ತಾಲಿಬಾನ್ ವಿದೇಶಾಂಗ ಸಚಿವರ ಭೇಟಿ ಬಳಿಕ ಭಾರತದ ವಿದೇಶಾಂಗ ಸಚಿವರ ಘೋಷಣೆ

ನವದೆಹಲಿ – ಅಫ್ಘಾನಿಸ್ತಾನದಲ್ಲಿ ಭಾರತವು ತನ್ನ ರಾಯಭಾರ ಕಚೇರಿಯನ್ನು ಪುನರಾರಂಭಿಸಲಿದೆ ಎಂದು ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಅಕ್ಟೋಬರ್ ೧೦ ರಂದು ತಾಲಿಬಾನ್ ಸರಕಾರದ ವಿದೇಶಾಂಗ ಸಚಿವ ಅಮಿರ್ ಖಾನ್ ಮುತ್ತಾಕಿ ಅವರೊಂದಿಗೆ ನಡೆದ ದ್ವಿಪಕ್ಷೀಯ ಸಭೆಯಲ್ಲಿ ಘೋಷಿಸಿದರು. ಕಾಬೂಲ್‌ನಲ್ಲಿರುವ ನಮ್ಮ ತಾಂತ್ರಿಕ ನಿಯೋಗವನ್ನು (ತಾಂತ್ರಿಕ ಪ್ರತಿನಿಧಿಗಳ) ರಾಯಭಾರ ಕಚೇರಿಯಾಗಿ ಪರಿವರ್ತಿಸಲಾಗುವುದು ಎಂದು ಸಹ ಜೈಶಂಕರ್ ಸ್ಪಷ್ಟಪಡಿಸಿದರು.
೧. ಕಾಬೂಲ್‌ನಲ್ಲಿ ಭಾರತದ ಅಧಿಕೃತ ರಾಯಭಾರ ಕಚೇರಿ ಇದ್ದುದರಿಂದ, ಈ ನಿಯೋಗವು ಈಗ ಸಂಪೂರ್ಣವಾಗಿ ರಾಯಭಾರ ಕಚೇರಿಯಂತೆ ಕಾರ್ಯ ನಿರ್ವಹಿಸಲಿದೆ. ಇದರಲ್ಲಿ ವೀಸಾ ನೀಡುವುದು, ಅಫ್ಘಾನ್ ಸರಕಾರದೊಂದಿಗೆ ಸಂಬಂಧಗಳನ್ನು ಕಾಪಾಡಿಕೊಳ್ಳುವುದು, ಭಾರತೀಯ ನಾಗರಿಕರಿಗೆ ಸಹಾಯ ಮಾಡುವುದು ಮುಂತಾದ ವಿಷಯಗಳು ಸೇರಿವೆ.
೨. ಅಮಿರ್ ಖಾನ್ ಮುತ್ತಾಕಿ ಅವರು ಅಕ್ಟೋಬರ್ ೯ ರಂದು ಒಂದು ವಾರದ ಪ್ರವಾಸಕ್ಕಾಗಿ ದೆಹಲಿಗೆ ಆಗಮಿಸಿದ್ದಾರೆ.
೩. ಆಗಸ್ಟ್ ೧೫, ೨೦೨೧ ರಂದು ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್ ನಾಯಕರ ಈ ಭೇಟಿಯು ಮೊದಲ ಮಂತ್ರಿಮಂಡಳದ ಮಟ್ಟದ ಪ್ರವಾಸವಾಗಿದೆ.
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman