|

ಮುರಾದಾಬಾದ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುರಾದಾಬಾದ ನಗರದ ಒಂದು ಮದರಸಾದಲ್ಲಿ 13 ವರ್ಷದ ವಿದ್ಯಾರ್ಥಿನಿಗೆ ಕನ್ಯತ್ವ ಪ್ರಮಾಣಪತ್ರ ತರುವಂತೆ ಹೇಳಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವೈದ್ಯಕೀಯ ವರದಿಯನ್ನು ಸಲ್ಲಿಸಲು ಪೋಷಕರು ನಿರಾಕರಿಸಿದಾಗ, ಆ ಹುಡುಗಿಯ ಹೆಸರನ್ನು ಮದರಸಾದಿಂದ ತೆಗೆದುಹಾಕಿ, ಶಾಲಾ ವರ್ಗಾವಣೆ ಪ್ರಮಾಣಪತ್ರ (ಟಿ.ಸಿ) ನೀಡಿ ಮನೆಗೆ ಕಳುಹಿಸಲಾಗಿದೆ. ಮದರಸಾ ಪ್ರವೇಶಕ್ಕಾಗಿ ತೆಗೆದುಕೊಂಡಿದ್ದ 35 ಸಾವಿರ ರೂಪಾಯಿಗಳ ಪ್ರವೇಶ ಶುಲ್ಕವನ್ನೂ ಸಹ ಹಿಂತಿರುಗಿಸಲಿಲ್ಲ. ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಚಂಡೀಗಢದ ಸಂತ್ರಸ್ತೆಯ ತಂದೆ ಮುರಾದಾಬಾದನ ಹಿರಿಯ ಪೊಲೀಸ್ ಅಧೀಕ್ಷಕ (ಎಸ್.ಎಸ್.ಪಿ.) ಸತಪಾಲ್ ಅಂತಿಲ್ ಅವರಿಗೆ ನೀಡಿದ ದೂರಿನಲ್ಲಿ, ಅವರ 13 ವರ್ಷದ ಮಗಳು ಲೋಧಿಪುರದಲ್ಲಿರುವ ಒಂದು ಮದರಸಾದಲ್ಲಿ ಕಲಿಯುತ್ತಿದ್ದಳು, 2024 ರಲ್ಲಿ ಅವಳಿಗೆ 7 ನೇ ತರಗತಿಗೆ ಪ್ರವೇಶ ದೊರೆತಿತ್ತು. ಈ ವರ್ಷ ಅವಳು 7ನೇ ತರಗತಿಯನ್ನು ಉತ್ತೀರ್ಣಳಾಗಿದ್ದಳು ಮತ್ತು 8ನೇ ತರಗತಿಗೆ ಪ್ರವೇಶ ಪಡೆಯಬೇಕಿತ್ತು. ಇದೇ ಅವಧಿಯಲ್ಲಿ ಜುಲೈ 16 ರಂದು ಮಗಳನ್ನು ಕೆಲವು ದಿನಗಳವರೆಗೆ ಮನೆಗೆ ಕರೆಯಲಾಗಿತ್ತು. ಆಗಸ್ಟ್ 21 ರಂದು ಪೋಷಕರು ಮಗಳನ್ನು ಮರಳಿ ಮದರಸಾಗೆ ಕರೆತಂದಾಗ, ಅಲ್ಲಿನ ಮುಖ್ಯೋಪಾಧ್ಯಾಯರು ಮತ್ತು ಪ್ರವೇಶ ಅಧಿಕಾರಿಗಳು ಅವಳಿಗೆ ಪ್ರವೇಶ ನೀಡಲು ನಿರಾಕರಿಸಿದರು. ಅವರು ಆ ಹುಡುಗಿಯ ತಾಯಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಿ ಕನ್ಯತ್ವ ಪ್ರಮಾಣಪತ್ರವನ್ನು ತರುವಂತೆ ಹೇಳಿದರು. ಅಪ್ರಾಪ್ತ ವಿದ್ಯಾರ್ಥಿನಿಯ ತಾಯಿ ಇದನ್ನು ವಿರೋಧಿಸಿದಾಗ, ಮದರಸಾದ ಸಿಬ್ಬಂದಿ ಅವರಿಗೆ ನಿಂದಿಸಿದರು. ನಂತರ ಮಗಳಿಗೆ ಶಾಲಾ ವರ್ಗಾವಣೆ ಪ್ರಮಾಣಪತ್ರ ನೀಡಿ ಮದರಸಾದಿಂದ ಹೊರಹಾಕಲಾಯಿತು.
ಸಂಪಾದಕೀಯ ನಿಲುವುಈ ಮದರಸಾದ ಘಟನೆಯ ಕುರಿತು ತಥಾಕಥಿತ ಸ್ತ್ರೀವಾದಿಗಳು, ಪ್ರಗತಿ(ಅಧೋಗತಿ)ಪರರು, ಮಾನವ ಹಕ್ಕು ಸಂಘಟನೆಗಳು ಮಾತನಾಡುತ್ತಾರೆಯೇ ಅಥವಾ ಎಂದಿನಂತೆ ನಿರ್ಲಕ್ಷಿಸುತ್ತಾರೆಯೇ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!