ಭಟ್ಕಳದ ರುಕ್ಸುದ್ದೀನ್ ಸುಲ್ತಾನ್ ಬಾಷಾದಿಂದ ೯ ಸಾವಿರದ ೨೦೦ ಅಮೆರಿಕನ್ ಡಾಲರ್ (ಸುಮಾರು ೮ ಲಕ್ಷ ರೂಪಾಯಿ) ವಶ

ಭಟ್ಕಳ, ಅಕ್ಟೋಬರ್ ೨೫ – ಭಟ್ಕಳ ಪೊಲೀಸರು ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವಿದೇಶಿ ಕರೆನ್ಸಿ ಜಾಲವನ್ನು ಭೇದಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಮೆರಿಕನ್ ಡಾಲರ್‌ಗಳ ಅಕ್ರಮ ವಹಿವಾಟು ನಡೆಸುತ್ತಿದ್ದ ದೊಡ್ಡ ಜಾಲವನ್ನು ಭಟ್ಕಳ ಪೊಲೀಸರು ಬಯಲಿಗೆ ತಂದಿದ್ದಾರೆ. ಈ ಸಂಬಂಧ ರುಕ್ಸುದ್ದೀನ್ ಸುಲ್ತಾನ್ ಬಾಷಾ (ವಯಸ್ಸು ೬೨, ಭಟ್ಕಳ ನಿವಾಸಿ (ಮುಸ್ಕಾ ಸ್ಟ್ರೀಟ್) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಶಂಕಿತನಿಂದ ಸುಮಾರು ೯ ಸಾವಿರದ ೨೦೦ ಅಮೆರಿಕನ್ ಡಾಲರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
೧೦೦ ಡಾಲರ್ ಮೌಲ್ಯದ ೧೪ ನೋಟುಗಳು ಮತ್ತು ೫೦ ಡಾಲರ್ ಮೌಲ್ಯದ ೧೫೬ ನೋಟುಗಳು, ಹೀಗೆ ಒಟ್ಟು ೯ ಸಾವಿರದ ೨೦೦ ಡಾಲರ್‌ಗಳ, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು ೮ ಲಕ್ಷ ರೂಪಾಯಿ ಮೌಲ್ಯದ ಕರೆನ್ಸಿ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ. ಶಂಕಿತ ರುಕ್ಸುದ್ದೀನ್ ಸುಲ್ತಾನ್ ಬಾಷಾ ಈ ವಿದೇಶಿ ಕರೆನ್ಸಿಯನ್ನು ಗೋವಾದ ಮಡಗಾಂವ್ ರೈಲು ಮಾರ್ಗದ ಮೂಲಕ ಭಟ್ಕಳಕ್ಕೆ ಸಾಗಿಸುತ್ತಿದ್ದ. ವಶಕ್ಕೆ ಪಡೆದ ನಂತರ ನಡೆದ ವಿಚಾರಣೆಯಲ್ಲಿ, ಈ ವಿದೇಶಿ ಕರೆನ್ಸಿಯನ್ನು ಸ್ಥಳೀಯ ನಿವಾಸಿ ಕಪ್ಪಾ ಮುಜೀಬ್ ಎಂಬಾತನಿಗೆ ನೀಡಲು ತೆಗೆದುಕೊಂಡು ಹೋಗುತ್ತಿದ್ದೆ ಎಂದು ಹೇಳಿದ್ದಾನೆ. ಈ ಕಾರ್ಯಾಚರಣೆಯ ನಂತರ ಕಪ್ಪಾ ಮುಜೀಬ್ ಪರಾರಿಯಾಗಿದ್ದಾನೆ. ಭಟ್ಕಳ ಪೊಲೀಸರು ಮಾದಕ ಪದಾರ್ಥಕ್ಕೆ ಸಂಬಂಧಿಸಿದ ಒಂದು ಪ್ರಕರಣದ ತನಿಖೆ ನಡೆಸುತ್ತಿದ್ದಾಗ, ಅವರಿಗೆ ರುಕ್ಸುದ್ದೀನ್ ಸುಲ್ತಾನ್ ಬಾಷಾ ಸ್ಕೂಟರ್‌ನಲ್ಲಿ ಹೋಗುವುದು ಕಂಡಿತು. ರುಕ್ಸುದ್ದೀನ್ ಸುಲ್ತಾನ್ ಬಾಷಾನ ಅನುಮಾನಾಸ್ಪದ ಚಲನವಲನಗಳಿಂದಾಗಿ ಅವನನ್ನು ತಪಾಸಣೆ ಮಾಡಿದಾಗ ಈ ಎಲ್ಲಾ ವಿಷಯಗಳು ಬಯಲಿಗೆ ಬಂದವು. (ಮುಸ್ಲಿಮರ ಅನುಮಾನದ ಮೇಲೆ ವಿಚಾರಣೆಯಿಂದ, ತಥಾಕಥಿತ ಜಾತ್ಯತೀತವಾದಿಗಳು ಮುಸ್ಲಿಮರ ಓಲೈಕೆಗಾಗಿ ಅದಕ್ಕೆ ಧಾರ್ಮಿಕ ಸ್ವರೂಪ ನೀಡಿ ಸಮಾಜದಲ್ಲಿ ಬಿರುಕು ಮೂಡಿಸುತ್ತಾರೆ ಮತ್ತು ತನಿಖಾ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಾರೆ; ಆದರೆ ಈ ಘಟನೆಯಲ್ಲಿ ರುಕ್ಸುದ್ದೀನ್ ಸುಲ್ತಾನ್ ಬಾಷಾನ ಅನುಮಾನಾಸ್ಪದ ಚಲನವಲನಗಳಿಂದಾಗಿ ಅವನನ್ನು ತಪಾಸಣೆ ಮಾಡದೇ ಇದ್ದಿದ್ದರೆ, ವಿದೇಶಿ ಕರೆನ್ಸಿಯ ಅಕ್ರಮ ವಹಿವಾಟು ಬಯಲಿಗೆ ಬರುತ್ತಿತ್ತೇ? ಇದರ ಬಗ್ಗೆ ಯೋಚಿಸಿ! – ಸಂಪಾದಕರು)
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!