ಕೆನಡಾದಲ್ಲಿ ಭಾರತೀಯ ಉದ್ಯಮಿಯ ಗುಂಡಿಕ್ಕಿ ಹತ್ಯೆ

ಒಟ್ಟಾವಾ (ಕೆನಡಾ) – ಕೆನಡಾದ ಅಬಾಟ್ಸ್‌ಫೋರ್ಡ್‌ನಲ್ಲಿ ದರ್ಶನ್ ಸಿಂಗ್ ಸಹಸಿ (68 ವರ್ಷ) ಎಂಬ ಭಾರತೀಯ ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಅವರು ಪಂಜಾಬ್‌ನ ಲೂಧಿಯಾನಾ ಜಿಲ್ಲೆಯ ದೊರಾಹಾ ಗ್ರಾಮದ ನಿವಾಸಿಯಾಗಿದ್ದರು. ಅವರು ವಿಶ್ವದ ಅತಿದೊಡ್ಡ ಬಟ್ಟೆ ಮರುಬಳಕೆ ಸಂಸ್ಥೆಗಳಲ್ಲಿ ಒಂದಾದ ‘ಕ್ಯಾನ್‌ಮ್ ಇಂಟರ್ನ್ಯಾಷನಲ್’ನ ಅಧ್ಯಕ್ಷರಾಗಿದ್ದರು. ಈ ಕೊಲೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ದರ್ಶನ್ ಸಿಂಗ್ ಮತ್ತು ಅವರ ಇಡೀ ಕುಟುಂಬ ಕೆನಡಾದಲ್ಲಿ ನೆಲೆಸಿತ್ತು. ಆರ್ಥಿಕ ನೆರವು ಮತ್ತು ಸಾಮಾಜಿಕ ಸೇವೆಗಳಿಗಾಗಿ ಸಹಸಿ ಅವರು ಸ್ಥಳೀಯ ಪಂಜಾಬಿ ಸಮುದಾಯದಲ್ಲಿಯೂ ಜನಪ್ರಿಯರಾಗಿದ್ದರು.

ದರ್ಶನ್ ಸಿಂಗ್ ಅವರ ಮಗ ಅರ್ಪಣ್ ಅವರು ತಮ್ಮ ತಂದೆಗೆ ಯಾರೊಂದಿಗೂ ವೈಷಮ್ಯ ಅಥವಾ ವಿವಾದ ಇರಲಿಲ್ಲ. ಈ ಕೊಲೆಯನ್ನು ಯಾರು ಮತ್ತು ಏಕೆ ಮಾಡಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ. ಯಾವುದೇ ಬೆದರಿಕೆಗಳು, ‘ಬ್ಲಾಕ್‌ಮೇಲ್’ ಅಥವಾ ಸುಲಿಗೆಯ ಬೇಡಿಕೆ ಇರಲಿಲ್ಲ. ಪ್ರತಿದಿನ ಯಾರಾದರೂ ಅವರ ಬಳಿ ಸಹಾಯಕ್ಕಾಗಿ ಬರುತ್ತಿದ್ದರು. ಅವರು ಎಂದಿಗೂ ಯಾರಿಗೂ ನಿರಾಕರಿಸಲಿಲ್ಲ. ಅದಕ್ಕಾಗಿಯೇ ಜನರು ಅವರನ್ನು ಗೌರವಿಸುತ್ತಿದ್ದರು, ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೆನಡಾದಲ್ಲಿ ಭಾರತೀಯರು ಅಸುರಕ್ಷಿತರಾಗಿದ್ದಾರೆ ಎಂಬುದು ಇದರಿಂದ ತಿಳಿದುಬರುತ್ತದೆ!