‘ಬಲೂಚ್ ಲಿಬರೇಶನ್ ಆರ್ಮಿ’ಯ ದಾಳಿಯಲ್ಲಿ ಪಾಕಿಸ್ತಾನದ 6 ಸೈನಿಕರು ಸಾವು BLA Attack Pakistan Army

ಬಿಎಲ್‌ಎ ದಾಳಿಯಲ್ಲಿ ಹತ್ಯೆಯಾದ ಇಬ್ಬರು ಪಾಕಿಸ್ತಾನಿ ಭದ್ರತಾ ಸಿಬ್ಬಂದಿ

ಕ್ವೆಟ್ಟಾ (ಬಲೂಚಿಸ್ತಾನ) – ಬಲೂಚಿಸ್ತಾನದ ಕಲಾತ ಜಿಲ್ಲೆಯ ಮಂಗೋಚರ ಪ್ರದೇಶದಲ್ಲಿ ಪಾಕಿಸ್ತಾನಿ ಸೇನೆಯ ವಾಹನಗಳ ಬೆಂಗಾವಲು ಪಡೆಯ ಮೇಲೆ ಹೊಂಚು ಹಾಕಿ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ 2 ಕಮಾಂಡೋಗಳು ಸೇರಿದಂತೆ 6 ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆ. ‘ಬಲೂಚ್ ಲಿಬರೇಶನ್ ಆರ್ಮಿ’ ಎಂಬ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.