ಹಿಂದೂ ರಾಷ್ಟ್ರಕ್ಕಾಗಿ ಸಿದ್ಧಿವಿನಾಯಕನ ಚರಣಗಳಲ್ಲಿ ಪ್ರಾರ್ಥನೆ!

ಮುಂಬಯಿ – ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರು ಮುಂಬಯಿ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಅವರು, ‘ಭಾರತ ಹಿಂದೂ ರಾಷ್ಟ್ರವಾಗಲು ನವೆಂಬರ್ ೭ ರಿಂದ ೧೬ ರ ಅವಧಿಯಲ್ಲಿ ದೆಹಲಿಯಿಂದ ವೃಂದಾವನದವರೆಗೆ ಪಾದಯಾತ್ರೆಯನ್ನು ಕೈಗೊಳ್ಳಲಾಗುವುದು’ ಎಂದು ಘೋಷಿಸಿದರು. ಅವರು ಶ್ರೀ ಸಿದ್ಧಿವಿನಾಯಕನ ದರ್ಶನ ಪಡೆದರು. ಆ ಸಮಯದಲ್ಲಿ, ಭಾರತವು ಹಿಂದೂ ರಾಷ್ಟ್ರವಾಗಲು ಅವರು ಪ್ರಾರ್ಥಿಸಿದರು. ‘ಹಿಂದೂಗಳ ಪ್ರಯತ್ನಗಳಿಂದಲೇ ಈ ಹಿಂದೂ ರಾಷ್ಟ್ರವಾಗಲಿದೆ’ ಎಂದು ಸಹ ಅವರು ಈ ವೇಳೆ ಹೇಳಿದರು. ‘ಸರ್ ತನ್ ಸೆ ಜುದಾ’ (ಶಿರಚ್ಛೇದ) ದಂತಹ ಮನಸ್ಥಿತಿಗೆ ಅವಕಾಶ ನೀಡಬೇಡಿ. ಅದಕ್ಕೆ ಸಮಾಜ ಅಥವಾ ಸಂವಿಧಾನ ಅನುಮತಿ ನೀಡುವುದಿಲ್ಲ’ ಎಂದು ಸಹ ಅವರು ಈ ವೇಳೆ ಹೇಳಿದರು.
ಶೀಘ್ರದಲ್ಲೇ ಬಂಗಾಳದಲ್ಲಿ ಕಥಾ ವಾಚನಕ್ಕಾಗಿ ಹೋಗುವುದಾಗಿ ಅವರು ಈ ವೇಳೆ ತಿಳಿಸಿದರು. ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರವು ಪ್ರವಾಹದ ಕಾರಣ ನೀಡಿ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿಯವರಿಗೆ ಬಂಗಾಳದಲ್ಲಿ ಕಥಾ ವಾಚನ ಮಾಡಲು ಅನುಮತಿ ನಿರಾಕರಿಸಿತ್ತು. ಆ ಸಮಯದಲ್ಲಿ ಅವರು ‘ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧಿಕಾರದಲ್ಲಿರುವವರೆಗೆ ಬಂಗಾಳಕ್ಕೆ ಹೋಗುವುದಿಲ್ಲ’ ಎಂದು ಹೇಳಿದ್ದರು. ‘ಭಾರತದಲ್ಲಿ ಲವ್ ಜಿಹಾದ್ ನಿಲ್ಲಬೇಕು’ ಎಂಬ ಎಚ್ಚರಿಕೆಯನ್ನೂ ಅವರು ಈ ಸಂದರ್ಭದಲ್ಲಿ ನೀಡಿದರು.
ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ತಂದೆಯ ಹತ್ಯೆ ಮಾಡಿಸಿದ ಮಗನ ಬಂಧನ
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು