‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ನಂತರ ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಸನಾತನದ ೨೬ ನೆಯ ಸಮಷ್ಟಿ ಸಂತರಾದ ಪೂ. ಸದಾಶಿವ (ಭಾವೂ) ಪರಬ್‌ (ವಯಸ್ಸು ೮೪ ವರ್ಷಗಳು) ಇವರ ಮನಸ್ಸಿನಲ್ಲಿ ನಡೆದ ವಿಚಾರಪ್ರಕ್ರಿಯೆ !


‘ಸನಾತನ ರಾಷ್ಟ್ರದ ಸಂಕಲ್ಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಅಂದರೆ ಈ ಕಲಿಯುಗದಲ್ಲಿನ ಪ್ರತ್ಯಕ್ಷ ಶ್ರೀವಿಷ್ಣುವಿನ ಅವತಾರವಾಗಿರುವ ನನ್ನ ಗುರುದೇವರು ! ೧೯೯೮ ರಲ್ಲಿ ಗುರುದೇವರು, ೨೦೨೫ ರಲ್ಲಿ ‘ಹಿಂದೂ ರಾಷ್ಟ್ರವು ಬರಲಿದೆ’ ಎಂಬ ಭವಿಷ್ಯವನ್ನು ನುಡಿದಿದ್ದರು ! ಅದಕ್ಕನುಸಾರ, ಈಶ್ವರನೇ ಆಯೋಜನೆ ಮಾಡಿ, ೨೦೨೫ ರ ಮೇ ೧೭ ರಿಂದ ೧೯ ರವರೆಗೆ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಮತ್ತು ಗುರುದೇವರ ೮೩ ನೆಯ ಜನ್ಮೋತ್ಸವವನ್ನು ಭವ್ಯ ಮತ್ತು ದಿವ್ಯವಾಗಿ ‘ನ ಭೂತೋ…’ (ಹಿಂದೆಂದೂ ಕಂಡರಿಯದ) ಸ್ವರೂಪದಲ್ಲಿ ನಡೆಸಿದನು. ಹಿಂದೂ ರಾಷ್ಟ್ರದ ಶುಭಾರಂಭವನ್ನು ಶಂಖನಾದದೊಂದಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಶುಭಹಸ್ತಗಳಿಂದ ಹಿಂದೂ ರಾಷ್ಟ್ರದ ಧ್ವಜಾರೋಹಣ ಮಾಡಿ ಮಾಡಲಾಯಿತು. ಈ ಅದ್ಭುತ ಮಹೋತ್ಸವವನ್ನು ನೋಡಿ ನನ್ನ ಮನಸ್ಸಿನಲ್ಲಿ ಮೂಡಿದ ವಿಚಾರಗಳನ್ನು ಇಲ್ಲಿ ನೀಡುತ್ತಿದ್ದೇನೆ.

(ಪೂ.) ಸದಾಶಿವ (ಭಾವೂ) ಪರಬ್‌
ಟಿಪ್ಪಣಿ: ‘ಈ ಪ್ರಸಾರಕಾರ್ಯದಲ್ಲಿ ಭಾಗವಹಿಸಲು ನಾನು ಸ್ವತಃ ಪ್ರಸಾರಕ್ಕೆ ಹೋಗಬಹುದು. ಸನಾತನ ಸಂಸ್ಥೆ ಮತ್ತು ಸನಾತನದ ಸಾಧಕರಿಗೆ ಆಗುವ ಕೆಟ್ಟ ಶಕ್ತಿಗಳ ತೊಂದರೆಗಳನ್ನು ದೂರಗೊಳಿಸಲು ನಾನು ಮಂತ್ರಗಳನ್ನು ಹೇಳಬಹುದು ಮತ್ತು ನಾಮಜಪವನ್ನು ಮಾಡಬಹುದು.’ – ಪೂ. ಸದಾಶಿವ (ಭಾವೂ) ಪರಬ್‌

‘೮೪ ವರ್ಷ ವಯಸ್ಸಿನ ಪೂ. ಸದಾಶಿವ (ಭಾವೂ) ಪರಬ್‌ ಇವರ ಈ ವಿಚಾರಗಳು ಎಲ್ಲರಿಗೂ ಆದರ್ಶಪ್ರಾಯವಾಗಿವೆ. ಅವರು ಸಾಧಕರು ಮತ್ತು ಹಿಂದುತ್ವನಿಷ್ಠರ ಮುಂದೆ ಒಂದು ಆದರ್ಶವನ್ನೇ ಇಟ್ಟಿದ್ದಾರೆ. ಎಲ್ಲರೂ ಈ ಲೇಖನವನ್ನು ಪುನಃ ಪುನಃ ಓದಿದರೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಎಲ್ಲರಿಗೂ ಪ್ರೋತ್ಸಾಹ ಸಿಗುತ್ತದೆ ಮತ್ತು ಅದಕ್ಕನುಸಾರ ಕಾರ್ಯವನ್ನು ಮಾಡಿದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವು ಪೂರ್ಣಗೊಳ್ಳಲು ಸಹಾಯವಾಗುವುದು.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

೧. ‘ಸಾಧಕರೇ, ಹಿಂದೂಗಳನ್ನು ಸಂಘಟಿಸಿ ಹಿಂದೂ ರಾಷ್ಟ್ರದ ಆದರ್ಶವನ್ನು ಜಗತ್ತಿನೆದುರು ಇಡುವುದು,’ ಈ ಗುರಿಯನ್ನು ಇಟ್ಟುಕೊಳ್ಳಿರಿ ಮತ್ತು ಅದರಂತೆ ಕೃತಿ ಮಾಡಿರಿ !

ಪ.ಪೂ. ಗುರುದೇವರು ಸಂಪೂರ್ಣ ಜಗತ್ತಿನಾದ್ಯಂತ ಬರುವ ಹಿಂದೂ ರಾಷ್ಟ್ರಕ್ಕೆ ಅಡಿಪಾಯ ಹಾಕಿದ್ದಾರೆ. ಆದ್ದರಿಂದ ‘ಹಿಂದೂಗಳನ್ನು ಸಂಘಟಿಸಿ ಹಿಂದೂ ರಾಷ್ಟ್ರದ ಆದರ್ಶವನ್ನು ಜಗತ್ತಿನೆದುರು ಇಡುವುದು’ ನಮ್ಮ ಗುರಿಯಾಗಬೇಕು. ಅದಕ್ಕಾಗಿ ಈಗ ಈಶ್ವರೇಚ್ಛೆಯಂತೆ ಸಮಸ್ತ ಹಿಂದೂ ಸಮಾಜವನ್ನು ಒಗ್ಗೂಡಿಸಬೇಕಾಗಿದೆ. ಅದಕ್ಕಾಗಿ, ‘ಮುಂದಿನಂತೆ ಕೃತಿ ಮಾಡಬಹುದು’, ಎಂದು ನನಗೆ ಅನಿಸುತ್ತದೆ.

ಅ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿರುವ ಗುರುಕೃಪಾಯೋಗಾನುಸಾರ ಸಾಧನೆಯನ್ನು ಎಲ್ಲ ಹಿಂದೂ ಸಮಾಜಕ್ಕೆ ಹೇಳಿ, ಅವರಿಂದ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು.

ಆ. ಮೊದಲು ಊರೂರಿಗೆ ಹೋಗಿ ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುವ ಸನಾತನ ಸಂಸ್ಥೆಯ ಎಲ್ಲಾ ಸಾಧಕರಿಗಾಗಿ ಸತ್ಸಂಗ ತೆಗೆದು ಕೊಳ್ಳಬೇಕು. ಅವರನ್ನು ಸಾಧನೆಯಲ್ಲಿ ಸಬಲರಾಗಿಸುವುದು ಆವಶ್ಯಕವಾಗಿದೆ.

ಇ. ಜವಾಬ್ದಾರ ಸಾಧಕರು ಮತ್ತು ಸಂತರ ಮಾರ್ಗದರ್ಶನಕ್ಕನುಸಾರ ಸಾಧಕರು ಪ್ರಯತ್ನಿಸುವುದು ಆವಶ್ಯಕವಾಗಿದೆ. ಸಾಧಕರು ತಮ್ಮ ವ್ಯಷ್ಟಿ ಸಾಧನೆಯ ವರದಿಯನ್ನು ನಿಯಮಿತವಾಗಿ ಕೊಡಬೇಕು. ಜವಾಬ್ದಾರ ಸಾಧಕರು ಆಯೋಜನೆ ಮಾಡಿ, ಇತರ ಸಾಧಕರ ಸತ್ಸಂಗ ಮತ್ತು ವರದಿ ಇತ್ಯಾದಿ ತೆಗೆದುಕೊಳ್ಳಲು ಅವರ ಸಾಧನೆಗೆ ಅನುಕೂಲವಾಗುವಂತೆ ಸುವ್ಯವಸ್ಥಿತಗೊಳಿಸಬೇಕು. ಆಗ ಈ ಸಾಧಕರು ಮುಂದೆ ಸಮಾಜಕ್ಕೆ ಹೋಗಿ ಪ್ರಸಾರ ಮಾಡಿ ಹಿಂದುತ್ವನಿಷ್ಠರನ್ನು ಒಗ್ಗೂಡಿಸಬಹುದು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಗಬಹುದು.

ಈ. ಊರೂರುಗಳಲ್ಲಿ ಹಿಂದೂ ರಾಷ್ಟ್ರಜಾಗೃತಿ ಸಭೆಗಳನ್ನು ಆಯೋಜಿಸಿ ಹಿಂದೂಗಳಿಗೆ ಧರ್ಮದ ಮಹತ್ವವನ್ನು ತಿಳಿಸಿ, ಅವರ ಊರುಗಳಲ್ಲಿ ಸನಾತನ ಸಂಸ್ಥೆಯ ಸತ್ಸಂಗವನ್ನು ತೆಗೆದು ಕೊಳ್ಳಲು ಪ್ರಾರಂಭಿಸಬೇಕು.

ಉ. ಸಕ್ಷಮ ಸಾಧಕರ ಸತ್ಸಂಗದಲ್ಲಿರುವ ಹಿಂದುತ್ವನಿಷ್ಠರನ್ನು ಸಂಪರ್ಕಿಸಿ ಮತ್ತು ಅವರಿಗೆ ಹಿಂದೂ ಧರ್ಮದ ಮಹತ್ವವನ್ನು ಹೇಳಿ, ಅವರನ್ನೂ ಈ ಕಾರ್ಯದಲ್ಲಿ ಭಾಗವಹಿಸುವಂತೆ ಉತ್ತೇಜಿಸಬೇಕು.

೨. ಹಿಂದುತ್ವನಿಷ್ಠರು ಸಾಧನೆಯ ಪ್ರಯತ್ನ ಮಾಡಿದರೆ ಸಂಪೂರ್ಣ ಹಿಂದೂ ಸಮಾಜವು ಧರ್ಮಾಧಿಷ್ಠಿತವಾಗಿ ಹಿಂದೂ ರಾಷ್ಟ್ರದ ಅಡಿಪಾಯವು ಸುಭದ್ರವಾಗುವುದು !

ಹಿಂದುತ್ವನಿಷ್ಠರು ಸಾಧನೆಯ ಪ್ರಯತ್ನ ಮಾಡಿದರೆ ಸಂಪೂರ್ಣ ಹಿಂದೂ ಸಮಾಜವು ಧರ್ಮಾಧಿಷ್ಠಿತವಾಗಿ ಹಿಂದೂ ರಾಷ್ಟ್ರದ ಅಡಿಪಾಯವು ಸುಭದ್ರವಾಗುವುದು. ಈ ಆಯೋಜನೆ ಮಾಡಲು ಜವಾಬ್ದಾರ ಸಾಧಕರು, ಶೇ. ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವಿರುವ ಸಾಧಕರು, ಸಮಷ್ಟಿ ಸಂತರು ಮತ್ತು ಸದ್ಗುರುಗಳ ಜಿಲ್ಲೆಗಳಿಗನುಸಾರ ಗುಂಪುಗಳನ್ನು ಮಾಡಿ ಪ್ರಸಾರ ಮಾಡಬೇಕಾಗುವುದು. ಅದರಿಂದ ಹಿಂದೂ ರಾಷ್ಟ್ರದ ಅಡಿಪಾಯ ಭದ್ರವಾಗುವುದು ಮತ್ತು ಹಿಂದೂ ಸಮಾಜವು ಶಾಂತಿಯುತವಾಗಿ ಬಾಳಬಹುದು. ಆಗಲೇ ಸತ್ಯಯುಗವು ಬಂದು ಈಶ್ವರೀ ರಾಜ್ಯವು ಆರಂಭವಾಗಬಹುದು.’

‘ಪ.ಪೂ. ಗುರುದೇವರು ನನಗೆ ಇದನ್ನು ಸೂಚಿಸಿದರು, ಅದಕ್ಕಾಗಿ ನಾನು ಅವರ ಕೋಮಲ ಚರಣಗಳಲ್ಲಿ ಕೋಟಿಶಃ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.’

– (ಪೂ.) ಸದಾಶಿವ (ಭಾವೂ) ಪರಬ್‌ (ಸನಾತನದ ೨೬ ನೇ (ಸಮಷ್ಟಿ) ಸಂತರು, ವಯಸ್ಸು ೮೪ ವರ್ಷಗಳು), ಸನಾತನ ಆಶ್ರಮ, ದೇವದ, ಪನವೇಲ. (೫.೬.೨೦೨೫)