ಹೌರಾ (ಪಶ್ಚಿಮ ಬಂಗಾಳ): ರಾಷ್ಟ್ರ-ಧರ್ಮ ಪ್ರಚಾರದ ಫಲಕ ತೆರವು; ಹಿಂದೂಗಳಿಂದ ಪ್ರತಿಭಟನೆ!

ಹೌರಾ (ಪಶ್ಚಿಮ ಬಂಗಾಳ) – ‘ಭಾರತ ಜಾಗರಣ ಪರಿಷತ್’ ಮತ್ತು ಇತರ ಹಿಂದೂ ಸಂಘಟನೆಗಳು ರಾಷ್ಟ್ರ-ಧರ್ಮ ಪ್ರಚಾರ ಮಾಡುವ ಉದ್ದೇಶದಿಂದ ಹೌರಾದಲ್ಲಿ ಅಳವಡಿಸಿದ್ದ ಫಲಕವನ್ನು (ಬ್ಯಾನರ್) ಎರಡನೇ ದಿನವೇ ಕೆಲವು ಅಸಾಮಾಜಿಕ ಅಂಶಗಳು ತೆಗೆದು ಹಾಕಿವೆ. ಈ ಘಟನೆಯನ್ನು ಖಂಡಿಸಿ ಹೌರಾ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಲಾಗಿದೆ.

ಭಾರತ ಜಾಗರಣ ಪರಿಷತ್‌ನ ಅಂಕಿತ್ ಕೋಠಾರಿ ಅವರು ಮಾತನಾಡಿ, “ಫಲಕ ತೆಗೆದುಹಾಕಿರುವ ಕೃತಿಯ ವಿರುದ್ಧ ಹಿಂದೂಗಳು ಶಾಂತಿಯುತ ಪ್ರತಿಭಟನೆ ನಡೆಸಿದರು, ಹಾಗೆಯೇ ಎಲ್ಲಿಂದ ಈ ಫಲಕವನ್ನು ತೆಗೆಯಲಾಗಿತ್ತೋ, ಅದೇ ಸ್ಥಳದಲ್ಲಿ ಇದಕ್ಕಿಂತ ದೊಡ್ಡ ಫಲಕವನ್ನು ಹಾಕಲಾಗುವುದು” ಎಂದು ತಿಳಿಸಿದರು.