
ಗೋರಖ್‌ಪುರ (ಉತ್ತರ ಪ್ರದೇಶ) – ಕುಖ್ಯಾತ ಗೂಂಡಾ ದಾವೂದ್ ಇಬ್ರಾಹಿಂ ಭಯೋತ್ಪಾದಕನಲ್ಲ. ಬಾಂಬ್ ಸ್ಫೋಟ ಅಥವಾ ಯಾವುದೇ ಪಿತೂರಿಯಲ್ಲಿ ಆತನ ಹೆಸರು ಎಂದಿಗೂ ಬೆಳಕಿಗೆ ಬಂದಿಲ್ಲ. ಮಾಧ್ಯಮಗಳು ಮತ್ತು ರಾಜಕೀಯ ಶಕ್ತಿಗಳು ಹಲವು ವರ್ಷಗಳಿಂದ ದಾವೂದ್‌ನನ್ನು ತಪ್ಪಾಗಿ ಸಾರ್ವಜನಿಕರ ಮುಂದೆ ಬಿಂಬಿಸಿವೆ, ಎಂದು ಮಾಜಿ ನಟಿ ಮಮತಾ ಕುಲಕರ್ಣಿ ಅವರು ಗೋರಖ್‌ಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದರು.
ಈ ಹಿಂದೆ ಹಿಂದಿ ಚಿತ್ರರಂಗದಲ್ಲಿ ನಟಿಯಾಗಿ ಕೆಲಸ ಮಾಡಿದ್ದ ಮಮತಾ ಕುಲಕರ್ಣಿ ಅವರ ಸಂಬಂಧವು ಗೂಂಡಾ ದಾವೂದ್ ಇಬ್ರಾಹಿಂ ಅವರೊಂದಿಗೆ ಸೇರಿಸಿದ ನಂತರ ಅವರು ಭಾರತವನ್ನು ತೊರೆದು ದುಬೈಗೆ ಹೋಗಿದ್ದರು. ಪ್ರಯಾಗರಾಜ್‌ನ ಮಹಾಕುಂಭದ ಸಮಯದಲ್ಲಿ 25 ವರ್ಷಗಳ ನಂತರ ಭಾರತಕ್ಕೆ ಮರಳಿದ ನಂತರ ದೀಕ್ಷೆ ಪಡೆದು ಅವರು ಕಿನ್ನರ್ ಅಖಾಡದ ಮಹಾಮಂಡಲೇಶ್ವರರಾಗಿದ್ದರು. ಈ ವಿಷಯ ವಿವಾದಕ್ಕೊಳಗಾದ ನಂತರ ಅವರು ಆ ಹುದ್ದೆಯನ್ನು ತ್ಯಜಿಸಿದರು; ಆದರೆ ನಂತರ ಅದನ್ನು ಮತ್ತೆ ನೀಡಲಾಯಿತು. ಅವರ ಈಗಿನ ಹೆಸರು ‘ಯಮಾಯಿ ಮಮತಾ ನಂದಗಿರಿ’ ಎಂದಿದೆ. ‘ಮಮತಾ ಕುಲಕರ್ಣಿ ಅವರು ಮಾದಕ ಪದಾರ್ಥಗಳ ಕಳ್ಳಸಾಗಣೆದಾರ ವಿಕ್ಕಿ ಗೋಸ್ವಾಮಿ ಅವರನ್ನು ವಿವಾಹವಾಗಿದ್ದರು’ ಎಂದೂ ಹೇಳಲಾಗುತ್ತದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!