ಒನ್ ನೇಷನ್ ಒನ್ ಪೊಲೀಸ್ ಯುನಿಫಾರ್ಮ (ಒಂದು ರಾಷ್ಟ್ರ, ಒಂದು ಪೊಲೀಸ್ ಸಮವಸ್ತ್ರ) ಯೋಜನೆಗಾಗಿ ವರದಿ ಕೇಳಿದೆ!

ನವದೆಹಲಿ – ಕೇಂದ್ರ ಸರಕಾರವು ಇಡೀ ದೇಶದಲ್ಲಿ ‘ಒನ್ ನೇಷನ್ ಒನ್ ಪೊಲೀಸ್ ಯುನಿಫಾರ್ಮ’ ಯೋಜನೆಯನ್ನು ಜಾರಿಗೊಳಿಸಲು ವೇಗವಾಗಿ ಹೆಜ್ಜೆ ಇಡುತ್ತಿದೆ. ಈ ಉಪಕ್ರಮದ ಅಡಿಯಲ್ಲಿ, ದೇಶಾದ್ಯಂತ ಪೊಲೀಸರ ಸಮವಸ್ತ್ರವನ್ನು ಏಕರೂಪಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ. ಗೃಹ ಸಚಿವಾಲಯವು ಈ ಯೋಜನೆಗಾಗಿ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅವರ ಪ್ರಸ್ತುತ ಸಮವಸ್ತ್ರದ ಮಾಹಿತಿಯನ್ನು ಕೇಳಿದೆ. ಈ ಮಾಹಿತಿಯು ಕಾನ್‌ಸ್ಟೆಬಲನಿಂದ ಉಪ ಅಧೀಕ್ಷಕ (ಡಿಎಸ್.ಪಿ) ಹುದ್ದೆಯವರೆಗಿನ ಎಲ್ಲಾ ಹಂತದ ಸಮವಸ್ತ್ರಗಳಿಗೆ ಸಂಬಂಧಿಸಿರಬೇಕು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ. ದೇಶದಾದ್ಯಂತದ ಪೊಲೀಸರಿಗೆ ಏಕರೂಪದ ನೋಟವನ್ನು ನೀಡುವುದು ಮತ್ತು ಏಕತೆಯ ಭಾವನೆಯನ್ನು ಬಲಪಡಿಸುವುದು ಈ ಯೋಜನೆಯ ಹಿಂದಿನ ಉದ್ದೇಶವಾಗಿದೆ. ಅಕ್ಟೋಬರ್ 2022 ರಲ್ಲಿ, ಹರಿಯಾಣದ ಫರಿದಾಬಾದನಲ್ಲಿ ನಡೆದ ರಾಜ್ಯಗಳ ಗೃಹ ಮಂತ್ರಿಗಳ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ‘ಒನ್ ನೇಶನ ಒನ್ ಪೊಲೀಸ್ ಯುನಿಫಾರ್ಮ’ ಕಲ್ಪನೆಯನ್ನು ಮಂಡಿಸಿದ್ದರು.
1. ಸದ್ಯ ಬಹುತೇಕ ರಾಜ್ಯಗಳಲ್ಲಿನ ಪೊಲೀಸರು ಖಾಕಿ ಬಣ್ಣದ ಸಮವಸ್ತ್ರವನ್ನು ಧರಿಸುತ್ತಾರೆ; ಆದರೆ ಕೋಲಕಾತಾ ಮತ್ತು ತಮಿಳುನಾಡು ಪೊಲೀಸರು ಬಿಳಿ ಬಣ್ಣದ ಸಮವಸ್ತ್ರ ಧರಿಸುತ್ತಾರೆ.
2. ಬ್ರಿಟಿಷರ ಕಾಲದಲ್ಲಿ ಪೊಲೀಸ್ ಪಡೆ ಸ್ಥಾಪನೆಯಾದಾಗ, ಸಮವಸ್ತ್ರವು ಬಿಳಿ ಬಣ್ಣದಲ್ಲಿತ್ತು; ಏಕೆಂದರೆ ಆ ಬಣ್ಣವನ್ನು ಸಂಸ್ಕರಿಸಿದ ಮತ್ತು ರಾಜಮನೆತನಕ್ಕೆ ಸಂಬಂಧಿಸಿದ ಬಣ್ಣ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಬಿಳಿ ಬಟ್ಟೆಯ ಮೇಲೆ ಸ್ವಲ್ಪ ಧೂಳು ಸಹ ತಕ್ಷಣ ಕಾಣುತ್ತದೆ ಮತ್ತು ಸಮವಸ್ತ್ರವನ್ನು ಸ್ವಚ್ಛವಾಗಿಡುವುದು ಕಷ್ಟ ಎಂದು ಬ್ರಿಟಿಷ್ ಅಧಿಕಾರಿಗಳಿಗೆ ಶೀಘ್ರದಲ್ಲೇ ಅರಿವಾಯಿತು.
3. ಈ ಸಮಸ್ಯೆಯಿಂದಾಗಿ, ಹೊಸ ಪ್ರಯೋಗವನ್ನು ಪ್ರಾರಂಭಿಸಲಾಯಿತು. 19ನೇ ಶತಮಾನದ ಮಧ್ಯಭಾಗದಲ್ಲಿ ಬ್ರಿಟಿಷರು ಪೊಲೀಸ್ ಸಮವಸ್ತ್ರಕ್ಕೆ ಧೂಳಿನಂತಹ ಬಣ್ಣ ನೀಡಲು ಪ್ರಾರಂಭಿಸಿದರು. 1847 ರಲ್ಲಿ ‘ಖಾಕಿ’ಗೆ ಪೊಲೀಸರ ಅಧಿಕೃತ ಸಮವಸ್ತ್ರದ ಸ್ಥಾನಮಾನ ನೀಡಲಾಯಿತು. (ಪರಕೀಯರ ಗುಲಾಮಗಿರಿಯ ಚಿಹ್ನೆಗಳನ್ನು ದೇಶ ಸ್ವತಂತ್ರಗೊಂಡು 78 ವರ್ಷಗಳ ನಂತರವೂ ಯಾವಾಗ ಬಿಡುತ್ತೇವೆ? ಇದು ಇಲ್ಲಿಯವರೆಗಿನ ಎಲ್ಲ ಪಕ್ಷಗಳ ಸರಕಾರಗಳಿಗೆ ನಾಚಿಕೆಗೇಡಿನ ಸಂಗತಿಯಲ್ಲವೇ? – ಸಂಪಾದಕರು)
4. ವರ್ಷಗಟ್ಟಲೆ ವಿವಿಧ ರಾಜ್ಯಗಳು ತಮ್ಮ ಪೊಲೀಸ್ ಸಮವಸ್ತ್ರದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿದವು. ದೆಹಲಿ ಪೊಲೀಸರು ಖಾಕಿ ಬಣ್ಣದಲ್ಲಿ ಸ್ವಲ್ಪ ಬದಲಾವಣೆ ತರಲು ಪ್ರಯತ್ನಿಸಿದರು; ಆದರೆ ಹೊಸ ಸಮವಸ್ತ್ರ ಇನ್ನೂ ಅಧಿಕೃತವಾಗಿಲ್ಲ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!