
ನವದೆಹಲಿ – ‘ದೆಹಲಿಯಲ್ಲಿ ನಾನು ಮುಕ್ತವಾಗಿ ವಾಸಿಸುತ್ತಿದ್ದೇನೆ; ಆದರೆ ಮನೆಗೆ (ಬಾಂಗ್ಲಾದೇಶಕ್ಕೆ) ಹಿಂದಿರುಗಲು ಇಷ್ಟಪಡುತ್ತೇನೆ’, ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ ಹಸೀನಾ ಅವರು ಹೇಳಿಕೆ ನೀಡಿದ್ದಾರೆ ಎಂದು ‘ಎನ್‌ಡಿಟಿವಿ’ ಸುದ್ದಿವಾಹಿನಿ ವರದಿ ಮಾಡಿದೆ. ಬಾಂಗ್ಲಾದೇಶದಲ್ಲಿ ಆಗಸ್ಟ್ 2024 ರಲ್ಲಿ ನಡೆದ ದಂಗೆಯ ನಂತರ ಶೇಖ ಹಸೀನಾ ಅವರು ದೇಶವನ್ನು ತೊರೆದಿದ್ದರು. ಅಂದಿನಿಂದ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಭಾರತದಲ್ಲಿ ಆಶ್ರಯ ಪಡೆದ ನಂತರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ; ಆದರೆ ಇದೀಗ ಮೊದಲ ಬಾರಿಗೆ ಈ ಮೇಲಿನ ಹೇಳಿಕೆ ನೀಡಿದ್ದಾರೆ.
ಶೇಖ ಹಸೀನಾ ಅವರು ಮಾತು ಮುಂದುವರೆಸಿ, ತಮ್ಮ ಪಕ್ಷವನ್ನು ಹೊರತುಪಡಿಸಿ ನಡೆದ ಚುನಾವಣೆಗಳ ನಂತರ ದೇಶದಲ್ಲಿ ರಚನೆಯಾದ ಯಾವುದೇ ಸರಕಾರದ ನೇತೃತ್ವದಲ್ಲಿ ತಾವು ಬಾಂಗ್ಲಾದೇಶಕ್ಕೆ ಹಿಂದಿರುಗುವುದಿಲ್ಲ ಎಂದು ಹೇಳಿದ್ದಾರೆ. ಹಾಗೂ, ಸದ್ಯಕ್ಕೆ ಭಾರತದಲ್ಲಿಯೇ ಇರಲು ಯೋಜಿಸಿದ್ದಾರೆ.
ನಮಗೆ ಚುನಾವಣೆ ಎದುರಿಸಲು ಅನುಮತಿ ನೀಡಲಾಗುವುದು
ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನುಸ್ ಅವರು ಫೆಬ್ರವರಿ 2026 ರಲ್ಲಿ ಚುನಾವಣೆ ನಡೆಸುವ ಭರವಸೆ ನೀಡಿದ್ದಾರೆ; ಆದರೆ ಶೇಖ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಮೇಲೆ ನಿಷೇಧ ಹೇರಲಾಗಿದೆ. ಈ ನಿಷೇಧದ ಬಗ್ಗೆ ಶೇಖ ಹಸೀನಾ ಅವರು, ಲಕ್ಷಾಂತರ ಜನರು ಅವಾಮಿ ಲೀಗ್‌ಗೆ ಬೆಂಬಲ ನೀಡುತ್ತಾರೆ; ಆದರೆ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಅವರು ಮತ ಚಲಾಯಿಸುವುದಿಲ್ಲ. ನಿಮಗೆ ಕಾರ್ಯನಿರ್ವಹಿಸುವ ರಾಜಕೀಯ ವ್ಯವಸ್ಥೆ ಬೇಕಿದ್ದರೆ, ನೀವು ಲಕ್ಷಾಂತರ ಜನರನ್ನು ಮತದಾನದಿಂದ ವಂಚಿತಗೊಳಿಸಲು ಸಾಧ್ಯವಿಲ್ಲ. ನಾವು ಅವಾಮಿ ಲೀಗ್ ನ ಮತದಾರರಿಗೆ ಬೇರೆ ಪಕ್ಷಗಳನ್ನು ಬೆಂಬಲಿಸಲು ಹೇಳುತ್ತಿಲ್ಲ; ಏಕೆಂದರೆ ಸತ್ಯವು ಗೆಲ್ಲುತ್ತದೆ ಮತ್ತು ನಮಗೆ ಚುನಾವಣೆ ಎದುರಿಸಲು ಅನುಮತಿ ನೀಡಲಾಗುವುದು ಎಂಬ ಭರವಸೆ ನಮಗಿನ್ನೂ ಇದೆ ಎಂದು ಹೇಳಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!