|

ಸಾವಂತವಾಡಿ (ಸಿಂಧುದುರ್ಗ ಜಿಲ್ಲೆ) – ನಗರದ ಬಹಿರ್ ವಾಡಾ ಪ್ರದೇಶದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ೮೦ ಕೆಜಿ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಸರಫರಾಜ್ ಭಾವುದ್ದೀನ್ ಖ್ವಾಜಾ (೪೫ ವರ್ಷ) ಹಾಗೂ ಸನೋಬರ್ ಭಾವುದ್ದೀನ್ ಖ್ವಾಜಾ (೪೦ ವರ್ಷ) ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯನ್ನು ಅಕ್ಟೋಬರ್ ೧೪ ರಂದು ನಡೆಸಲಾಗಿದೆ. ಈ ವಿಷಯದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಈ ಪ್ರಕರಣದ ಘಟನಾವಳಿ…
೧. ಗೋಮಾಂಸದ ಬಗ್ಗೆ ಮಾಹಿತಿ ಲಭಿಸಿದ ನಂತರ, ಸಾವಂತವಾಡಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಮೋಲ್ ಚವ್ಹಾಣ್ ನೇತೃತ್ವದಲ್ಲಿ ೧೫ ಪೊಲೀಸ್ ಸಿಬ್ಬಂದಿಯ ತಂಡವು ಶಂಕಿತರ ಮನೆ ಮತ್ತು ಆವರಣದ ಮೇಲೆ ಕಣ್ಣಿಟ್ಟಿತ್ತು.
೨. ನಂತರ ಮನೆಯ ಶೋಧಕ್ಕಾಗಿ ಪೊಲೀಸರು ತಲುಪಿದಾಗ, ಮನೆಯಲ್ಲಿದ್ದವರು ಆರಂಭದಲ್ಲಿ ಮನೆಯ ಬಾಗಿಲುಗಳನ್ನು ತೆರೆಯಲು ನಿರಾಕರಿಸಿದರು. ಆಗ ಪೊಲೀಸರು ತಮ್ಮ ವಾಹನದ ಧ್ವನಿವರ್ಧಕ ವ್ಯವಸ್ಥೆಯ ಮೂಲಕ “ಪೊಲೀಸರು ಕಾನೂನುಬದ್ಧ ಪ್ರಕ್ರಿಯೆಯ ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ, ಬಾಗಿಲುಗಳನ್ನು ತೆರೆಯದಿದ್ದರೆ, ಬಾಗಿಲುಗಳು ಮತ್ತು ಕಿಟಕಿಗಳನ್ನು ಮುರಿದು ಮನೆಗೆ ಪ್ರವೇಶಿಸಬೇಕಾಗುತ್ತದೆ” ಎಂದು ಹೇಳಿದರು. ಇದರ ನಂತರ, ಶಂಕಿತರು ಮನೆಯ ಬಾಗಿಲುಗಳನ್ನು ತೆರೆದರು.
೩. ಬಾಗಿಲು ತೆರೆದ ನಂತರ ಪೊಲೀಸರು ಮನೆಯನ್ನು ಶೋಧಿಸಿದಾಗ ೮೦ ಕೆಜಿ ಗೋಮಾಂಸ ಪತ್ತೆಯಾಯಿತು. ಆದ್ದರಿಂದ, ಪೊಲೀಸರು ತಕ್ಷಣ ಪಶುವೈದ್ಯಕೀಯ ಅಧಿಕಾರಿಯ ಉಪಸ್ಥಿತಿಯಲ್ಲಿ ಈ ಮಾಂಸದ ಪಂಚನಾಮೆ ಮಾಡಿದರು.
೪. ಪೊಲೀಸರು ಸರಫರಾಜ್ ಭಾವುದ್ದೀನ್ ಖ್ವಾಜಾದ ಮನೆಯಿಂದ ಈ ೮೦ ಕೆಜಿ ಮಾಂಸ, ಒಂದು ದೊಡ್ಡ ಫ್ರೀಜರ್, ತೂಕದ ಯಂತ್ರ, ಮಾಂಸ ಕತ್ತರಿಸುವ ಚಾಕು ಮತ್ತು ಪ್ಲಾಸ್ಟಿಕ್ ಚೀಲಗಳು ಸೇರಿದಂತೆ ವಸ್ತುಗಳನ್ನು ವಶಪಡಿಸಿಕೊಂಡರು.
ಸಂಪಾದಕೀಯ ನಿಲುವುಗೋಹತ್ಯೆ ವಿರೋಧಿ ಕಾನೂನಿಗೆ ಕೊಂಚವೂ ಭಯವಿಲ್ಲದ ಕಾರಣ, ಇಂತಹ ಘಟನೆಗಳು ಮತಾಂಧರಿಂದ ನಡೆಯುತ್ತವೆ. ಇದನ್ನು ತಡೆಯಲು ಕಾನೂನಿನ ಕಠಿಣ ಕ್ರಮ ಅಗತ್ಯ! |
‘ಎಸ್.ಐ.ಆರ್.’ ಪ್ರಕ್ರಿಯೆ ನಡೆಸುತ್ತಿದ್ದ ಶಿಕ್ಷಕನ ಮೇಲೆ ೩ ಜನ ಮತಾಂಧರಿಂದ ಹಲ್ಲೆ !
ನಟ ಅಮೀರ್ ಖಾನ್ ಅವರ ಮಲ ಸಹೋದರನ ಮೇಲೆ ಮಾಜಿ ಪತ್ನಿಯ ಗಂಭೀರ ಆರೋಪ!
ಉತ್ತರಾಖಂಡ: ೧೦೬ ಜನರಿಂದ ಹಿಂದೂ ಧರ್ಮಕ್ಕೆ ಘರವಾಪಸಿ
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case