ನಾವು ಇತಿಹಾಸವನ್ನು ನಿರ್ಧರಿಸಲು ಸಾಧ್ಯವಿಲ್ಲ! – ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿತು

ನವದೆಹಲಿ – ದೆಹಲಿ ಉಚ್ಚ ನ್ಯಾಯಾಲಯ ‘ದಿ ತಾಜ್ ಸ್ಟೋರಿ’ (The Taj Story) ಹಿಂದಿ ಚಲನಚಿತ್ರದ ವಿರುದ್ಧ ಸಲ್ಲಿಸಲಾದ 2 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (PIL) ವಜಾಗೊಳಿಸಿದೆ. ಈ ಚಲನಚಿತ್ರದಲ್ಲಿ ಮಾಡಲಾದ ಕೆಲವು ಪ್ರತಿಪಾದನೆಗಳು ಇತಿಹಾಸಕ್ಕೆ ಸಂಬಂಧಿಸಿಲ್ಲ ಮತ್ತು ಇತಿಹಾಸದ ಬಗ್ಗೆ ಸ್ವತಂತ್ರ ಅಭಿಪ್ರಾಯಗಳು ಅಸ್ತಿತ್ವದಲ್ಲಿವೆ ಎಂದು ಅರ್ಜಿದಾರರು ಹೇಳಿಕೊಂಡಿದ್ದರು.
ಇತಿಹಾಸಕ್ಕೆ ಸಂಬಂಧಿಸಿದಂತೆ ಸಹ ಇಬ್ಬರು ಇತಿಹಾಸಕಾರರ ಅಭಿಪ್ರಾಯಗಳು ವಿಭಿನ್ನವಾಗಿರಬಹುದು!
ಉಚ್ಚ ನ್ಯಾಯಾಲಯವು,
ನಾವು ‘ಸೂಪರ್ ಸೆನ್ಸಾರ್ ಬೋರ್ಡ್’ ಅಲ್ಲ. ನೀವು ‘ಇದು ಇತಿಹಾಸವಲ್ಲ’ ಎಂದು ಹೇಳುತ್ತಿದ್ದೀರಿ; ಆದರೆ ಯಾವುದೇ ಕಲಾಕೃತಿಯಲ್ಲಿ, ಲೇಖಕ ಅಥವಾ ನಿರ್ದೇಶಕ ‘ಇದು ಇತಿಹಾಸ ಹೌದು/ಅಲ್ಲ’ ಎಂದು ತೋರಿಸಲು ಕಡ್ಡಾಯವಾಗಿ ‘ಡಿಸ್ಕ್ಲೈಮರ್’ (ಹಕ್ಕು ನಿರಾಕರಣೆಯ ಹೇಳಿಕೆ ಅಥವಾ ಸ್ಪಷ್ಟ ಎಚ್ಚರಿಕೆ) ನೀಡುತ್ತಾರೆಯೇ? ಇತಿಹಾಸಕ್ಕೆ ಸಂಬಂಧಿಸಿದಂತೆ ಸಹ ಇಬ್ಬರು ಇತಿಹಾಸಕಾರರ ಅಭಿಪ್ರಾಯಗಳು ವಿಭಿನ್ನವಾಗಿರಬಹುದು; ಆದರೆ ಯಾವ ಇತಿಹಾಸಕಾರರ ಅಭಿಪ್ರಾಯ ಸರಿಯಾಗಿದೆ ಎಂದು ನಾವು ನಿರ್ಧರಿಸುತ್ತೇವೆಯೇ? ನಿರ್ಧಾರ ತೆಗೆದುಕೊಳ್ಳಲು ನಾವು ಯಾವ ಮಾನದಂಡಗಳನ್ನು ಬಳಸಬಹುದು? ಅರ್ಜಿದಾರರು ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಸಂಶೋಧನೆ ಮಾಡಿಲ್ಲ, ಮತ್ತು ನಟರನ್ನು (ಉದಾಹರಣೆಗೆ ಚಿತ್ರದ ಮುಖ್ಯ ಪಾತ್ರದಲ್ಲಿರುವ ಪರೇಶ್ ರಾವಲ್ ಅವರನ್ನು) ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡುವುದು ಸರಿಯಲ್ಲ. ನಾಳೆ ಅವಹೇಳನದ ಕುರಿತು ಅರ್ಜಿ ಸಲ್ಲಿಸಿದರೆ, ನ್ಯಾಯವಾದಿಗಳನ್ನೂ ಸಹ ಪ್ರತಿವಾದಿಯನ್ನಾಗಿ ಮಾಡಬೇಕೇ? ಅವರು ವೃತ್ತಿಪರ ನಟರು, ಕಥೆಗೆ ಅವರು ಜವಾಬ್ದಾರರಲ್ಲ.
ಅಂತಿಮವಾಗಿ ಉಚ್ಚ ನ್ಯಾಯಾಲಯ ಅರ್ಜಿದಾರರಿಗೆ ತಮ್ಮ ಅರ್ಜಿಗಳನ್ನು ಹಿಂಪಡೆಯಲು ಅನುಮತಿ ನೀಡಿತು ಮತ್ತು ‘ಸಿನಿಮ್ಯಾಟೋಗ್ರಾಫ್ ಆಕ್ಟ್, 1952’ ಅಡಿಯಲ್ಲಿ ಕೇಂದ್ರ ಸರಕಾರಕ್ಕೆ ದೂರು ನೀಡಲು ಸಲಹೆ ನೀಡಿತು. ‘ಒಂದು ವೇಳೆ ಕೇಂದ್ರ ಸರಕಾರಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದರೆ, ಆದಷ್ಟು ಬೇಗ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಸಹ ಉಚ್ಚ ನ್ಯಾಯಾಲಯ ಆದೇಶ ನೀಡಿತು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !