
ಮುಂಬಯಿ, ಅಕ್ಟೋಬರ್ ೨೧ (ವರದಿ) – ೯೫೦ ವರ್ಷಗಳಷ್ಟು ಪ್ರಾಚೀನ ಮತ್ತು ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿರುವ ಸ್ಮಾರಕವಾಗಿರುವ ಥಾಣೆ ಜಿಲ್ಲೆಯ ಅಂಬರನಾಥದಲ್ಲಿರುವ ಶಿವಮಂದಿರಕ್ಕೆ ಬಿರುಕುಗಳು ಕಾಣಿಸಿಕೊಂಡಿವೆ. ಅನೇಕ ಸ್ಥಳಗಳಲ್ಲಿ ದೇವಾಲಯದ ಅವಶೇಷಗಳು ಒಡೆದಿವೆ, ದೇವಾಲಯದ ಮೇಲಿನ ಅನೇಕ ಶಿಲ್ಪಗಳು ಭಗ್ನಗೊಂಡಿವೆ. ಇಷ್ಟೊಂದು ದುಸ್ಥಿತಿಯಾದರೂ ಭಾರತೀಯ ಪುರಾತತ್ವ ಇಲಾಖೆಯು ಈ ದೇವಾಲಯದ ಸಂರಕ್ಷಣೆಗಾಗಿ ಯಾವುದೇ ಯೋಜನೆಯನ್ನು ಮಾಡಿಲ್ಲ. ಈ ದೇವಾಲಯವು ದೇಶದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.

‘ಸನಾತನ ಪ್ರಭಾತ’ದ ಪ್ರತಿನಿಧಿ ಶ್ರೀ. ಪ್ರೀತಮ ನಾಚಣಕರ್ ಅವರು ಮಾಹಿತಿ ಹಕ್ಕಿನ ಅಡಿಯಲ್ಲಿ ಸಲ್ಲಿಸಿದ ಅರ್ಜಿಯಿಂದಾಗಿ ಅಂಬರನಾಥ ದೇವಾಲಯದ ಸಂರಕ್ಷಣೆ ಅಥವಾ ದುರಸ್ತಿಗಾಗಿ ಪುರಾತತ್ವ ಇಲಾಖೆಯಿಂದ ಯಾವುದೇ ರೀತಿಯ ಸಮೀಕ್ಷೆಯನ್ನು ಮಾಡಲಾಗಿಲ್ಲ ಎಂಬ ಮಾಹಿತಿಯನ್ನು ಕೇಂದ್ರ ಪುರಾತತ್ವ ಇಲಾಖೆಯ ಮುಂಬಯಿಯ ವಿಭಾಗೀಯ ಕಚೇರಿಯಿಂದ ನೀಡಲಾಗಿದೆ.

ದೇವಾಲಯದ ದುಸ್ಥಿತಿ ಹೀಗಿದೆ !

ಈ ದೇವಾಲಯದ ಮೇಲೆ ಭಗವಾನ್ ಶ್ರೀವಿಷ್ಣು, ಗಣಪತಿ, ನರಸಿಂಹ ಮತ್ತು ಇತರ ದೇವತೆಗಳು ನೃತ್ಯ ಮಾಡುತ್ತಿರುವ ಶಿಲ್ಪಗಳಿವೆ. ಇವುಗಳಲ್ಲಿ ಬಹುತೇಕ ಶಿಲ್ಪಗಳು ಒಡೆದಿವೆ. ಕೆಲವು ಶಿಲ್ಪಗಳ ಶಿರಗಳು ಮುರಿದಿವೆ, ಇನ್ನೂ ಕೆಲವದರ ಅಂಗಾಂಗಗಳು ಮುರಿದಿವೆ. ಅನೇಕ ಸ್ಥಳಗಳಲ್ಲಿ ದೇವಾಲಯದ ಕೆಲವು ಭಾಗಗಳು ಒಡೆದಿವೆ. ಕಳೆದ ಹಲವು ವರ್ಷಗಳಿಂದ ಈ ದೇವಾಲಯದ ಸಂರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಪ್ರಸ್ತುತ ಈ ದೇವಾಲಯದ ಸ್ಥಿತಿ ಅತ್ಯಂತ ಬಿಗಡಾಯಿಸಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”