ಸಹಾರನ್‌ಪುರ(ಉತ್ತರ ಪ್ರದೇಶ): ಭಗತ್ ಸಿಂಗ್ ಮತ್ತು ಹಮಾಸ್ ಒಂದೇ

ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹೇಳಿಕೆ

ಸಹಾರನ್‌ಪುರ (ಉತ್ತರ ಪ್ರದೇಶ) – ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರು ಹುತಾತ್ಮ ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಪ್ಯಾಲೆಸ್ಟೀನ್ ಭಯೋತ್ಪಾದಕ ಸಂಘಟನೆ ಹಮಾಸ್ ಒಂದೇ ಎಂದು ಹೇಳಿದ್ದಾರೆ. ‘ಇಬ್ಬರೂ ತಮ್ಮ ತಾಯ್ನೆಲಕ್ಕಾಗಿ ಹೋರಾಡಿದರು’ ಎಂದು ಹೇಳುವ ಮೂಲಕ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಹೇಳಿಕೆಗಾಗಿ ಬಿಜೆಪಿ ಮಸೂದ್ ಮತ್ತು ಕಾಂಗ್ರೆಸ್ ಅನ್ನು ಟೀಕಿಸಿದೆ. ಪತ್ರಕರ್ತ ಸುಶಾಂತ್ ಸಿನ್ಹಾ ಅವರಿಗೆ ನೀಡಿದ ಸಂದರ್ಶನದಲ್ಲಿ ಭಾರತದ ವಿದೇಶಾಂಗ ನೀತಿಯ ಕುರಿತು ಮಾತನಾಡುವಾಗ ಮಸೂದ್ ಈ ಹೇಳಿಕೆ ನೀಡಿದರು.

ಸಂದರ್ಶನದಲ್ಲಿ ಇಮ್ರಾನ್ ಮಸೂದ್ ನೀಡಿದ ಉತ್ತರಗಳು,

೧. ಭಾರತಕ್ಕೆ ವಿದೇಶಾಂಗ ನೀತಿಯೇ ಇಲ್ಲ. ಇಸ್ರೇಲ್, ಪ್ಯಾಲೆಸ್ಟೀನ್ ಮೇಲೆ ಆಕ್ರಮಣ ಮಾಡಿದ್ದನ್ನು ನಾವು ಖಂಡಿಸಲಿಲ್ಲ. (ಇಸ್ರೇಲ್ ಪ್ಯಾಲೆಸ್ಟೀನ್ ಮೇಲೆ ಏಕೆ ಆಕ್ರಮಣ ಮಾಡಿತು ಎಂಬುದನ್ನು ಮಸೂದ್ ಏಕೆ ಹೇಳುತ್ತಿಲ್ಲ? ೨೦೨೩ರ ಅಕ್ಟೋಬರ್ ೭ರಂದು ಹಮಾಸ್ ಭಯೋತ್ಪಾದಕರು ಇಸ್ರೇಲಿ ನಾಗರಿಕರ ಮೇಲೆ ಆಕ್ರಮಣ ಮಾಡಿ ಅವರನ್ನು ಕೊಂದರು ಮತ್ತು ೨೦೦ಕ್ಕೂ ಹೆಚ್ಚು ಜನರನ್ನು ಅಪಹರಿಸಿದರು, ಈ ಕಾರಣಕ್ಕಾಗಿಯೇ ಇಸ್ರೇಲ್ ಆಕ್ರಮಣ ಮಾಡಿತು ಎಂಬುದನ್ನು ಮಸೂದ್ ಹೇಳುತ್ತಿಲ್ಲ ಎಂಬುದನ್ನು ಗಮನಿಸಿ! – ಸಂಪಾದಕರು).

೨. ‘ಹಮಾಸ್ ಒಂದು ಭಯೋತ್ಪಾದಕ ಸಂಘಟನೆ’ ಎಂದು ಸಿನ್ಹಾ ಹೇಳಿದಾಗ, ಇಮ್ರಾನ್ ಮಸೂದ್, ‘ಭಗತ್ ಸಿಂಗ್ ಭಯೋತ್ಪಾದಕರಾಗಿದ್ದರೇ?’ ಎಂದು ಪ್ರಶ್ನಿಸಿದರು. ಇದರ ನಂತರ, ಮಸೂದ್ ಅವರಿಗೆ, ‘ನೀವು ಹಮಾಸ್ ಮತ್ತು ಭಗತ್ ಸಿಂಗ್ ಅವರನ್ನು ಹೋಲಿಸುತ್ತಿದ್ದೀರಾ?’ ಎಂದು ಕೇಳಿದರು. ಈ ಪ್ರಶ್ನೆಗೂ ಅವರು ‘ಹೌದು’ ಎಂದು ಉತ್ತರಿಸಿದರು.

೩. ಇಮ್ರಾನ್ ಮಸೂದ್ ಅವರು, “ಭಗತ್ ಸಿಂಗ್ ತಮ್ಮ ತಾಯ್ನೆಲಕ್ಕಾಗಿ ಹೋರಾಡಿದರು, ಅದೇ ರೀತಿ ಹಮಾಸ್ ಕೂಡ ತಮ್ಮ ತಾಯ್ನೆಲಕ್ಕಾಗಿ ಹೋರಾಡುತ್ತಿದೆ. ಹಮಾಸ್ ತನ್ನ ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭಿಸಿದೆ. ಅವರು ಆರಿಸಿಕೊಂಡ ಮಾರ್ಗದ ಬಗ್ಗೆ ಬೇಸರವಾಗುತ್ತದೆ.” (ಹಮಾಸ್ ಅಲ್ಲ, ಆದರೆ ಇಸ್ರೇಲ್ ಕಳೆದ ೮೦ ವರ್ಷಗಳಿಂದ ತನ್ನ ತಾಯ್ನೆಲಕ್ಕಾಗಿ ಹೋರಾಡುತ್ತಿದೆ. ಇದು ೨,೦೦೦ ವರ್ಷಗಳ ಹಿಂದಿನ ಇತಿಹಾಸ. ಮಸೂದ್ ಈ ವಿಷಯವನ್ನು ಹೇಳುತ್ತಿಲ್ಲ. – ಸಂಪಾದಕರು)

೪. ‘ಹಮಾಸ್, ಇಸ್ರೇಲ್ ಮೇಲೆ ಆಕ್ರಮಣ ಮಾಡಿದ ನಂತರ ಅನೇಕ ಜನರ ಕೊಲೆ ಮಾಡಿತು. ನೂರಾರು ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿತು. ಪ್ಯಾಲೆಸ್ಟೀನ್ ನಾಗರಿಕರನ್ನು ಗುರಾಣಿಯಾಗಿ ಬಳಸಿಕೊಂಡು ಅವರು ಹೋರಾಡುತ್ತಿದ್ದಾರೆ, ಅವರು ಭಯೋತ್ಪಾದಕರಲ್ಲವೇ?’ ಎಂದು ಇಮ್ರಾನ್ ಮಸೂದ್ ಅವರನ್ನು ಪ್ರಶ್ನಿಸಿದರು. ಇದಕ್ಕೆ ಇಮ್ರಾನ್ ಮಸೂದ್, “ಹಮಾಸ್ ಕೆಲವು ನೂರು ಜನರನ್ನು ಕೊಂದಿದೆ; ಆದರೆ ಅದಕ್ಕೆ ಪ್ರತಿಯಾಗಿ ಇಸ್ರೇಲ್ ಲಕ್ಷಾಂತರ ಜನರನ್ನು ಕೊಂದಿದೆ. ಇದನ್ನು ಏಕೆ ನೋಡುತ್ತಿಲ್ಲ?” (ಹಮಾಸ್ ಮೊದಲು ಆಕ್ರಮಣ ಮಾಡಿದ ನಂತರ ಇಸ್ರೇಲ್ ಪ್ರತ್ಯುತ್ತರವಾಗಿ ಆಕ್ರಮಣ ಮಾಡಿತು. ಅದರ ನಂತರವೂ ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಿಲ್ಲ. ಈ ಕಾರಣಕ್ಕಾಗಿಯೇ ಇಸ್ರೇಲ್ ಯುದ್ಧವನ್ನು ಮುಂದುವರೆಸಬೇಕಾಯಿತು. ಯುದ್ಧದಲ್ಲಿ ಸಾವಿರಾರು ಜನರು ಸಾಯುತ್ತಿರುವಾಗಲೂ ಹಮಾಸ್ ಒತ್ತೆಯಾಳುಗಳನ್ನು ಏಕೆ ಬಿಡುಗಡೆ ಮಾಡಲಿಲ್ಲ? ಇದಕ್ಕೆ ಮಸೂದ್ ಉತ್ತರಿಸುತ್ತಾರೆಯೇ? ಈ ಜನರ ಸಾವಿಗೆ ಇಸ್ರೇಲ್ ಅಲ್ಲ, ಹಮಾಸ್ ಕಾರಣ! – ಸಂಪಾದಕರು)

೫. ಮೋಹನ್ ದಾಸ್ ಗಾಂಧಿ ಅವರ ಬಗ್ಗೆ ಸಿನ್ಹಾ ಅವರು ಇಮ್ರಾನ್ ಮಸೂದ್ ಅವರನ್ನು ಪ್ರಶ್ನಿಸಿದಾಗ, ಇಮ್ರಾನ್ ಮಸೂದ್ ಜಾಗರೂಕತೆಯ ನಿಲುವು ತೆಗೆದುಕೊಂಡು ನಾವು ಅಹಿಂಸಾವಾದಿಗಳು ಎಂದು ಹೇಳಿದರು. (ಹಮಾಸ್ ಅನ್ನು ಬೆಂಬಲಿಸುವವರು ಅಹಿಂಸಾವಾದಿಗಳಂತೆ! – ಸಂಪಾದಕರು)

ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ನಾಯಕರು ಭಯೋತ್ಪಾದಕರನ್ನು ಬೆಂಬಲಿಸುತ್ತಾರೆ! – ಬಿಜೆಪಿ

ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಈ ಸಂದರ್ಶನದಲ್ಲಿ ಇಮ್ರಾನ್ ಮಸೂದ್ ಅವರ ಹೇಳಿಕೆಯ ವಿಡಿಯೋವನ್ನು ‘ಎಕ್ಸ್’ (X) ನಲ್ಲಿ ಹಂಚಿಕೊಂಡಿದ್ದಾರೆ. ಕಾಂಗ್ರೆಸ್ ಅನ್ನು ಟೀಕಿಸುತ್ತಾ, “ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ ನಾಯಕರು ಭಯೋತ್ಪಾದಕರನ್ನು ಬೆಂಬಲಿಸುತ್ತಾರೆ. ಈ ಹಿಂದೆ ಕನ್ಹಯ್ಯಾ ಕುಮಾರ್ ಭಗತ್ ಸಿಂಗ್ ಅವರನ್ನು ಲಾಲು ಪ್ರಸಾದ್ ಯಾದವ್ ಅವರಿಗೆ ಹೋಲಿಸಿದ್ದರು. ಕಾಂಗ್ರೆಸ್ ಈ ಹಿಂದೆಯೂ ಇತರ ಮಹಾಪುರುಷರಿಗೆ ಇದೇ ರೀತಿ ಅವಮಾನ ಮಾಡಿದೆ” ಎಂದು ಪೋಸ್ಟ್ ಮಾಡಿದರು.

ಸಂಪಾದಕೀಯ ನಿಲುವು

  • ಈ ರೀತಿಯ ಹೇಳಿಕೆ ನೀಡಿದ್ದಕ್ಕಾಗಿ ಮಸೂದ್ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಜೈಲಿಗೆ ಹಾಕಬೇಕು!
  • ಭಾರತದ ಸ್ವಾತಂತ್ರ್ಯಕ್ಕಾಗಿ ಬೆರಳೆಣಿಕೆಯಷ್ಟು ಮುಸ್ಲಿಂ ಕ್ರಾಂತಿಕಾರಿಗಳಿಲ್ಲ ಎಂದು ಇತಿಹಾಸ ಹೇಳುತ್ತದೆ. ಹಾಗಿರುವಾಗ ಭಗತ್ ಸಿಂಗ್ ಅವರನ್ನು ಹಮಾಸ್‌ ಜೊತೆ ಹೋಲಿಸುವ ಮಸೂದ್ ದೇಶದ್ರೋಹಿಯೆಂದು ಹೇಳುವುದರಲ್ಲಿ ಯಾವುದೇ ಅನುಮಾನವಿಲ್ಲ!
  • ಮಸೂದ್ ಅವರಂತಹ ನಾಯಕರು ಸಂಸದರಾಗುವುದು ಭಾರತೀಯರಿಗೆ ನಾಚಿಕೆಗೇಡಿನ ಸಂಗತಿ! ಇಮ್ರಾನ್ ಮಸೂದ್ ಅವರ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪುತ್ತದೆಯೇ ಎಂಬುದನ್ನು ಅದು ಸ್ಪಷ್ಟಪಡಿಸಬೇಕು!