ಸಿಂಗಾಪುರದಲ್ಲಿ ಪಟಾಕಿ ಸಿಡಿಸಿದ್ದಕ್ಕಾಗಿ ಭಾರತೀಯನ ಬಂಧನ : Singapore Indian Arrest

5 ವರ್ಷಗಳ ಜೈಲು ಶಿಕ್ಷೆಯಾಗುವ ಸಾಧ್ಯತೆ!

ಸಿಂಗಾಪುರ – ಸಿಂಗಾಪುರದಲ್ಲಿ ಪಟಾಕಿ ಸಿಡಿಸಿದ ಆರೋಪದ ಮೇಲೆ ದಿಲೀಪ ಕುಮಾರ ನಿರ್ಮಲ ಕುಮಾರ ಎಂಬ 39 ವರ್ಷದ ಭಾರತೀಯನನ್ನು ಬಂಧಿಸಲಾಗಿದೆ. ನಗರದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.

ದಿಲೀಪ ಕುಮಾರ ನಿರ್ಮಲ ಕುಮಾರ ಕಳೆದ ವಾರ ಇಲ್ಲಿನ ಕಾರ್ಲಿಸ್ಲೆ ರಸ್ತೆಯಲ್ಲಿರುವ ಮೈದಾನದಲ್ಲಿ ಪಟಾಕಿ ಸಿಡಿಸಿದ್ದರು. ಅವರ ವಿರುದ್ಧ ‘ಬಂದೂಕು, ಸ್ಫೋಟಕ ಮತ್ತು ಶಸ್ತ್ರಾಸ್ತ್ರ ನಿಯಂತ್ರಣ ಕಾಯಿದೆ 2021’ ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ 5 ವರ್ಷಗಳ ಜೈಲು ಶಿಕ್ಷೆ ಮತ್ತು 1 ಲಕ್ಷ ಸಿಂಗಾಪುರ ಡಾಲರ್ (ರೂ. 67 ಲಕ್ಷ 70 ಸಾವಿರ) ದಂಡ ವಿಧಿಸುವ ಸಾಧ್ಯತೆ ಇದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಪರಿಸರಕ್ಕೆ ಅಪಾಯಕಾರಿಯಾದ ಅಪರಾಧಗಳಿಗೂ ಇದೇ ರೀತಿಯ ಕಠಿಣ ಶಿಕ್ಷೆಯ ಅವಶ್ಯಕತೆ ಇದೆ!