ತಾಲಿಬಾನ್ – ಪಾಕಿಸ್ತಾನದ ನಡುವಿನ ಮಾತುಕತೆ ವಿಫಲ

ಇಸ್ತಾಂಬುಲ್ (ಟರ್ಕಿ) – ಪಾಕಿಸ್ತಾನದೊಂದಿಗೆ ಕದನ ವಿರಾಮದ ಕುರಿತು ನಡೆಯುತ್ತಿದ್ದ ಸಭೆಯಲ್ಲಿ, ತಾಲಿಬಾನ್ ಸ್ಪಷ್ಟವಾಗಿ ಹೇಳಿದ್ದೇನೆಂದರೆ, ಅಫ್ಘಾನಿಸ್ತಾನದ ಯಾವುದೇ ಭಾಗದ ಮೇಲೆ ಆಕ್ರಮಣವಾದರೆ ಇಸ್ಲಾಮಾಬಾದ್ ಅನ್ನು ನಾಶಮಾಡಲಾಗುವುದು ಎಂದು ಬೆದರಿಕೆ ಹಾಕಿದೆ. ತಾಲಿಬಾನ್ ನ ಈ ಬೆದರಿಕೆಯ ನಂತರ, ತಾಲಿಬಾನ್ ಮತ್ತು ಪಾಕಿಸ್ತಾನದ ನಡುವಿನ ಶಾಂತಿ ಮಾತುಕತೆ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ.
1. ತಾಲಿಬಾನ್ ಈ ಕುರಿತು ‘ಟೋಲೋ ನ್ಯೂಸ್’ಗೆ ಮಾಹಿತಿ ನೀಡುತ್ತಾ, ಪಾಕಿಸ್ತಾನದ ಯಾವುದೇ ಆಕ್ರಮಣಕ್ಕೆ ಪ್ರತ್ಯುತ್ತರ ನೀಡಲಾಗುವುದು ಮತ್ತು ಅಫ್ಘಾನ್ ಭೂಮಿಯ ಮೇಲೆ ಎಲ್ಲಿಯಾದರೂ ಬಾಂಬ್ ದಾಳಿ ನಡೆದರೆ ಇಸ್ಲಾಮಾಬಾದ್ ಅನ್ನು ಗುರಿಯಾಗಿಸಲಾಗುವುದು ಎಂದು ಹೇಳಿದೆ.
2. ಅಫ್ಘಾನ್ ಪ್ರತಿನಿಧಿಗಳು ಮಾತುಕತೆಗೆ ಬದ್ಧರಾಗಿದ್ದರು; ಆದರೆ ಪಾಕಿಸ್ತಾನದ ನಿಯೋಗದಲ್ಲಿ ಅಂತಹ ಬದ್ಧತೆ ಕಾಣಲಿಲ್ಲ ಮತ್ತು ಅವರು ಇಸ್ಲಾಮಿಕ್ ರಾಷ್ಟ್ರಗಳಿಂದ ಪಾಕಿಸ್ತಾನದ ಸುರಕ್ಷತೆಯನ್ನು ಖಚಿತಪಡಿಸುವಂತೆ ಬೇಡಿಕೆ ಇಟ್ಟರು ಎಂದು ಮೂಲಗಳು ತಿಳಿಸಿವೆ.
3. ತಾಲಿಬಾನ್ ಪ್ರತಿನಿಧಿಗಳು ಈ ಕುರಿತು ಮಾತನಾಡಿ, ತೆಹ್ರೀಕ್-ಎ-ತಾಲಿಬಾನ್ ಮಾಡಿದ ಆಕ್ರಮಣವು ಪಾಕಿಸ್ತಾನದ ಆಂತರಿಕ ಸಮಸ್ಯೆಯಾಗಿದೆ. ಅದಕ್ಕೂ ತಾಲಿಬಾನ್ ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪಾದಕೀಯ ನಿಲುವುತಾಲಿಬಾನ್ ಯಾವ ರೀತಿ ಪಾಕಿಸ್ತಾನಕ್ಕೆ ನೇರವಾಗಿ ಬೆದರಿಕೆ ಹಾಕುತ್ತಿದೆಯೋ, ಆ ರೀತಿ ಅಣ್ವಸ್ತ್ರ ಹೊಂದಿರುವ ಹಾಗೂ ಭಯೋತ್ಪಾದನೆಯಿಂದ ನೊಂದಿರುವ ಭಾರತವು ಎಂದಿಗೂ ಬೆದರಿಕೆ ಹಾಕುವುದಿಲ್ಲ. ಈ ವಿಷಯವಾಗಿ ಭಾರತವು ತಾಲಿಬಾನ್ ನಿಂದ ಕಲಿಯಬೇಕು ಎಂದರೆ ತಪ್ಪಾಗಲಾರದು. |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation