ನಿಮ್ಮ ಆರೋಗ್ಯದ ಬಗ್ಗೆ ನಿಮಗೆಷ್ಟು ಅರಿವಿದೆ ?

ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ – ಭಾಗ ೨೮

ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆ ಗಳಿಗೆ ‘ವ್ಯಾಯಾಮ ಒಂದು ಪರಿಣಾಮಕಾರಿ ಪರಿಹಾರ ವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ತ್ವಗಳು ಇಂದಿಗೂ ಅಷ್ಟೇ ಉಪಯುಕ್ತ ವಾಗಿದ್ದು, ನಾವು ಅವುಗಳಿಂದ ಪ್ರೇರಣೆ ಪಡೆಯಬಹುದು. ಈ ಲೇಖನಮಾಲೆಯಲ್ಲಿ ನಾವು ವ್ಯಾಯಾಮದ ಮಹತ್ವ, ವ್ಯಾಯಾಮದ ಬಗ್ಗೆ ಇರುವ ಸಂದೇಹ ನಿವಾರಣೆ, ‘ಎರ್ಗೊನಾಮಿಕ್ಸ್ ತತ್ವ ಮತ್ತು ಕಾಯಿಲೆಗಳಿಗೆ ಅನುಗುಣವಾದ ಸರಿಯಾದ ವ್ಯಾಯಾಮದ ಮಾಹಿತಿಯನ್ನು ನೀಡುತ್ತೇವೆ.

ಕಳೆದ ವಾರದ ಸಂಚಿಕೆಯಲ್ಲಿ ನಾವು ‘ನಡೆಯುವ ಯೋಗ್ಯ ಮತ್ತು ಅಯೋಗ್ಯ ಪದ್ಧತಿ ಹಾಗೂ ಅದರಿಂದ ಆಗುವ ಲಾಭಗಳು ಮತ್ತು ಹಾನಿ’ಯನ್ನು ಅರ್ಥಮಾಡಿಕೊಂಡಿದ್ದೇವೆ. ಈ ಲೇಖನದಲ್ಲಿ ನಾವು ಆರೋಗ್ಯದ ಬಗ್ಗೆ ಅರಿವಿರುವುದರ ಮಹತ್ವ ಮತ್ತು ಅಗತ್ಯವನ್ನು ನೋಡೋಣ.

೧. ಸದ್ವಿವೇಕಬುದ್ಧಿಯ ನಂತರ ಆರೋಗ್ಯದ ಬಗ್ಗೆ ಕಾಳಜಿ ಇರುವುದು ಮಹತ್ವದ್ದಾಗಿದೆ !

‘ಜೀವನದಲ್ಲಿ ನಿಮ್ಮ ಧ್ಯೇಯ ಏನೇ ಇರಲಿ, ಸಂಪೂರ್ಣ ಯಶಸ್ಸು, ಆಧ್ಯಾತ್ಮಿಕ ಪ್ರಗತಿ ಅಥವಾ ಸರಳವಾದ ಸುಖೀ ಜೀವನ… ! ಸದ್ವಿವೇಕಬುದ್ಧಿ ಇದು ಅತ್ಯಂತ ಮಹತ್ವದ್ದಾಗಿರುತ್ತದೆ; ಆದರೆ ಅದರ ನಂತರ ಅಥವಾ ಅದರ ಭಾಗವಾಗಿ ಬೇಕಾಗಿರುವುದು, ನಮ್ಮ ಆರೋಗ್ಯದ ಬಗ್ಗೆ ಇರುವ ಕಾಳಜಿ !’ ನಮ್ಮಲ್ಲಿ ಹಲವರು ಈ ಎರಡರ ಬಗ್ಗೆಯೂ ಗಮನ ಹರಿಸುವುದಿಲ್ಲ.

೨. ಹೆಚ್ಚಿನವರಿಗೆ ನೈತಿಕ ವರ್ತನೆಯ ಬಗ್ಗೆ ಕಾಳಜಿ ಇರುತ್ತದೆ; ಆದರೆ ಆರೋಗ್ಯವನ್ನು ಹಾಳು ಮಾಡುವ ವ್ಯಸನಗಳಿಂದ ದೂರವಿರಲು ಸಾಧ್ಯವಾಗುವುದಿಲ್ಲ

ನಮ್ಮಲ್ಲಿ ಹೆಚ್ಚಿನವರಿಗೆ ನೈತಿಕ ವರ್ತನೆಯ ಅರಿವು, ಕಾಳಜಿ ಇರುತ್ತದೆ. ‘ಕಳ್ಳತನ ಮಾಡುವುದು, ಇತರರಿಗೆ ಹೊಡೆಯುವುದು, ಸುಳ್ಳು ಹೇಳುವುದು ಅಥವಾ ವ್ಯಭಿಚಾರ ಮಾಡುವುದು, ಇಂತಹ ಅನೈತಿಕ ಕೆಲಸಗಳನ್ನು ಮಾಡಬಾರದು’ ಎಂದು ನಮ್ಮ ವಿವೇಚನೆ (ಸದ್ವಿವೇಕಬುದ್ಧಿ) ಹೇಳುತ್ತದೆ; ಆದರೆ ಆರೋಗ್ಯದ ಬಗ್ಗೆ ಕಾಳಜಿ ಇರುವುದು ಕೆಲವೇ ಜನರಿಗೆ. ಕೆಲವರಿಗೆ ಮದ್ಯಪಾನ, ತಂಬಾಕು ಸೇವನೆಯಂತಹ ಮಾರಣಾಂತಿಕ ವ್ಯಸನಗಳು ಇರುತ್ತವೆ; ಆದರೆ ಹೆಚ್ಚಿನವರಿಗೆ ದೈನಂದಿನ ಜೀವನದಲ್ಲಿ ಇರುವ ಚಹಾ, ಕಾಫಿ, ಅತಿಯಾಗಿ ತಿನ್ನುವುದು (ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವುದು), ತಡವಾಗಿ ಏಳುವುದು, ರಾತ್ರಿ ಎಚ್ಚರವಾಗಿರುವುದು, ತಂಪು ಪಾನೀಯಗಳನ್ನು ಕುಡಿಯುವುದು ಮತ್ತು ಇಂತಹ ನೂರಾರು ಆರೋಗ್ಯವನ್ನು ಹಾಳು ಮಾಡುವ ವ್ಯಸನಗಳಿಂದ ದೂರವಿರಲು ಸಾಧ್ಯವಾಗುವುದಿಲ್ಲ.

೩. ‘ನಾವು ಆತ್ಮದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ, ಅಷ್ಟೇ ಕಾಳಜಿಯನ್ನು ದೇಹರೂಪಿ ಮಂದಿರದ ಬಗ್ಗೆಯೂ ವಹಿಸುವುದು’ ನಮ್ಮ ಜವಾಬ್ದಾರಿಯಾಗಿದೆ

ಪ್ರಾಮಾಣಿಕವಾಗಿ ಯೋಚಿಸಿ… ! ‘ನಾವು ನಮ್ಮ ದೈನಂದಿನ ಅಭ್ಯಾಸಗಳನ್ನು ಆರೋಗ್ಯದ ಅರಿವಿನಿಂದ ವಿಚಾರ ಮಾಡುತ್ತೇವೆಯೋ ?’ ದೇಹ ಮತ್ತು ಆತ್ಮದ ಬಗ್ಗೆ ಕಾಳಜಿ ಮಾಡುವುದು ಎರಡೂ ಅಷ್ಟೇ ಮಹತ್ವದ್ದಾಗಿವೆ. ನಮ್ಮ ದೇಹವು ದೇವರ ಮಂದಿರವಾಗಿದೆ. ಅದರಲ್ಲಿ ಆ ಪರಮಾತ್ಮ ವಾಸಿಸುತ್ತಾನೆ. ಹಾಗಾಗಿ ದೇವರ ಮೂರ್ತಿಯಷ್ಟೇ ನಿಮ್ಮ ದೇಹವನ್ನು ಪವಿತ್ರ ವೆಂದು ಭಾವಿಸಬೇಕು ಮತ್ತು ‘ನಾವು ನಮ್ಮ ಆತ್ಮದ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೇವೆಯೋ, ಅಷ್ಟೇ ಕಾಳಜಿಯನ್ನು ದೇಹರೂಪಿ ಮಂದಿರದ ಬಗ್ಗೆ ವಹಿಸುವುದು’ ನಮ್ಮ ಜವಾಬ್ದಾರಿಯಾಗಿದೆ. ನಿಮಗೆ ಉತ್ತಮ ಆರೋಗ್ಯ ಬೇಕಿದ್ದರೆ, ಅಂತಹ ಅರಿವನ್ನು ಬೆಳೆಸುವುದು ನಿಮ್ಮ ಕರ್ತವ್ಯವಾಗಿದೆ.

೩ ಅ. ಇದಕ್ಕಾಗಿ ಪಾಲಿಸಬೇಕಾದ ಮಹತ್ವದ ನಿಯಮಗಳು…

೧. ತಮ್ಮ ದೈಹಿಕ ಶ್ರಮಕ್ಕೆ ಅನುಗುಣವಾಗಿ ತಮ್ಮ ಆಹಾರವನ್ನು ನಿರ್ಧರಿಸಬೇಕು ಮತ್ತು ಊಟದ ಸಮಯದಲ್ಲಿ ಆ ರೀತಿಯ ಆಹಾರವನ್ನು ಮಾತ್ರ ಸೇವಿಸಬೇಕು.

೨. ಸ್ವಚ್ಛ ನೀರನ್ನು ಕುಡಿಯುವುದು.

೩. ಪ್ರತಿದಿನ ಒಂದರಿಂದ ಒಂದೂವರೆ ಗಂಟೆ (ಸಾಧ್ಯವಾದರೆ, ತೆರೆದ ಗಾಳಿಯಲ್ಲಿ) ವ್ಯಾಯಾಮ ಮಾಡಬೇಕು.

೪. ದಿನವಿಡೀ ಸಾಕಷ್ಟು ತೆರೆದ ಗಾಳಿಯಲ್ಲಿ ಇರಬೇಕು.

೫. ದೇವರ ಮೇಲೆ ದೃಢವಾದ ನಂಬಿಕೆ ಇಟ್ಟು ದಿನಚರಿಯನ್ನು ಪಾಲಿಸಬೇಕು.

೬. ಅಗತ್ಯವಿರುವಷ್ಟು ನಿದ್ರೆಯನ್ನು ಪೂರ್ಣಗೊಳಿಸಬೇಕು.

೭. ದೇಹದ ಎಲ್ಲಾ ಭಾಗಗಳಲ್ಲಿ ಉತ್ಸಾಹದ ವಿದ್ಯುತ್ ಕಿರಣಗಳು ಸಂಚರಿಸುವಂತೆ ಹಿತಕರವಾದ ಬೌದ್ಧಿಕ ವಿಚಾರಗಳು/ ಕೃತಿಗಳನ್ನು ಮಾಡಬೇಕು.

ಆರೋಗ್ಯದ ವಿಚಾರಗಳು ಮೂಡಲು ಮೇಲಿನ ಅಂಶಗಳನ್ನು ನೆನಪಿನಲ್ಲಿಡಿ ಮತ್ತು ಈ ಸದ್ವಿವೇಕಬುದ್ಧಿಯನ್ನು ಜಾಗೃತವಾಗಿಟ್ಟುಕೊಂಡು ದೈನಂದಿನ ಕೆಲಸಗಳನ್ನು ಮಾಡಿ.

೩ ಆ. ‘ಪ್ರಕೃತಿಯ ನಿಯಮಗಳ ವಿರುದ್ಧ ಹೋಗುವುದು ಅಥವಾ ಅವುಗಳನ್ನು ದುರ್ಲಕ್ಷಿಸುವುದು’ ಅಜ್ಞಾನ ಮತ್ತು ಅಹಂಕಾರದ ಸಂಕೇತವಾಗಿದೆ : ‘ದಿನವಿಡೀ ನಮ್ಮ ದೇಹದ ಬಗ್ಗೆಯೇ ಯೋಚಿಸುತ್ತಿರಬೇಕು’ ಎಂದು ಇದರ ತಪ್ಪು ಅರ್ಥವನ್ನು ತೆಗೆದುಕೊಳ್ಳಬಾರದು. ಬದಲಿಗೆ, ಪ್ರಕೃತಿಯ ನಿಯಮಗಳನ್ನು ಅನುಸರಿಸಿ ವಿಚಾರ ಪ್ರಕ್ರಿಯೆ ಮತ್ತು ದಿನಚರಿಯನ್ನು ಇಟ್ಟುಕೊಂಡರೆ, ದೇಹವು ನಮ್ಮ ಸಂಪೂರ್ಣ ಪ್ರಗತಿಗೆ ಸಹಾಯ ಮಾಡುತ್ತದೆ. ನೆನಪಿಡಿ, ‘ಪ್ರಕೃತಿಯ ನಿಯಮಗಳ ವಿರುದ್ಧವಾಗಿ ಹೋಗುವುದು ಅಥವಾ ಅವುಗಳನ್ನು ದುರ್ಲಕ್ಷಿಸುವುದು’ ಉದಾತ್ತತೆಯ ಲಕ್ಷಣವಲ್ಲ, ಬದಲಿಗೆ ‘ಅಜ್ಞಾನ’ ಮತ್ತು ‘ಅಹಂಕಾರ’ದ ಸಂಕೇತವಾಗಿದೆ.

ಈ ಸರಳ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ದೇಹದ ಕಾಳಜಿ ವಹಿಸಿ ಮತ್ತು ನಿತ್ಯಕರ್ಮಗಳಿಂದ ಉತ್ತಮ ಆರೋಗ್ಯವನ್ನು ಪಡೆಯಿರಿ.

೪. ಆರೋಗ್ಯವನ್ನು ಪಡೆಯಲು ನಿಮ್ಮ ಆರೋಗ್ಯದ ಅರಿವಿಗೆ ಶಿಕ್ಷಣ ನೀಡಲು ಪ್ರಾರಂಭಿಸಿ !

ದೇಹದ ಆರೋಗ್ಯವು ಒಂದೇ ಬಾರಿಗೆ ಸಿಗುವ ವಸ್ತುವಲ್ಲ. ನೀವು ಅದನ್ನು ಹಣ ಖರ್ಚು ಮಾಡಿಯೂ ಪಡೆಯಲು ಸಾಧ್ಯವಿಲ್ಲ. ಅದು ಯಾರಿಗೂ ಉಡುಗೊರೆಯಾಗಿ ಸಿಗುವುದಿಲ್ಲ; ಆದರೆ ಹೇಗೆ ಶುದ್ಧ ಶೀಲವನ್ನು ನಮ್ಮ ಸದ್ವಿವೇಕಬುದ್ಧಿಯ ಆದೇಶಗಳನ್ನು ಎಚ್ಚರಿಕೆಯಿಂದ ಪಾಲಿಸುವುದರಿಂದ ಪಡೆಯಬಹುದು, ಅದೇ ರೀತಿ ಆರೋಗ್ಯವನ್ನು ಪಡೆಯಬಹುದು, ಹಾಗಾದರೆ ನಿಮ್ಮ ಅರಿವಿಗೆ ‘ಶಿಕ್ಷಣ ನೀಡಲು ಏಕೆ ಪ್ರಾರಂಭಿಸುವುದಿಲ್ಲ ?’

(ಸೌಜನ್ಯ : ಶಂ.ಧೋ. ವಿದ್ವಾಂಸ, ಸಂಪಾದಕರು, ಮಾಸಿಕ ‘ವ್ಯಾಯಾಮ’, ೧೫.೨.೧೯೫೭)