|

ಗೋರಖಪುರ (ಉತ್ತರ ಪ್ರದೇಶ) – ವಸ್ತುಗಳನ್ನು ಖರೀದಿಸುವಾಗ, ಆ ವಸ್ತುವಿನ ಮೇಲೆ ‘ಹಲಾಲ್ ಪ್ರಮಾಣಪತ್ರ’ ಎಂದು ಬರೆದಿಲ್ಲವಷ್ಟೇ? ಎಂದು ಖಚಿತವಾಗಿ ಪರಿಶೀಲಿಸಿ. ನಾವು ರಾಜ್ಯದಲ್ಲಿ ಅದರ ಮೇಲೆ ನಿಷೇಧ ಹೇರಿದ್ದೇವೆ. ಉತ್ತರಪ್ರದೇಶದಲ್ಲಿ ಯಾರೂ ಅಂತಹ ಉತ್ಪನ್ನವನ್ನು ಮಾರಾಟ ಮಾಡುವ ಧೈರ್ಯ ಮಾಡುವುದಿಲ್ಲ ಎಂದು ನನಗೆ ಅನಿಸುತ್ತದೆ; ಆದರೆ ನಿಮಗೆ ಆಶ್ಚರ್ಯವಾಗಬಹುದು, ಸಾಬೂನಿಗೂ ಹಲಾಲ್ ಪ್ರಮಾಣಪತ್ರ, ಬಟ್ಟೆಗಳಿಗೂ ಹಲಾಲ್ ಪ್ರಮಾಣಪತ್ರ! ನಾವು ಈ ಪ್ರಕರಣದಲ್ಲಿ ವಿಚಾರಣೆ ಪ್ರಾರಂಭಿಸಿದಾಗ, ದೇಶದಲ್ಲಿ ಹಲಾಲ್ ಪ್ರಮಾಣಪತ್ರದ ಹೆಸರಿನಲ್ಲಿ ಸುಮಾರು 25 ಸಾವಿರ ಕೋಟಿ ರೂಪಾಯಿಗಳ ವ್ಯವಹಾರ ನಡೆಯುತ್ತದೆ ಎಂದು ತಿಳಿಯಿತು. ಭಾರತ ಸರಕಾರ ಅಥವಾ ಯಾವುದೇ ರಾಜ್ಯ ಸರಕಾರದ ಸಂಸ್ಥೆ ಇವುಗಳನ್ನು ಮಾನ್ಯತೆ ಮಾಡಿಲ್ಲ. ಈ ಸಂಪೂರ್ಣ ಮೊತ್ತವನ್ನು ಜಿಹಾದಿ ಭಯೋತ್ಪಾದನೆ, ಲವ್ ಜಿಹಾದ್ ಮತ್ತು ಮತಾಂತರಕ್ಕಾಗಿ ಬಳಸಲಾಗುತ್ತದೆ. ಉತ್ತರ ಪ್ರದೇಶದಲ್ಲಿ ಈ ವಿರುದ್ಧ ದೊಡ್ಡ ಮಟ್ಟದ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಲ್ಲಿ ಮಾಹಿತಿ ನೀಡಿದರು. ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋರಖಪುರ ವಿಭಾಗವು ಆಯೋಜಿಸಿದ್ದ ‘ದೀಪೋತ್ಸವದ ಮೂಲಕ ರಾಷ್ಟ್ರೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹಲಾಲ್ ಪ್ರಮಾಣಪತ್ರದ ಹೆಸರಿನಲ್ಲಿ ಒಂದು ಪೈಸೆಯನ್ನೂ ನೀಡಬೇಡಿ!
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾತು ಮುಂದುವರೆಸಿ, ಹಲಾಲ್ ಪ್ರಮಾಣಪತ್ರದ ಹೆಸರಿನಲ್ಲಿ ಭಾರತೀಯ ಗ್ರಾಹಕರನ್ನು ವಂಚಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಸ್ತುಗಳನ್ನು ತೆಗೆದುಕೊಳ್ಳುವಾಗ ಜಿ.ಎಸ್.ಟಿ.ಯನ್ನು (ಸರಕು ಮತ್ತು ಸೇವಾ ತೆರಿಗೆ) ಪಾವತಿಸಿ; ಆದರೆ ಹಲಾಲ್ ಪ್ರಮಾಣಪತ್ರದ ಹೆಸರಿನಲ್ಲಿ ಒಂದು ಪೈಸೆಯನ್ನೂ ನೀಡಬೇಡಿ; ಏಕೆಂದರೆ ಆ ಹಣವನ್ನು ನಮ್ಮ ವಿರುದ್ಧ ರೂಪಿಸಲಾಗುವ ಪಿತೂರಿಗಳಲ್ಲಿ ಬಳಸಲಾಗುತ್ತದೆ. ಈ ಪಿತೂರಿ ಬಹಳ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಬಲರಾಮಪುರದಲ್ಲಿ ‘ಛಾಂಗುರ್’ ಎಂಬ ವ್ಯಕ್ತಿಯನ್ನು ಇದೇ ಪ್ರಕರಣದಲ್ಲಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ರಾಜಕೀಯ ಇಸ್ಲಾಂ ಸನಾತನ ಧರ್ಮಕ್ಕೆ ದೊಡ್ಡ ಹೊಡೆತ ನೀಡಿದೆ!
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾತು ಮುಂದುವರೆಸಿ, ಭಾರತದ ಇತಿಹಾಸದಲ್ಲಿ ಬ್ರಿಟಿಷ್ ಮತ್ತು ಫ್ರೆಂಚ್ ವಸಾಹತುಶಾಹಿಯ ಉಲ್ಲೇಖವನ್ನು ಯಾವಾಗಲೂ ಮಾಡಲಾಗುತ್ತದೆ; ಆದರೆ ಭಾರತದಲ್ಲಿನ ರಾಜಕೀಯ ಇಸ್ಲಾಂ ಬಗ್ಗೆ ಬಹಳ ಕಡಿಮೆ ಉಲ್ಲೇಖ ಕಂಡುಬರುತ್ತದೆ. ರಾಜಕೀಯ ಇಸ್ಲಾಂ ನಮ್ಮ ಶ್ರದ್ಧೆಯ ಮೇಲೆ ದಾಳಿ ಮಾಡಿತು. ನಮ್ಮ ಪೂರ್ವಜರು ಕೇವಲ ಇಂಗ್ಲಿಷ್ ಮತ್ತು ಫ್ರೆಂಚ್ ಆಡಳಿತದ ವಿರುದ್ಧ ಮಾತ್ರವಲ್ಲ, ರಾಜಕೀಯ ಇಸ್ಲಾಂ ವಿರುದ್ಧವೂ ಹೋರಾಡಿದರು. ಇದೇ ರಾಜಕೀಯ ಇಸ್ಲಾಂ ಸನಾತನ ಧರ್ಮಕ್ಕೆ ದೊಡ್ಡ ಹೊಡೆತ ನೀಡಿದೆ. ಛತ್ರಪತಿ ಶಿವಾಜಿ ಮಹಾರಾಜರು, ಗುರು ಗೋವಿಂದ ಸಿಂಗ್, ಮಹಾರಾಣಾ ಪ್ರತಾಪ್, ಮಹಾರಾಣಾ ಸಂಗಾ ಅವರಂತಹ ಮಹಾನ್ ಯೋಧರು ರಾಜಕೀಯ ಇಸ್ಲಾಂ ವಿರುದ್ಧ ಹೋರಾಡಿದ್ದಾರೆ; ಆದರೆ ಇತಿಹಾಸದ ಈ ಭಾಗವು ಯಾವಾಗಲೂ ನಿರ್ಲಕ್ಷಿಸಲ್ಪಟ್ಟಿದೆ.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಹಲಾಲ್ ಪ್ರಮಾಣಪತ್ರಗಳ ಮೇಲೆ ನಿಷೇಧವಿದ್ದರೂ, ಇತರ ರಾಜ್ಯಗಳಲ್ಲಿ ಅಂತಹ ನಿಷೇಧವಿಲ್ಲದ ಕಾರಣ ಅವು ಅಲ್ಲಿ ಮಾರಾಟವಾಗುತ್ತವೆ. ಅದರಿಂದ ಜಿಹಾದಿಗಳಿಗೆ ಹಣ ಸಿಗುತ್ತಿದೆ. ಭಾಜಪ ಸರಕಾರ ಅನೇಕ ರಾಜ್ಯಗಳಲ್ಲಿರುವಾಗ ಅಲ್ಲಿಯೂ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮೇಲೆ ನಿಷೇಧ ಹೇರಬೇಕು. ಮೂಲತಃ ಕೇಂದ್ರದಲ್ಲಿರುವ ಭಾಜಪ ಸರಕಾರವೇ ಇಡೀ ದೇಶದಲ್ಲಿ ಈ ನಿಷೇಧವನ್ನು ಹೇರಬೇಕು ಎಂದು ರಾಷ್ಟ್ರಾಭಿಮಾನಿ ಮತ್ತು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತದೆ ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ