ನವೆಂಬರ್ ೨ ರಂದು ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೆರವಣಿಗೆಗೆ ಅನುಮತಿ!

ಕರ್ನಾಟಕ ಉಚ್ಚ ನ್ಯಾಯಾಲಯದಿಂದ ಸಂಘದ್ವೇಷಿ ಕಾಂಗ್ರೆಸ್ ಸರಕಾರಕ್ಕೆ ಆಘಾತ

ಬೆಂಗಳೂರು – ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಚಿತ್ತಾಪುರದಲ್ಲಿ ನವೆಂಬರ್ ೨ರಂದು ಮೆರವಣಿಗೆ ನಡೆಸಲು ಕರ್ನಾಟಕ ಉಚ್ಚ ನ್ಯಾಯಾಲಯವು ಅನುಮತಿ ನೀಡಿದೆ. ಈ ಮೆರವಣಿಗೆಗೆ ಆಡಳಿತವು ಅನುಮತಿ ನಿರಾಕರಿಸಿತ್ತು. ಇದರ ವಿರುದ್ಧ ಕಲಬುರಗಿಯ ಸಂಘದ ಸಂಚಾಲಕ ಅಶೋಕ ಪಾಟೀಲ್ ಅವರು ಅರ್ಜಿ ಸಲ್ಲಿಸಿದ್ದರು.

೧. ಆಡಳಿತವು, ಮೆರವಣಿಗೆಯಿಂದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗಬಹುದು; ಏಕೆಂದರೆ ಅದೇ ಸಮಯದಲ್ಲಿ, ಅದೇ ಸ್ಥಳದಲ್ಲಿ ‘ಭೀಮ ಆರ್ಮಿ’ ಮತ್ತು ‘ಭಾರತೀಯ ದಲಿತ ಪ್ಯಾಂಥರ್’ ಈ ಸಂಘಟನೆಗಳು ಸಹ ಜಾಥಾ ನಡೆಸಲು ಕಾರ್ಯಕ್ರಮ ಹಾಕಿಕೊಂಡಿದ್ದವು. ಅವರಿಗೂ ಅನುಮತಿ ನೀಡಲಾಗಿರಲಿಲ್ಲ.

೨. ಈ ಬಗ್ಗೆ ಪಾಟೀಲ್ ಅವರ ನ್ಯಾಯವಾದಿಗಳು, ಅಧಿಕಾರಿಗಳು ಎತ್ತಿದ ಎಲ್ಲಾ ಸಂದೇಹಗಳಿಗೆ ಉತ್ತರ ನೀಡಲಾಗಿದೆ ಮತ್ತು ರಾಜ್ಯದ ಇತರ ಸ್ಥಳಗಳಲ್ಲಿಯೂ ಇದೇ ರೀತಿಯ ಕಾರ್ಯಕ್ರಮಗಳು ಸಂಪೂರ್ಣ ಶಾಂತಿಯುತವಾಗಿ ನಡೆದಿವೆ ಎಂದು ಹೇಳಿದರು.

೩. ಈ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಪಷ್ಟಪಡಿಸಿದ್ದು, ‘ಎಲ್ಲಾ ಸಂಘಟನೆಗಳು ಅನುಮತಿ ತೆಗೆದುಕೊಳ್ಳುವುದು ಅವಶ್ಯಕ ಎಂದು ಮಾತ್ರ ಹೇಳಲಾಗಿದೆ. ಈ ನಿಯಮವು ಭಾಜಪ ಸರಕಾರದ ಅವಧಿಯಲ್ಲಿ, ಅಂದರೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಅಧಿಕಾರಾವಧಿಯಲ್ಲಿಯೇ ಜಾರಿಗೆ ಬಂದಿತ್ತು, ನಾವು ಕೇವಲ ಅದನ್ನು ಪುನರುಚ್ಚರಿಸಿದ್ದೇವೆ. ಆಗ ಭಾಜಪ ಏಕೆ ವಿರೋಧಿಸಲಿಲ್ಲ?’ (ಸಂಘವು ಅನುಮತಿ ಪಡೆಯಲು ಪ್ರಯತ್ನಿಸಿದರೂ, ಆಡಳಿತವು ಅನುಮತಿ ನಿರಾಕರಿಸಿದ ಘಟನೆ ಇರುವಾಗ, ಹಾಸ್ಯಾಸ್ಪದ ಉತ್ತರ ನೀಡುವ ಮುಖ್ಯಮಂತ್ರಿಗಳು ಏನು ಆಡಳಿತ ನಡೆಸುತ್ತಿರಬಹುದು ಎಂಬುದು ಗಮನಕ್ಕೆ ಬರುತ್ತದೆ! – ಸಂಪಾದಕರು)

ಸಂಪಾದಕೀಯ ನಿಲುವು

ಸಂಘದ್ವೇಷದ ಆಧಾರದ ಮೇಲೆ ಕಾಂಗ್ರೆಸ್ ಪ್ರಗತಿ(ಅಧೋಗತಿ)ಪರ ಮತ್ತು ಮುಸಲ್ಮಾನರ ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿದೆ, ಆದರೆ ದೇಶದ ಜನರು ಅದನ್ನು ಅಧಿಕಾರದಿಂದ ಕಿತ್ತೆಸೆದಿದ್ದಾರೆ ಎಂಬುದು ಇನ್ನೂ ಅದಕ್ಕೆ ಅರ್ಥವಾಗಿಲ್ಲ ಮತ್ತು ಅದನ್ನು ಪುನಃ ಪುನಃ ಮಾಡಲು ಪ್ರಯತ್ನಿಸುತ್ತದೆ!