
ಲಂಡನ್ – ‘ಟಾಟಾ ಮೋಟಾರ್ಸ್’ ಒಡೆತನದ ಐಷಾರಾಮಿ ವಾಹನಗಳನ್ನು ತಯಾರಿಸುವ ಕಂಪನಿ ‘ಜಾಗ್ವಾರ್ ಲ್ಯಾಂಡ್ ರೋವರ್’ (J.L.R.) ಮೇಲೆ ಸೈಬರ್ ದಾಳಿ ನಡೆದಿದೆ. ಈ ದಾಳಿಯು ಬ್ರಿಟನ್‌ನಲ್ಲಿ ಇದುವರೆಗಿನ ಅತಿದೊಡ್ಡ ಮತ್ತು ಅತ್ಯಂತ ಹಾನಿಕಾರಕ ಸೈಬರ್ ದಾಳಿಯಾಗಿದೆ. ಈ ದಾಳಿಯಿಂದಾಗಿ ಬ್ರಿಟನ್‌ನ ಆರ್ಥಿಕತೆಗೆ ಸುಮಾರು 22 ಸಾವಿರ ಕೋಟಿ ರೂಪಾಯಿಗಳ ನಷ್ಟ ಉಂಟಾಗಿದೆ. ಬ್ರಿಟನ್‌ನಲ್ಲಿ 5 ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳ ಮೇಲೆ ಇದರ ಪರಿಣಾಮ ಬೀರಿದೆ. ಬ್ರಿಟನ್‌ನಲ್ಲಿನ ಸೈಬರ್ ಘಟನೆಗಳ ಸ್ವತಂತ್ರ ಮೌಲ್ಯಮಾಪನ ಮಾಡುವ ‘ಸೈಬರ್ ಮಾನಿಟರಿಂಗ್ ಸೆಂಟರ್’ (C.M.C.)ನ ಹೇಳಿಕೆಯ ಪ್ರಕಾರ, ಈ ದಾಳಿಯಿಂದಾಗಿ ‘J.L.R’. ನ ಉತ್ಪಾದನೆ, ಪೂರೈಕೆ ಸರಣಿ ಮತ್ತು ವಿತರಣಾ ವ್ಯವಸ್ಥೆಗಳಿಗೆ ಗಂಭೀರ ಅಡಚಣೆಗಳು ಉಂಟಾಗಿವೆ. ‘ಜಾಗ್ವಾರ್ ಲ್ಯಾಂಡ್ ರೋವರ್’ನ ಉತ್ಪಾದನಾ ಕೇಂದ್ರಗಳ ಮೇಲಿನ ದಾಳಿ ಆಗಸ್ಟ್ ಅಂತ್ಯದಲ್ಲಿ ನಡೆದಿದ್ದು ಸೆಪ್ಟೆಂಬರ್ ತಿಂಗಳ ಪೂರ್ತಿ ಉತ್ಪಾದನೆಯು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ದಾಳಿಯಿಂದಾಗಿ ಕಂಪನಿಯ ನೌಕರರು ಮತ್ತು ಬಿಡಿಭಾಗಗಳನ್ನು ಪೂರೈಸುವ ಸಣ್ಣ ಕಂಪನಿಗಳ ಮೇಲೆ ಪರಿಣಾಮ ಬೀರಿದೆ.
🚨 Biggest Cyber Attack in U.K. History
Tata Motors' Jaguar Land Rover (JLR) hack in August 2025 hit over 5,000 firms, forcing a month-long production halt
💰 Estimated loss: £1.6 – £2.1 billion
A major blow to Britain’s auto industry.#JLR #TataMotors #UK #BusinessNews
Video… pic.twitter.com/xZ1APgVAA4— Sanatan Prabhat (@SanatanPrabhat) October 23, 2025
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation