‘ಮುಸ್ತಫಾಬಾದ್’ ನಗರದ ಹೆಸರನ್ನು ‘ಕಬೀರ್ ಧಾಮ್’ ಎಂದು ಬದಲಾವಣೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಘೋಷಣೆ

ಲಖಿಂಪುರ ಖೇರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿನ ವಿಶ್ವ ಕಲ್ಯಾಣ ಆಶ್ರಮಕ್ಕೆ ಭೇಟಿ ನೀಡಿದ ನಂತರ, ಉತ್ತರ ಪ್ರದೇಶ ರಾಜ್ಯದ ‘ಮುಸ್ತಫಾಬಾದ್’ ನಗರದ ಹೆಸರನ್ನು ಬದಲಾಯಿಸಿ ‘ಕಬೀರ್ ಧಾಮ್’ ಎಂದು ಮರುನಾಮಕರಣ ಮಾಡುವುದಾಗಿ ಘೋಷಿಸಿದ್ದಾರೆ.

ಯೋಗಿ ಆದಿತ್ಯನಾಥ್ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಅಯೋಧ್ಯೆಯ ಹೆಸರನ್ನು ಫೈಜಾಬಾದ್, ಪ್ರಯಾಗರಾಜ್ ಹೆಸರನ್ನು ಅಲಹಾಬಾದ್ ಮತ್ತು ಕಬೀರ್ ಧಾಮ್ ಹೆಸರನ್ನು ಮುಸ್ತಫಾಬಾದ್ ಎಂದು ಇಡಲಾಗಿತ್ತು. ಜಾತ್ಯತೀತತೆಯ ಹೆಸರಿನಲ್ಲಿ ವಿರೋಧ ಪಕ್ಷದವರು ಈ ಕೆಲಸ ಮಾಡುತ್ತಿದ್ದರು; ಆದರೆ ಇದು ಕೇವಲ ಒಂದು ನಾಟಕವಾಗಿತ್ತು. ನಾವು ಈ ಸ್ಥಳಗಳ ಮೂಲ ಗುರುತನ್ನು ಪತ್ತೆ ಹಚ್ಚಿ, ಅವುಗಳ ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡಿದ್ದೇವೆ, ಎಂದು ಹೇಳಿದರು.