|

ನವದೆಹಲಿ – ಭಾರತೀಯ ಸೈನಿಕರು ಸ್ವದೇಶಿ ನಿರ್ಮಿತ ‘ಮಿಲಿಟರಿ ಕಾಂಬ್ಯಾಟ್ ಪ್ಯಾರಾಚೂಟ್ ಸಿಸ್ಟಮ್’ನ ಯಶಸ್ವಿ ಪರೀಕ್ಷೆಯನ್ನು ನಡೆಸಿದರು. ಭಾರತೀಯ ವಾಯುಪಡೆಯ 3 ಸೈನಿಕರು 32 ಸಾವಿರ ಅಡಿ ಎತ್ತರದಿಂದ ಜಿಗಿಯುವಾಗ ‘ಪ್ಯಾರಾಚೂಟ್’ ಅನ್ನು ಬಳಸಿದರು.
‘ಪ್ಯಾರಾಚೂಟ್’ನ ನಿಯಂತ್ರಣ, ಭೂಮಿಯ ಮೇಲೆ ಇಳಿಯುವುದು ಮತ್ತು ‘ನ್ಯಾವಿಗೇಷನ್’ ಸಾಮರ್ಥ್ಯವನ್ನು ಸುಧಾರಿಸುವ ಉದ್ದೇಶದಿಂದ ಈ ಪರೀಕ್ಷೆ ಕೈಗೊಳ್ಳಲಾಗಿತ್ತು. ‘ಪ್ಯಾರಾಚೂಟ್’ ವ್ಯವಸ್ಥೆಯಲ್ಲಿ ‘ನ್ಯಾವಿಗೇಷನ್ ವಿಥ್ ಇಂಡಿಯನ್ ಕಾನ್ಸ್ಟೆಲೇಷನ್’ ಎಂಬ ಸ್ವದೇಶಿ ಉಪಗ್ರಹ ‘ನ್ಯಾವಿಗೇಷನ್’ ವ್ಯವಸ್ಥೆಯಿದೆ. ಈ ‘ಪ್ಯಾರಾಚೂಟ್’ ಅನ್ನು ‘ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ’ಯ (ಡಿ.ಆರ್.ಡಿ.ಓ. – ‘ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್’) ‘ದಿ ಏರಿಯಲ್ ಡೆಲಿವರಿ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್, ಆಗ್ರಾ’ ಮತ್ತು ‘ದಿ ಡಿಫೆನ್ಸ್ ಬಯೋಇಂಜಿನಿಯರಿಂಗ್ ಅಂಡ್ ಎಲೆಕ್ಟ್ರೋಮೆಡಿಕಲ್ ಲ್ಯಾಬೊರೇಟರಿ, ಬೆಂಗಳೂರು’ ಎಂಬ ಪ್ರಯೋಗಾಲಯಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.
ಈ ಸ್ವದೇಶಿ ನಿರ್ಮಿತ ‘ಪ್ಯಾರಾಚೂಟ್’ ನಿಂದಾಗಿ ಆಮದು ಮಾಡಿಕೊಳ್ಳುವ ಉಪಕರಣಗಳಿಗೆ ಹೋಲಿಸಿದರೆ ನಿಯಮಿತ ನಿರ್ವಹಣೆ-ದುರಸ್ತಿಗಾಗಿ ಕಡಿಮೆ ಸಮಯ ತೆಗೆದುಕೊಳ್ಳಲಿದೆ, ಮತ್ತು ಯುದ್ಧದ ಪರಿಸ್ಥಿತಿಯಲ್ಲಿ ಭಾರತದ ಇತರ ದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಕುರಿತು ‘ಡಿ.ಆರ್.ಡಿ.ಓ.’ ಮತ್ತು ಸೈನ್ಯವನ್ನು ಅಭಿನಂದಿಸಿದ್ದಾರೆ.
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram