ಆರೋಪಿಗಳನ್ನು ಬಿಟ್ಟು ಬಿಡುವಂತೆ ಸಚಿವ ಅಹ್ಮದ್ ಅವರಿಂದ ಪೊಲೀಸ್ ಉಪನಿರೀಕ್ಷಕರಿಗೆ ದೂರವಾಣಿ ಕರೆ

  • ಉದ್ಯಮಿಗೆ ವಂಚನೆ ಮಾಡಿದ ಮತಾಂಧ ಆರೋಪಿಗಳಿಗೆ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಬೆಂಬಲ

  • ಸಂಭಾಷಣೆಯ ಆಡಿಯೋ ವೈರಲ್

ಚಿಕ್ಕಬಳ್ಳಾಪುರ – ಮೆಕ್ಕೆಜೋಳ ಖರೀದಿಸುವ ಒಬ್ಬ ಉದ್ಯಮಿಯ 89 ಲಕ್ಷ ರೂಪಾಯಿಗಳ ವಂಚನೆ ಮಾಡಿದ ಪ್ರಕರಣದಲ್ಲಿ 3 ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣದಲ್ಲಿ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಅವರು ಪೊಲೀಸ್ ಉಪನಿರೀಕ್ಷಕರೊಂದಿಗೆ ದೂರವಾಣಿಯಲ್ಲಿ ನಡೆಸಿದ ಸಂಭಾಷಣೆಯ ಆಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಸಚಿವ ಅಹ್ಮದ್ ಅವರು ಆರೋಪಿಗಳನ್ನು ಬಿಟ್ಟು ಬಿಡುವಂತೆ ಹೇಳಿದ್ದಾರೆ.

1. ಆರ್ಥಿಕ ವಂಚನೆಯ ಸಂಬಂಧ ಉದ್ಯಮಿ ರಾಮಕೃಷ್ಣ ಅವರು ನಾಸೀರ್, ಅಬ್ದುಲ್ ರಜಾಕ್ ಮತ್ತು ಅಕ್ಬರ್ ಪಾಷಾ ಅವರ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೇರಸಂದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

2. ಪೇರಸಂದ್ರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಜಗದೀಶ್ ಅವರಿಗೆ ಸಚಿವ ಜಮೀರ್ ಅಹ್ಮದ್ ಅವರು ದೂರವಾಣಿ ಕರೆ ಮಾಡಿ, “ಅವರು (ಆರೋಪಿಗಳು) ನನಗೆ ತುಂಬಾ ಬೇಕಾದವರು. ಹಾಗಾಗಿ ಈ ಪ್ರಕರಣದಲ್ಲಿ ಸ್ವಲ್ಪ ಸಹಾಯ ಮಾಡಿ ಆರೋಪಿಗಳನ್ನು ಬಿಟ್ಟುಬಿಡಿ” ಎಂದು ಹೇಳಿದರು. ಅದಕ್ಕೆ ಪೊಲೀಸ್ ಉಪನಿರೀಕ್ಷಕ ಜಗದೀಶ್ ಅವರು ಎರಡೂ ಕಡೆಯ ಜನರನ್ನು ಪೊಲೀಸ್ ಠಾಣೆಗೆ ಕರೆಸಿ ಪ್ರಕರಣ ಇತ್ಯರ್ಥಪಡಿಸುವಂತೆ ಹೇಳಿದರು.

ಸಂಪಾದಕೀಯ ನಿಲುವು

ಆರೋಪಿಗಳನ್ನು ಬೆಂಬಲಿಸುವ ಇಂತಹ ಕಾಂಗ್ರೆಸ್ ಸಚಿವರು ರಾಜ್ಯದಲ್ಲಿ ಕಾನೂನಿನ ಆಡಳಿತವನ್ನು ಹೇಗೆ ತರಲು ಸಾಧ್ಯ? ಸಚಿವರೇ ಆರೋಪಿಗಳನ್ನು ಬಿಡಲು ಹೇಳುತ್ತಿದ್ದರೆ, ರಾಜ್ಯದಲ್ಲಿನ ಅಪರಾಧದ ಪ್ರಮಾಣ ಎಂದಿಗೂ ಇಳಿಯುವುದಿಲ್ಲ!