ಹಿಂದೂ ಧರ್ಮ ಸ್ವೀಕರಿಸಿ ಹಿಂದೂ ಯುವಕನೊಂದಿಗೆ ವಿವಾಹವಾದ ಮುಸ್ಲಿಂ ಯುವತಿ; ಕುಟುಂಬಸ್ಥರಿಂದ ಜೀವಕ್ಕೆ ಅಪಾಯ

ಬರೇಲಿ (ಉತ್ತರಪ್ರದೇಶ) – ಇಲ್ಲಿ, ಐದು ವರ್ಷಗಳ ಕಾಲ ‘ಲಿವ್ ಇನ್ ರಿಲೇಶನ್‌ಶಿಪ್’ನಲ್ಲಿ (ವಿವಾಹವಾಗದೆ ಒಟ್ಟಿಗೆ ವಾಸಿಸುವುದು) ಇದ್ದ ನಂತರ, ಮುಜಾಫರನಗರದ ನೇಹಾ ಅನ್ಸಾರಿ ಹಿಂದೂ ಧರ್ಮವನ್ನು ಸ್ವೀಕರಿಸಿ, ತನ್ನ ಪ್ರಿಯಕರ ಸುರಜೀತ್ ಎಂಬವನನ್ನು ವಿವಾಹವಾಗಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ನೇಹಾ, ತಮ್ಮ ಕುಟುಂಬಸ್ಥರಿಂದ ಜೀವಕ್ಕೆ ಅಪಾಯವಿದೆ ಎಂದು ಹೇಳಿಕೊಂಡಿದ್ದಾರೆ.

ಇವರಿಬ್ಬರು ಐದು ವರ್ಷಗಳ ಹಿಂದೆಯೇ ವಿವಾಹವಾಗಲು ನಿರ್ಧರಿಸಿದ್ದರು; ಆದರೆ ನೇಹಾ ಕುಟುಂಬದವರು ವಿರೋಧಿಸಿದ್ದರಿಂದ, ಅವರು ಉತ್ತರಾಖಂಡ ರಾಜ್ಯದ ರುದ್ರಪುರಕ್ಕೆ ಹೋಗಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಆದರೆ ಕೆಲ ದಿನಗಳ ಹಿಂದೆ, ಇವರಿಬ್ಬರು ಬರೇಲಿಯ ದೇವಸ್ಥಾನವೊಂದಕ್ಕೆ ಬಂದು ವೈದಿಕ ವಿಧಿವಿಧಾನಗಳ ಪ್ರಕಾರ ವಿವಾಹವಾಗಿದ್ದಾರೆ.

ಸಂಪಾದಕೀಯ ನಿಲುವು

ಮುಸಲ್ಮಾನ ಯುವತಿ ಸ್ವಇಚ್ಛೆಯಿಂದ ಹಿಂದೂ ಧರ್ಮ ಸ್ವೀಕರಿಸಿ ಹಿಂದೂ ಯುವಕನನ್ನು ಮದುವೆಯಾದರೆ ಜೀವಕ್ಕೆ ಅಪಾಯ ಎದುರಾಗುತ್ತದೆ. ಆದರೆ, ಹಿಂದೂ ಯುವತಿಯನ್ನು ಪ್ರೀತಿಯ ಜಾಲಕ್ಕೆ ಸಿಲುಕಿಸಿ ಬಲವಂತವಾಗಿ ಧರ್ಮಾಂತರ ಮಾಡಿ ವಿವಾಹವಾಗುವ ಮುಸಲ್ಮಾನ ಯುವಕನನ್ನು ಹಿಂದೂ ಕಾನೂನಿನ ಮೂಲಕವೂ ವಿರೋಧಿಸಲಾಗುವುದಿಲ್ಲ.