ಅಮೆರಿಕಾದಲ್ಲಿನ ಭಾರತೀಯ ಮೂಲದ ಸಂಸದ ರಾಜಾ ಕೃಷ್ಣಮೂರ್ತಿ ಅವರಿಂದ ಉಪಾಧ್ಯಕ್ಷ ಜೆ. ಡಿ. ವ್ಯಾನ್ಸ್ ಅವರ ಮೇಲೆ ಟೀಕೆ!

ವ್ಯಾನ್ಸ್ ಅವರು ಹಿಂದೂ ಪತ್ನಿಗೆ ಕ್ರೈಸ್ತ ಧರ್ಮ ಸ್ವೀಕರಿಸಲು ಕೇಳಿದ ಪ್ರಕರಣ

ವಾಷಿಂಗ್ಟನ್ (ಅಮೆರಿಕಾ) – ಅಮೆರಿಕಾದ ಉಪಾಧ್ಯಕ್ಷ ಜೆ. ಡಿ. ವ್ಯಾನ್ಸ್ ಅವರು ತಮ್ಮ ಪತ್ನಿ ಉಷಾ ವ್ಯಾನ್ಸ್ ಅವರ ಧರ್ಮದ ಬಗ್ಗೆ ನೀಡಿದ ಟೀಕೆಯು ಅತ್ಯಂತ ನಿರಾಶಾದಾಯಕವಾಗಿದೆ ಮತ್ತು ಇದು ಅಮೆರಿಕಾದಲ್ಲಿ ಬೆಳೆಯುತ್ತಿರುವ ಹಿಂದೂ ವಿರೋಧಿ ವಾತಾವರಣವನ್ನು ಇನ್ನಷ್ಟು ಪ್ರಚೋದಿಸುವ ಸಾಧ್ಯತೆ ಇದೆ. ಹಿಂದೂ ಮತ್ತು ಭಾರತೀಯ ಅಮೆರಿಕನ್ ಸಮುದಾಯವು ಈಗಾಗಲೇ ತಾರತಮ್ಯ, ದ್ವೇಷ ಮತ್ತು ಹೊರಹಾಕುವಿಕೆಯ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಉಪಾಧ್ಯಕ್ಷರು ಇಂತಹ ಹೇಳಿಕೆ ನೀಡುವುದು ಅತ್ಯಂತ ಜವಾಬ್ದಾರಿರಹಿತ ನಡೆ ಎಂದು ಭಾರತೀಯ ಮೂಲದ ಅಮೆರಿಕಾದ ಸಂಸದ ರಾಜಾ ಕೃಷ್ಣಮೂರ್ತಿ ಅವರು ವ್ಯಾನ್ಸ್ ಅವರ ಮೇಲೆ ಟೀಕಿಸಿದರು. ವ್ಯಾನ್ಸ್ ಅವರು ಕೆಲ ದಿನಗಳ ಹಿಂದೆ ತಮ್ಮ ಪತ್ನಿ ಉಷಾ ಅವರಿಗೆ ಕ್ರೈಸ್ತ ಧರ್ಮ ಸ್ವೀಕರಿಸಲು ಕೇಳಿದ್ದರು ಎಂಬ ಘಟನೆ ಬೆಳಕಿಗೆ ಬಂದಿತ್ತು. ಅದರ ಬಗ್ಗೆ ಕೃಷ್ಣಮೂರ್ತಿ ಅವರು ಮಾತನಾಡುತ್ತಿದ್ದರು.

ಈ ಪ್ರಕರಣದಲ್ಲಿ ಟೀಕೆ ವ್ಯಕ್ತವಾದ ನಂತರ, ವ್ಯಾನ್ಸ್ ಅವರು ಸ್ಪಷ್ಟನೆ ನೀಡುತ್ತಾ, “ನನ್ನ ಪತ್ನಿ ಕ್ರೈಸ್ತಳಲ್ಲ ಮತ್ತು ಅವಳು ಧರ್ಮ ಬದಲಿಸುವ ಯಾವುದೇ ಯೋಚನೆ ಇಲ್ಲ.

ನಾನು ನನ್ನ ಅಭಿಪ್ರಾಯಗಳನ್ನು ಅವಳೊಂದಿಗೆ ಮುಕ್ತವಾಗಿ ಮಾತನಾಡುತ್ತೇನೆ; ಆದರೆ ಅವಳ ಮೇಲಿನ ನನ್ನ ಪ್ರೀತಿ ಮತ್ತು ಗೌರವ ಮೊದಲಿನಷ್ಟೇ ಇದೆ,” ಎಂದು ಹೇಳಿದ್ದರು.