ಬೀದರ್ ನಲ್ಲಿ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ 4 ಶಿಕ್ಷಕರಿಗೆ ನೋಟಿಸ್! : Teachers Get Show Cause Notice

ದಲಿತ ಸೇನಾ ನಾಯಕರಿಂದ ದೂರು

ಬೀದರ್ – ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ದ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ನಾಲ್ಕು ಶಿಕ್ಷಕರಿಗೆ ಔರಾದ್‌ನ ಬ್ಲಾಕ್ ಶಿಕ್ಷಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.

ಅಕ್ಟೋಬರ್ 7 ಮತ್ತು 13 ರಂದು, ಸಂಘದ ಶತಮಾನೋತ್ಸವದ ನಿಮಿತ್ತ ಔರಾದ್‌ನಲ್ಲಿ ಸಂಘದ ಪಥಸಂಚಲನ ನಡೆದಿತ್ತು. ಇದರಲ್ಲಿ ಮಹಾದೇವ, ಶಾಲಿವಾನ್, ಪ್ರಕಾಶ ಮತ್ತು ಸತೀಶ್ ಎಂಬ ಶಿಕ್ಷಕರು ಭಾಗವಹಿಸಿದ್ದರು. ಈ ಸಂಬಂಧ ದಲಿತ ಸೇನಾ ನಾಯಕರು ಅಕ್ಟೋಬರ್ 27 ರಂದು ಬ್ಲಾಕ್ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು ಮತ್ತು ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ದೂರಿನ ಮರುದಿನವೇ ಬ್ಲಾಕ್ ಶಿಕ್ಷಣಾಧಿಕಾರಿಗಳು ಈ 4 ಶಿಕ್ಷಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?

1. ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನಲ್ಲಿ ಅಕ್ಟೋಬರ್ 7 ಮತ್ತು 13 ರಂದು ನಡೆದ ಸಂಘದ ಪಥಸಂಚಲನದಲ್ಲಿ ನೀವು ಭಾಗವಹಿಸಿದ್ದೀರಿ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

2. ನೀವು ಸರಕಾರಿ ನೌಕರರಾಗಿರುವುದರಿಂದ ಯಾವುದೇ ರೀತಿಯ ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ. ಸಂಘದ ಪಥಸಂಚಲನದಲ್ಲಿ ಭಾಗವಹಿಸುವ ಮೂಲಕ ನೀವು ಸರಕಾರಿ ಸೇವಾ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ. ಇದರಿಂದ, ನಿಮಗೆ ಈ ನೋಟಿಸ್ ತಲುಪಿದ ನಂತರ, ಕಾರಣ ಕೇಳುವ ನೋಟಿಸಿಗೆ ಲಿಖಿತ ವಿವರಣೆಯನ್ನು ನೀಡಿ, ಖುದ್ದಾಗಿ ಬಂದು ಕಚೇರಿಯಲ್ಲಿ ಸಲ್ಲಿಸಬೇಕು. ಇಲ್ಲದಿದ್ದರೆ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957 ರ ಪ್ರಕಾರ ಏಕಪಕ್ಷೀಯ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಸಂಪಾದಕೀಯ ನಿಲುವು

  • ಕಾನೂನಿನ ಪ್ರಕಾರ ಇಂತಹ ಯಾವುದೇ ನಿಷೇಧ ಇಲ್ಲದಿದ್ದರೂ ಸಹ, ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಉದ್ದೇಶಪೂರ್ವಕವಾಗಿ ಸಂಘದ ಸ್ವಯಂಸೇವಕರನ್ನು ಪೀಡಿಸಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಪ್ರತ್ಯುತ್ತರವಾಗಿ, ಭಾಜಪ ಆಡಳಿತವಿರುವ ರಾಜ್ಯಗಳಲ್ಲಿ ಸರಕಾರಿ ನೌಕರರಾಗಿರುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೀಡಿಸಿದರೆ, ಅದು ಕಾಂಗ್ರೆಸ್‌ಗೆ ಒಪ್ಪಿಗೆ ಆಗಿದೆಯೇ?
  • ಜಾತಿಯ ಹೆಸರಿನಲ್ಲಿ ಸಂಘಟನೆಗಳನ್ನು ನಡೆಸುವವರು ಸಂಘವನ್ನು ವಿರೋಧಿಸುತ್ತಾರೆ ಎಂಬುದನ್ನು ಗಮನದಲ್ಲಿಡಿ!