ಸೆಮಿಕಂಡಕ್ಟರ್ ಉದ್ಯಮದ ಕುರಿತು ರಾಜ್ಯದ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನಾಂಗೀಯ ಹೇಳಿಕೆ

ಬೆಂಗಳೂರು – ಸೆಮಿಕಂಡಕ್ಟರ್ ಉದ್ಯಮವು ಬೆಂಗಳೂರಿಗೆ ಬರಲು ಸಿದ್ಧತೆ ತೋರಿಸುತ್ತಿರುವಾಗ, ಅವು ಆಸ್ಸಾಂ ಮತ್ತು ಗುಜರಾತಿಗೆ ಏಕೆ ಹೋಗುತ್ತಿವೆ? ಕರ್ನಾಟಕಕ್ಕೆ ಬರಬೇಕಾದ ಎಲ್ಲಾ ಹೂಡಿಕೆಯನ್ನು ಕೇಂದ್ರ ಸರಕಾರವು ಗುಜರಾತಿಗೆ ತಿರುಗಿಸುತ್ತಿದೆ. ಗುಜರಾತಿನಲ್ಲಿ ಏನಿದೆ? ಅಲ್ಲಿ ಪ್ರತಿಭೆ ಇದೆಯೇ? ಆಸ್ಸಾಂನಲ್ಲಿ ಏನಿದೆ? ಅಲ್ಲಿ ಪ್ರತಿಭೆ ಇದೆಯೇ? ಕೈಗಾರಿಕೋದ್ಯಮಿಗಳು ತಮಗೆ ಕರ್ನಾಟಕ ಅಥವಾ ತಮಿಳುನಾಡಿಗೆ ಹೋಗಬೇಕೆಂದು ಸ್ವತಃ ಅರ್ಜಿ ಸಲ್ಲಿಸುತ್ತಿರುವಾಗ, ಅವರನ್ನು ಗುಜರಾತಿಗೆ ಏಕೆ ಕಳುಹಿಸಲಾಗುತ್ತಿದೆ? ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಅವರು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಕಾಂಗ್ರೆಸ್ ತನ್ನ ನಿಜ ಬಣ್ಣ ತೋರಿಸಿದೆ! – ಆಸ್ಸಾಂ ಮುಖ್ಯಮಂತ್ರಿ ಸರಮಾ

ಈ ಹೇಳಿಕೆಗೆ ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸರಮಾ ಮಾತನಾಡಿ, ಮತ್ತೊಮ್ಮೆ, ಆಸ್ಸಾಂನ ಪ್ರಗತಿಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ತನ್ನ ನಿಜ ಬಣ್ಣವನ್ನು ತೋರಿಸಿದೆ. ಕಾಂಗ್ರೆಸ್ ಅಧ್ಯಕ್ಷರ ಪುತ್ರ ಮತ್ತು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಆಸ್ಸಾಂಗೆ ಸೆಮಿಕಂಡಕ್ಟರ್ ಉದ್ಯಮವನ್ನು ಸ್ಥಾಪಿಸುವ ಹಕ್ಕಿಲ್ಲ ಎಂದು ಹೇಳುತ್ತಾರೆ. ಈ ವಿಭಜಕ ಮನಃಸ್ಥಿತಿಯನ್ನು ನಿರಾಕರಿಸಿ ಮತ್ತು ರಾಜ್ಯದ ಸರಿಯಾದ ಅಭಿವೃದ್ಧಿಗಾಗಿ ನಿಲ್ಲುವಂತೆ ನಾನು ಆಸ್ಸಾಂನ ಕಾಂಗ್ರೆಸ್ ನಾಯಕರಿಗೆ ಕರೆ ನೀಡುತ್ತೇನೆ, ಎಂದು ಹೇಳಿದರು.
ಖರ್ಗೆ ಅವರ ಈ ಆರೋಪಕ್ಕೆ ಆಸ್ಸಾಂ ಸಚಿವ ಜಯಂತ್ ಮಲ್ಲ ಬರುವಾ ಪ್ರತಿಕ್ರಿಯಿಸಿ ‘ಎಕ್ಸ್’ ನಲ್ಲಿ, ಕಾಂಗ್ರೆಸ್‌ಗೆ ಯಾವಾಗಲೂ ಆಸ್ಸಾಂನ ಅಭಿವೃದ್ಧಿ ಇಷ್ಟವಾಗುವುದಿಲ್ಲ. ರಾಜ್ಯವು ಮುನ್ನಡೆಯಲು ಪ್ರಾರಂಭಿಸಿದಾಗ, ಕಾಂಗ್ರೆಸ್ ಅದನ್ನು ಹಿಂದಕ್ಕೆ ಎಳೆಯುತ್ತದೆ. ಖರ್ಗೆ ಅವರ ಹೇಳಿಕೆ ಪ್ರತಿಯೊಬ್ಬ ಆಸ್ಸಾಮಿ ಯುವಕನಿಗೆ ಮಾಡಿದ ಘೋರ ಅವಮಾನವಾಗಿದೆ.
ಆಸ್ಸಾಂ ಸಚಿವ ಪಿಯೂಷ್ ಹಝಾರಿಕಾ ಮಾತನಾಡಿ, ಖರ್ಗೆ ಅವರ ಹೇಳಿಕೆ ಆಶ್ಚರ್ಯಕರವಲ್ಲ, ಇದು ಕಾಂಗ್ರೆಸ್ ನ ನಿಜವಾದ ಮುಖ. ಕಾಂಗ್ರೆಸ್ ಯಾವಾಗಲೂ ಆಸ್ಸಾಂ ಮತ್ತು ಈಶಾನ್ಯವನ್ನು ಕೀಳಾಗಿ ನೋಡಿದೆ. ನಮ್ಮ ಸಾಮರ್ಥ್ಯವನ್ನು ಅವಮಾನಿಸಿ ನಮ್ಮ ಅಭಿವೃದ್ಧಿಗೆ ಅಡ್ಡಿಪಡಿಸಿದೆ. ಈ ಪ್ರದೇಶದ ಬಗ್ಗೆ ಅವರ ದ್ವೇಷವು ಇತಿಹಾಸದಲ್ಲಿ ಆಳವಾಗಿ ಬೇರೂರಿದೆ ಮತ್ತು ಇಂದು ಅವರ ಮಾತುಗಳು ಅದನ್ನು ದೃಢಪಡಿಸಿವೆ. ಮಲ್ಲಿಕಾರ್ಜುನ ಖರ್ಗೆ ಅವರೇ ಒಂದು ಕಾಲದಲ್ಲಿ ಆಸ್ಸಾಂನ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಡಾ. ಭೂಪೇನ್ ಹಝಾರಿಕಾ ಅವರಿಗೆ ‘ಭಾರತ ರತ್ನ’ ನೀಡುವುದನ್ನು ವಿರೋಧಿಸಿದ್ದರು. ಆದ್ದರಿಂದ, ಖರ್ಗೆ ಕುಟುಂಬದಲ್ಲಿ ಆಸ್ಸಾಂ ವಿರೋಧಿ ಭಾವನೆಗಳು ಆಳವಾಗಿ ಬೇರೂರಿರುವುದು ಸ್ಪಷ್ಟವಾಗಿದೆ.
ಸಂಪಾದಕೀಯ ನಿಲುವುಇಂತಹ ಹೇಳಿಕೆ ನೀಡಿರುವ ಖರ್ಗೆ ವಿರುದ್ಧ ಪ್ರಕರಣ ದಾಖಲಿಸಬೇಕು. ದೇಶದಲ್ಲಿ ಇಂತಹ ತಾರತಮ್ಯ ಮಾಡುವ ಪ್ರಯತ್ನವನ್ನು ದೇಶದ್ರೋಹದ ಅಡಿಯಲ್ಲಿ ದಾಖಲಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!