
ನವ ದೆಹಲಿ – ಅಫಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲೀಬಾನ್ ಸರಕಾರದ ವಿದೇಶಾಂಗ ಸಚಿವ ಮೌಲ್ವಿ (ಇಸ್ಲಾಂ ಧರ್ಮದ ಧಾರ್ಮಿಕ ಮುಖಂಡ) ಅಮೀರ್ ಖಾನ್ ಮುತ್ತಕಿ ಅವರು ಇತ್ತೀಚೆಗೆ ಒಂದು ವಾರದ ಪ್ರವಾಸಕ್ಕಾಗಿ ನವ ದೆಹಲಿಗೆ ಬಂದಿಳಿದಿದ್ದಾರೆ. ಆಗಸ್ಟ್ ೨೦೨೧ ರಲ್ಲಿ ಅಫಘಾನಿಸ್ತಾನದಲ್ಲಿ ತಾಲೀಬಾನ್ ಅಧಿಕಾರಕ್ಕೆ ಬಂದ ನಂತರ ಅವರ ಮೊದಲ ಮಂತ್ರಿಮಂಡಲ ಮಟ್ಟದ ಭೇಟಿ ಇದಾಗಿದೆ. ಅಕ್ಟೋಬರ್ ೧೦ ರಂದು ಮುತ್ತಕಿ ಅವರು ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಭಾರತವು ಇನ್ನೂ ತಾಲೀಬಾನ್ ಆಡಳಿತದ ಅಫಘಾನಿಸ್ತಾನಕ್ಕೆ ಅಧಿಕೃತವಾಗಿ ಮಾನ್ಯತೆಯನ್ನು ನೀಡಿಲ್ಲ. ಇದೇ ಕಾರಣಕ್ಕಾಗಿ ಭಾರತವು ಅಫಘಾನ್ ರಾಯಭಾರ ಕಚೇರಿಯಲ್ಲಿ ತಾಲೀಬಾನ್‌ಗೆ ತಮ್ಮ ಧ್ವಜವನ್ನು ಹಾರಿಸಲು ಅನುಮತಿ ನೀಡಿಲ್ಲ. ಆದರೂ, ಮುತ್ತಕಿ ಅವರು ಜೈಶಂಕರ್ ಅವರನ್ನು ಭೇಟಿಯಾದಾಗ, ರಾಜತಾಂತ್ರಿಕ ಶಿಷ್ಟಾಚಾರದ ಪ್ರಕಾರ ಆತಿಥೇಯ ದೇಶದ (ಭಾರತ) ಧ್ವಜ ಮತ್ತು ಭೇಟಿ ನೀಡುವ ಸಚಿವರ ದೇಶದ ಧ್ವಜವನ್ನು ಅವರ ಹಿಂದೆ ಅಥವಾ ವೇದಿಕೆಯ ಮೇಲೆ ಇಡುವುದು ಅವಶ್ಯಕವಾಗಿದೆ.
ತಾಲೀಬಾನ್ ಸರಕಾರಕ್ಕೆ ಮಾನ್ಯತೆ ನೀಡುವ ಕುರಿತು ಚರ್ಚೆ ನಡೆಯುವ ಸಾಧ್ಯತೆ!
೨೦೨೧ ರಲ್ಲಿ ಅಮೆರಿಕನ್ ಸೈನ್ಯವು ಅಫಘಾನಿಸ್ತಾನದಿಂದ ನಿರ್ಗಮಿಸಿದ ನಂತರ ಮತ್ತು ತಾಲೀಬಾನ್ ಸರಕಾರವು ಅಧಿಕಾರ ವಹಿಸಿಕೊಂಡ ನಂತರ ಭಾರತವು ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿತ್ತು. ಅಂದಿನಿಂದ ಎರಡೂ ದೇಶಗಳ ನಡುವೆ ಯಾವುದೇ ಔಪಚಾರಿಕ ಸಂಬಂಧಗಳಿಲ್ಲ. ಅಂತರರಾಷ್ಟ್ರೀಯ ವಿದ್ಯಮಾನಗಳ ತಜ್ಞ ಮತ್ತು ‘ಜೆ.ಎನ್.ಯು.’ ನಲ್ಲಿನ ‘ಸ್ಕೂಲ್ ಆಫ್ ಇಂಟರ್ನ್ಯಾಷನಲ್ ಸ್ಟಡೀಸ್’ನ ಸಹಾಯಕ ಪ್ರಾಧ್ಯಾಪಕ ರಾಜನ್ ರಾಜ್ ಅವರು ಹೇಳುವಂತೆ, ಅಫಘಾನಿಸ್ತಾನದ ತಾಲೀಬಾನ್ ಸರಕಾರವು ಭಾರತದೊಂದಿಗೆ ಪ್ರಾರಂಭಿಸಿರುವ ಮಾತುಕತೆಗಳು ಹಲವು ವಿಧಗಳಲ್ಲಿ ಮಹತ್ವಪೂರ್ಣವಾಗಿವೆ. ಭಾರತವು ಅಫಘಾನಿಸ್ತಾನದ ತಾಲೀಬಾನ್ ಸರಕಾರಕ್ಕೆ ಅಧಿಕೃತವಾಗಿ ಮಾನ್ಯತೆ ನೀಡದಿದ್ದರೂ, ಈ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ