ನಿಮಗೆ ಊಟ ಸಿಗುವುದಿಲ್ಲ, ಎದ್ದು ಹೋಗಿ : ಮುಸಲ್ಮಾನರ ವಿವಾಹ ಸಮಾರಂಭಕ್ಕೆ ಹೋದ ಹಿಂದೂ ವ್ಯಕ್ತಿಗೆ ಅವಮಾನ! : Muslim Marriage Hindu Man Insulted

ಕರ್ನಾಟಕದ ನೆಲಮಂಗಲದಲ್ಲಿ ಮುಸ್ಲಿಂ ಮದುವೆಗೆ ಬಂದಿದ್ದ ಹಿಂದೂ ವ್ಯಕ್ತಿಯೊಬ್ಬನಿಗೆ ಅವಮಾನ!

ಮುಸ್ಲಿಮರು ಮದುವೆ ಸಮಾರಂಭಕ್ಕೆ ಆಹ್ವಾನಿಸುವ ಮೂಲಕ ಹಿಂದೂಗಳನ್ನು ಅವಮಾನಿಸುತ್ತಾರೆ! (ಚಿತ್ರ ಕೃಪೆ: ಪಬ್ಲಿಕ್ ಟಿವಿ)

ನೆಲಮಂಗಲ – ಅಕ್ಟೋಬರ್ ೨೬ ರಂದು ಇಲ್ಲಿನ ಒಂದು ಖಾಸಗಿ ಸಭಾಂಗಣದಲ್ಲಿ ಸಮೀವುಲ್ಲಾ ಕುಟುಂಬದ ಮುಜಾಮಿಲ್ ಪಾಷಾ ಮತ್ತು ಸಾನಿಯಾ ಅವರ ವಿವಾಹ ನಡೆಯಿತು. ಈ ವೇಳೆ ಸಾನಿಯಾ ಅವರ ಕುಟುಂಬದ ಸ್ನೇಹಿತರಾದ ರಾಜು ಎಂಬ ಹಿಂದೂ ವ್ಯಕ್ತಿಗೆ ಆಮಂತ್ರಣ ಸಿಕ್ಕಿದ್ದರಿಂದ ವಿವಾಹ ಸಮಾರಂಭಕ್ಕೆ ಹೋಗಿದ್ದರು. ರಾಜು ಅವರು ಊಟಕ್ಕೆ ಕುಳಿತಿದ್ದಾಗ, ಸಮೀವುಲ್ಲಾ ಎಂಬ ವ್ಯಕ್ತಿ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದು ‘ಆಹ್ವಾನವಿಲ್ಲದೆ ಮದುವೆಗೆ ಏಕೆ ಬಂದಿದ್ದೀಯಾ? ನಿನಗೆ ಊಟ ಸಿಗುವುದಿಲ್ಲ. ಎದ್ದು ನಿಲ್ಲು’ ಎಂದು ಗದರಿಸಿ ಅವರನ್ನು ಹಿಂದಕ್ಕೆ ಕಳುಹಿಸಿದರು.

(ಸೌಜನ್ಯ – Tv9 Kannada)

ಈ ಸಮಯದಲ್ಲಿ ಅಲ್ಲಿ ಹಾಜರಿದ್ದ ಒಬ್ಬ ವ್ಯಕ್ತಿ, ‘ಹೀಗೆ ಮಾಡಬೇಡಿ. ಊಟಕ್ಕೆ ಕುಳಿತವರನ್ನು ಎಬ್ಬಿಸುವುದು ಸರಿಯಲ್ಲ. ಹಿಂದೂಗಳು ಬರಬಾರದು ಎಂದು ಅನಿಸಿದ್ದರೆ, ನೀವು ಅವರನ್ನು ಕರೆಯಬಾರದಿತ್ತು. ಊಟಕ್ಕೆ ಕುಳಿತವರನ್ನು ಎಬ್ಬಿಸುವುದು ಮಾನವೀಯತೆ ಅಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿರುವುದು ವೈರಲ್ ಆದ ವೀಡಿಯೋದಲ್ಲಿ ಕಂಡುಬಂದಿದೆ.

ಸಂಪಾದಕೀಯ ನಿಲುವು

‘ಹಿಂದೂ-ಮುಸಲ್ಮಾನ್ ಭಾಯಿ ಭಾಯಿ’ ಎಂದು ಹೇಳುವ ಕಪಟಿ ಸರ್ವಧರ್ಮ ಸಮಭಾವವಾದಿಗಳು ಈ ಬಗ್ಗೆ ಮಾತನಾಡುವುದಿಲ್ಲ ಎಂಬುದನ್ನು ಗಮನಿಸಿ!