ಜಾವೇದ್ ವಿರುದ್ಧ ದೂರು ದಾಖಲು !

ಮುಂಬಯಿ – ಭಾಜಪ ನಾಯಕಿ ಮತ್ತು ಮಾಜಿ ಸಂಸದೆ ಸೌ. ನವನೀತ್ ರಾಣಾ ಅವರ ವಿಳಾಸಕ್ಕೆ ಜಾವೇದ್ ಎಂಬ ವ್ಯಕ್ತಿಯು ಬೆದರಿಕೆ ಪತ್ರವನ್ನು ಕಳುಹಿಸಿದ್ದಾನೆ. ಅದರಲ್ಲಿ ಆತ ‘ನನ್ನ ಬಳಿ ೫೦ ಜನರ ಗ್ಯಾಂಗ್ ಇದೆ. ನಿನ್ನ ಮೇಲೆ ಗ್ಯಾಂಗ್ ರೇಪ್ (ಸಾಮೂಹಿಕ ಅತ್ಯಾಚಾರ) ಮಾಡಿ ಕೊಲ್ಲುತ್ತೇವೆ’ ಎಂದು ಬೆದರಿಕೆ ಹಾಕಿದ್ದಾನೆ. ಈ ಕುರಿತು ನವನೀತ್ ರಾಣಾ ಅವರ ಆಪ್ತ ಸಹಾಯಕರು ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ರಾಜಾಪೇಠ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ರಾಜಾಪೇಠ ಪೊಲೀಸರ ತನಿಖಾಧಿಕಾರಿಗಳು, ಪ್ರಸ್ತುತ ಪತ್ರದಲ್ಲಿನ ವಿಳಾಸ ಮತ್ತು ಅಂಚೆ ಮೊಹರನ್ನು ಪರಿಶೀಲಿಸಲಾಗುತ್ತಿದೆ. ವೇಗದ ಅಂಚೆಯ ಮೂಲಕ ಬಂದಿರುವ ಆ ಪತ್ರದ ‘ಪೋಸ್ಟಲ್ ಟ್ರೇಸಿಂಗ್’ (ಅಂಚೆಯ ಜಾಡು ಹಿಡಿಯುವುದು), ಅಂಚೆ ಅಧಿಕಾರಿಯ ದಾಖಲೆಗಳು ಮತ್ತು ಸಂಬಂಧಿಸಿದ ಅಂಚೆ ಕಚೇರಿಯ ‘ಸಿಸಿಟಿವಿ’ ಮೂಲಕ ಅದನ್ನು ಕಳುಹಿಸಿದವರನ್ನು ಪತ್ತೆ ಮಾಡಲಾಗುವುದು. ಪತ್ರದಲ್ಲಿನ ಶಾಯಿ, ಹಸ್ತಾಕ್ಷರ ಮತ್ತು ಕಾಗದದ ನ್ಯಾಯವೈಜ್ಞಾನಿಕ ವಿಶ್ಲೇಷಣೆ (ಫೊರೆನ್ಸಿಕ್ ಟೆಸ್ಟಿಂಗ್) ಗಾಗಿ ಮಾದರಿಗಳನ್ನು ಕಳುಹಿಸಲಾಗುವುದು, ಎಂದು ಹೇಳಿದ್ದಾರೆ.
ಈ ಘಟನೆಯಿಂದಾಗಿ ಸೌ. ನವನೀತ್ ರಾಣಾ ಅವರ ಭದ್ರತೆಯನ್ನು ಹೆಚ್ಚಿಸಲಾಗುವುದು. ಸಾಮಾಜಿಕ ಮತ್ತು ರಾಜಕೀಯ ನಾಯಕರು ಇಂತಹ ಬೆದರಿಕೆಗಳನ್ನು ಖಂಡಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಅನುಮಾನ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ನಾಗರಿಕರು ಮತ್ತು ಸಾರ್ವಜನಿಕ ವ್ಯಕ್ತಿಗಳಿಗೆ ಬೆದರಿಕೆ ಹಾಕುವ ಯಾವುದೇ ಘಟನೆಯ ವಿರುದ್ಧ ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡುವಂತೆ ಸಹ ಮನವಿ ಮಾಡಲಾಗುತ್ತಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ