ಇದು ‘ಲವ್ ಜಿಹಾದ್’ನ ಒಂದು ರೂಪವೇ ಆಗಿದೆ! – ವಿಶ್ವ ಹಿಂದೂ ಪರಿಷತ್

ಮುಂಬಯಿ – ಬೋರಿವಲಿಯ ೨೧ ವರ್ಷದ ಯುವತಿಯೊಬ್ಬಳು ತನ್ನ ಮುಸ್ಲಿಂ ಪ್ರೇಮಿ ಶಾಹಿದ್ ಶೇಖ್ ಜೊತೆ ಮದುವೆಯಾಗದೆ ‘ರಿಲೇಶನ್‌ಶಿಪ್ ಅಗ್ರಿಮೆಂಟ್’ (ಸಂಬಂಧದ ಒಪ್ಪಂದ) ಮಾಡಿಕೊಂಡಿದ್ದಾಳೆ. ಇದನ್ನು ವಿಶ್ವ ಹಿಂದೂ ಪರಿಷತ್ ‘ಲವ್ ಜಿಹಾದ್’ನ ಒಂದು ರೂಪ ಎಂದು ಆರೋಪಿಸಿದೆ. (ಭವಿಷ್ಯದಲ್ಲಿ ಇಂತಹ ವಿಧಾನಗಳನ್ನು ಬಳಸಿಕೊಂಡು ಒಪ್ಪಂದಗಳು ನಡೆದರೆ ಆಶ್ಚರ್ಯವೇನಿಲ್ಲ! – ಸಂಪಾದಕರು) ಯುವತಿಯ ಸಂತ್ರಸ್ತ ತಾಯಿ ಈ ಪ್ರಕರಣದ ಕುರಿತು ಒಂದು ಪ್ರಸಿದ್ಧ ಸುದ್ದಿವಾಹಿನಿಯ ಮುಂದೆ ವಿಷಯ ಬಹಿರಂಗಪಡಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.
೧. ‘ನನಗೆ ನನ್ನ ಮಗಳು ಬೇಕು, ನನಗೆ ಕೇವಲ ನನ್ನ ಮಗಳು ಮಾತ್ರ ವಾಪಸ್ ಬೇಕು ಎಂದು ನಾನು ಎಲ್ಲರಿಗೂ ಹೇಳುತ್ತಿದ್ದೇನೆ’ ಎಂದು ಆಕೆಯ ತಾಯಿ ಹೇಳಿದರು. ‘ಮುಸ್ಲಿಂ ಯುವಕನು ಯುವತಿಯನ್ನು ಅವಳ ತಾಯಿಯ ವಿರುದ್ಧ ಪ್ರೇರೇಪಿಸಿದ್ದಾನೆ. ಅದರಿಂದ ಆ ಯುವತಿ, ‘ನನಗೆ ತಾಯಿಯ ಮುಖವನ್ನೂ ನೋಡಲು ಇಷ್ಟವಿಲ್ಲ’ ಎಂದು ಹೇಳುತ್ತಾಳೆ’ ಎಂದು ಸಹ ಆಕೆಯ ತಾಯಿ ಸುದ್ದಿವಾಹಿನಿ ಪ್ರತಿನಿಧಿಗೆ ತಿಳಿಸಿದರು. (ಹಾಗಾದರೆ, ಮುಸ್ಲಿಂ ಯುವಕನು ಆ ಯುವತಿಯನ್ನು ವಶಪಡಿಸಿಕೊಂಡಿದ್ದಾನೆ ಎಂಬುದು ಖಚಿತ! – ಸಂಪಾದಕರು)
೨. ಮಾಲಾಡ್‌ನಲ್ಲಿ ಓದುತ್ತಿದ್ದಾಗ ಯುವತಿಗೆ ಶಾಹಿದ್ ಶೇಖ್‌ನ ಪರಿಚಯವಾಗಿತ್ತು. ಅವನು ಮುಸ್ಲಿಂ ಆಗಿದ್ದರಿಂದ ಆಕೆಯ ಮನೆಯವರು ವಿರೋಧಿಸಿದ್ದರು; ಆದರೂ ಅವಳು ಅವನೊಂದಿಗೆ ಓಡಿಹೋಗಿ ಒಪ್ಪಂದ ಮಾಡಿಕೊಂಡಳು ಮತ್ತು ಆ ಒಪ್ಪಂದದ ಪ್ರತಿಯನ್ನು ತನ್ನ ತಾಯಿಯ ಮೊಬೈಲ್‌ಗೆ ಕಳುಹಿಸಿದಳು.
೩. ಈ ಹಿಂದೆ ಕೂಡ ಯುವತಿ ಒಮ್ಮೆ ಓಡಿಹೋಗಿದ್ದಳು; ಆದರೆ ಅವಳಿಗೆ ಸಮಾಧಾನಪಡಿಸಿ ಮನೆಗೆ ಕರೆತರಲಾಗಿತ್ತು; ಆದರೆ ಮತ್ತೆ ಅವಳು ಹೊರಟುಹೋಗಿದ್ದರಿಂದ, ಆಕೆಯ ಕುಟುಂಬದವರು ಅವಳನ್ನು ಹುಡುಕಲು ಅಲೆಯುತ್ತಿದ್ದಾರೆ. (ಚಿಕ್ಕಂದಿನಿಂದಲೇ ಮಕ್ಕಳಿಗೆ ಧರ್ಮಶಿಕ್ಷಣ ನೀಡಿದರೆ ಈ ಪರಿಸ್ಥಿತಿ ಉದ್ಭವಿಸುವುದಿಲ್ಲ! – ಸಂಪಾದಕರು).
ಸಂಪಾದಕೀಯ ನಿಲುವುಈ ರೀತಿ ಒಪ್ಪಂದ ಮಾಡಿಕೊಂಡು ಯುವತಿಯರನ್ನು ‘ಲವ್ ಜಿಹಾದ್’ಗೆ ಸಿಲುಕಿಸುವ ಪಿತೂರಿ ಇದಲ್ಲ ಎಂದು ಹೇಳುವುದು ಹೇಗೆ? ಪೊಲೀಸರು ಈ ಪ್ರಕರಣದ ತನಿಖೆ ನಡೆಸಿ ಸಂಬಂಧಪಟ್ಟ ಯುವತಿಯನ್ನು ಮುಸ್ಲಿಂ ಯುವಕನ ಹಿಡಿತದಿಂದ ಬಿಡಿಸಬೇಕು ಮತ್ತು ಅವನ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!