ಪನವೇಲ್‌ನಲ್ಲಿ ಹಿಂದೂ ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಿದ ಮತಾಂಧನ ಬಂಧನ !

ಮತಾಂಧ ೧ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದ !

ಪನವೇಲ್ – ಇಲ್ಲಿನ ಕುಂಡೆವಹಾಳ ಗ್ರಾಮದ ಶಂಕಿತ ಆರೋಪಿ ಮಹಮ್ಮದ್ ಸಮೀರ್ ಅಲ್ಲಾವುದ್ದೀನ್ ಅನ್ಸಾರಿ (ವಯಸ್ಸು ೨೩ ವರ್ಷ, ನಿವಾಸಿ ಕುಂಡೆವಹಾಳ) ಕಳ್ಳತನದ ಉದ್ದೇಶದಿಂದ ಮನೆಯೊಳಗೆ ನುಗ್ಗಿ, ಒಬ್ಬರೇ ಇದ್ದ ಸಂಗೀತ ನಾಮದೇವ್ ಮ್ಹಾತ್ರೆ (ವಯಸ್ಸು ೫೫) ಅವರ ಗಂಟಲನ್ನು ಹಿಸುಕಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅವರ ಚಿನ್ನದ ಸರ, ಮಂಗಳಸೂತ್ರ, ಉಂಗುರಗಳು ಮತ್ತು ಕಿವಿಯೋಲೆಗಳು ಸೇರಿದಂತೆ ಸುಮಾರು ೧ ಲಕ್ಷಕ್ಕೂ ಹೆಚ್ಚು ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದನು. (ಮತಾಂಧರ ಕ್ರೌರ್ಯವನ್ನು ಗಮನಿಸಿ ! ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆಯನ್ನು ಗುರಿಯಾಗಿಸಿ ಕೇವಲ ಲೂಟಿ ಮಾಡದೇ, ಅವಳನ್ನು ಕ್ರೂರವಾಗಿ ಹತ್ಯೆ ಕೂಡ ಮಾಡಿದ್ದಾನೆ ! – ಸಂಪಾದಕರು)

ಸಂಗೀತ ಅವರ ಮಗ ಸನಿ ಮ್ಹಾತ್ರೆ ಅವರ ದೂರಿನ ಮೇರೆಗೆ ಕೊಲೆ ಮತ್ತು ಕಳ್ಳತನದ ಪ್ರಕರಣ ದಾಖಲಿಸಲಾಗಿದೆ. ನಂತರ ಅನ್ಸಾರಿಯನ್ನು ಬಂಧಿಸಲಾಯಿತು.

ಬಂಧನದ ನಂತರದ ವಿಚಾರಣೆಯಲ್ಲಿ ಅನ್ಸಾರಿ, ‘ಮೃತ ಮಹಿಳೆ ಸಂಗೀತಾಗೆ ೪೦ ಸಾವಿರ ರೂಪಾಯಿ ಸಾಲ ನೀಡಿದ್ದೆ’ ಎಂದು ಹೇಳಿದ್ದಾನೆ. ಪದೇ ಪದೇ ಹಣ ಕೇಳಿದರೂ ಆಕೆ ಹಿಂದಿರುಗಿಸದ ಕಾರಣ ಕೋಪದಿಂದ ಸಂಗೀತ ಅವರ ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದಾಗಿ ಆತ ಹೇಳಿದ್ದಾನೆ. ಆರೋಪಿಯು ಮಹಿಳೆಯ ಮನೆಯ ಚಲನವಲನಗಳ ಬಗ್ಗೆ ಪರಿಚಿತನಾಗಿದ್ದನು. ಹಾಗಾಗಿ ಇದು ಪೂರ್ವನಿಯೋಜಿತ ಅಪರಾಧವಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರು ೪೦ ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಈ ಘಟನೆಯಿಂದಾಗಿ ಕುಂಡೆವಹಾಳ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರದೇಶದ ನಾಗರಿಕರು ವಿಶೇಷವಾಗಿ ಮಹಿಳೆಯರು ಭಯಭೀತರಾಗಿದ್ದಾರೆ. ರಾತ್ರಿ ವೇಳೆ ಗಸ್ತನ್ನು ಹೆಚ್ಚಿಸುವಂತೆ ಸ್ಥಳೀಯರು ಪೊಲೀಸರನ್ನು ಒತ್ತಾಯಿಸುತ್ತಿದ್ದಾರೆ.