್ಕೆ ಈ ಸ್ಥಾನ ನೀಡದಿದ್ದರೆ, ವಿಶ್ವ ಸಂಸ್ಥೆಯ ಶಕ್ತಿ ಮತ್ತು ವಿಶ್ವಾಸಾರ್ಹತೆ ನಿರಂತರವಾಗಿ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಫಿನ್ಲೆಂಡ್‌ನ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರು ಹೇಳಿದ್ದಾರೆ. ರಷ್ಯಾ ಮತ್ತು ಬ್ರಿಟನ್ ಸೇರಿದಂತೆ ಅನೇಕ ದೇಶಗಳು ಭಾರತದ ಸದಸ್ಯತ್ವಕ್ಕೆ ಬಹಿರಂಗವಾಗಿ ಬೆಂಬಲಿಸುತ್ತಿದ್ದರೂ, ಚೀನಾ ಅದನ್ನು ವಿರೋಧಿಸುತ್ತಿದೆ.
ಭಾರತವು ಎಲ್ಲಾ ಪ್ರಮುಖ ರಾಷ್ಟ್ರಗಳೊಂದಿಗೆ ಸಮತೋಲಿತ ಸಂಬಂಧಗಳನ್ನು ಹೊಂದಿದೆ!
‘ಫಸ್ಟ್ ಪೋಸ್ಟ್’ ಸುದ್ದಿ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಸ್ಟಬ್ ಅವರು,
೧. ಭಾರತವು ಪ್ರಸ್ತುತ ಜಗತ್ತಿನ ಯಾವುದೇ ಒಂದು ಶಕ್ತಿಗೆ ಬದ್ಧರಾಗಿರುವುದಕ್ಕಿಂತ, ಎಲ್ಲಾ ಪ್ರಮುಖ ರಾಷ್ಟ್ರಗಳೊಂದಿಗೆ ಸಮಾನ ಮತ್ತು ಸಕಾರಾತ್ಮಕ ಸಂಬಂಧಗಳನ್ನು ನಿರ್ಮಿಸುತ್ತಿದೆ ಮತ್ತು ಈ ನಿಲುವು ಅತ್ಯಂತ ಸೂಕ್ತವಾಗಿದೆ. ಭಾರತದ ಗಾತ್ರ, ಸಾಮರ್ಥ್ಯ ಮತ್ತು ಅಂತರರಾಷ್ಟ್ರೀಯ ಪ್ರಭಾವವನ್ನು ನೋಡಿದರೆ, ಅದು ಮಾಡುವ ಕೆಲಸವು ಜಾಗತಿಕ ವಿದ್ಯಮಾನಗಳ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ.
Yesterday I gave an interview to Indian FirstPost Network-18.
India is an indispensable pilar of global south. India is the future – it has demography, technology and economic growth on it’s side. pic.twitter.com/YBkrnTZjRJ
— Alexander Stubb (@alexstubb) November 4, 2025
೨. ಜಾಗತಿಕ ವ್ಯವಸ್ಥೆಯ ದೃಷ್ಟಿಯಿಂದ ಬಹುಪಕ್ಷೀಯ ಸಹಕಾರದೊಂದಿಗೆ ಭಾರತದ ಪಾತ್ರವನ್ನು ಹೆಚ್ಚಿಸುವುದು ಅಗತ್ಯವಾಗಿದೆ. ವಿಶ್ವ ಸಂಸ್ಥೆಯ ಮಹಾಸಭೆಯಲ್ಲಿ ನಾನು, ಭದ್ರತಾ ಮಂಡಳಿಯ ವಿಸ್ತರಣೆಯಾಗಬೇಕು. ಅದರ ಸದಸ್ಯರ ಸಂಖ್ಯೆ ಕನಿಷ್ಠ ದುಪ್ಪಟ್ಟಾಗಬೇಕು. ಭಾರತದಂತಹ ದೇಶಕ್ಕೆ ಇನ್ನೂ ಶಾಶ್ವತ ಸದಸ್ಯತ್ವ ಇಲ್ಲದಿರುವುದು ಅತ್ಯಂತ ತಪ್ಪು, ಎಂದು ಎರಡು ಬಾರಿ ಹೇಳಿದ್ದೇನೆ.
ನಾವು ದಕ್ಷಿಣ ಅಮೆರಿಕಾದಿಂದ ೧ ಸದಸ್ಯರನ್ನು, ಆಫ್ರಿಕಾದಿಂದ ೨ ಮತ್ತು ಏಷ್ಯಾದಿಂದ ೨ ಸದಸ್ಯರನ್ನು ಆಯ್ಕೆ ಮಾಡಬೇಕು; ಏಕೆಂದರೆ ನಾನು ಬಹುಪಕ್ಷೀಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ಒಂದು ವೇಳೆ ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಸ್ಥಾನ ನೀಡದಿದ್ದರೆ, ಈ ಜಾಗತಿಕ ಸಂಸ್ಥೆಯು ಮತ್ತಷ್ಟು ದುರ್ಬಲಗೊಳ್ಳುತ್ತದೆ.
ಭಾರತಕ್ಕೆ ಚೀನಾದ ವಿರೋಧ
ಭಾರತ ಸೇರಿದಂತೆ ‘ಜಿ-೪’ ದೇಶಗಳು (ಭಾರತ, ಜಪಾನ್, ಜರ್ಮನಿ ಮತ್ತು ಬ್ರೆಜಿಲ್) ನಿರಂತರವಾಗಿ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳನ್ನು ಕೋರುತ್ತಿವೆ; ಆದರೆ ಚೀನಾ ಈ ಬದಲಾವಣೆಯನ್ನು ವಿರೋಧಿಸುತ್ತಿದೆ.
ಭಾರತಕ್ಕೆ ಸದಸ್ಯತ್ವ ದೊರೆತರೆ ಏಷ್ಯಾದಲ್ಲಿ ತನ್ನ ಅಧಿಕಾರ ಮತ್ತು ಪ್ರಭಾವ ಕಡಿಮೆಯಾಗುತ್ತದೆ ಎಂದು ಚೀನಾ ಭಯಪಡುತ್ತಿದೆ; ಆದ್ದರಿಂದಲೇ ಅದು ಭಾರತದ ದಾರಿಯಲ್ಲಿ ಅಡ್ಡಿಪಡಿಸುತ್ತಿದೆ. ಇದೇ ನಿಟ್ಟಿನಲ್ಲಿ ಪಾಕಿಸ್ತಾನವು ಚೀನಾದ ಸೂಚನೆಯ ಮೇರೆಗೆ ಭಾರತದ ವಿರುದ್ಧ ಅಭಿಯಾನ ನಡೆಸುತ್ತಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಚೀನಾದ ಸೇನೆಯೊಂದಿಗೆ ಪ್ರತಿ ವರ್ಷ ೧ ಸಾವಿರದ, ೧೦೦ ಬಾರಿ ಮುಖಾಮುಖಿ ಮಾತುಕತೆ!
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara