ಜಗತ್ತಿನಾದ್ಯಂತ ೨೦ಕ್ಕೂ ಹೆಚ್ಚು ದೇಶಗಳಲ್ಲಿ ನಿಷೇಧ!
(ಬುರ್ಖಾ ಎಂದರೆ ಇಡೀ ದೇಹವನ್ನು ಆವರಿಸುವ ಉಡುಪು ಮತ್ತು ನಿಖಾಬ್ ಎಂದರೆ ಮುಖವನ್ನು ಆವರಿಸುವ ಜಾಲರಿಯ ಉಡುಪು)

ರೋಮ್ – ಇಟಲಿಯ ಆಡಳಿತ ಪಕ್ಷವಾದ ‘ಬ್ರದರ್ಸ್ ಆಫ್ ಇಟಲಿ’ ಇತ್ತೀಚೆಗೆ ಸಂಸತ್ತಿನಲ್ಲಿ ಹೊಸ ಮಸೂದೆಯನ್ನು ಮಂಡಿಸಿದೆ. ಈ ಮಸೂದೆಯು ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ನಕಾಬ್ ಧರಿಸುವುದನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಹೊಂದಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಪಕ್ಷದ ಪ್ರಕಾರ, ಈ ಕಾನೂನನ್ನು ‘ಧಾರ್ಮಿಕ ಕಟ್ಟರತೆ’ ತಡೆಯಲು ತರಲಾಗುತ್ತಿದೆ. ಪ್ರಸ್ತಾವಿತ ಕಾನೂನಿನ ಪ್ರಕಾರ, ಶಾಲೆಗಳು, ವಿಶ್ವವಿದ್ಯಾಲಯಗಳು, ಕಚೇರಿಗಳು, ಅಂಗಡಿಗಳು ಮತ್ತು ಸರಕಾರಿ ಕಟ್ಟಡಗಳು ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ನಕಾಬ್ ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ನಿಯಮವನ್ನು ಉಲ್ಲಂಘಿಸುವವರಿಗೆ ೨೮ ಸಾವಿರದಿಂದ ೨ ಲಕ್ಷ ೮೦ ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು.
🚨 Italy Bans Burqa & Niqab in Public Places! 🇮🇹
More than 20 countries worldwide have already imposed similar bans ✅
Every nation prioritises citizens’ safety — should India not take firm steps too? 🇮🇳
🔸 Bill introduced by PM Giorgia Meloni’s ruling party
🔸 Ban applies to… pic.twitter.com/TAt4ak6Wt6
— Sanatan Prabhat (@SanatanPrabhat) October 9, 2025
ಫ್ರಾನ್ಸ್ ಬುರ್ಖಾ ನಿಷೇಧಿಸಿದ ಮೊದಲ ಯುರೋಪಿಯನ್ ದೇಶವಾಗಿತ್ತು. ಫ್ರಾನ್ಸ್ ೨೦೧೧ ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಧರಿಸುವುದನ್ನು ನಿಷೇಧಿಸಿತು. ಅದರ ನಂತರ ಬೆಲ್ಜಿಯಂ, ಆಸ್ಟ್ರಿಯಾ, ಟರ್ಕಿಯೆ, ಟ್ಯುನೀಷಿಯಾ, ಶ್ರೀಲಂಕಾ ಮತ್ತು ಸ್ವಿಟ್ಜರ್ಲೆಂಡ್ ಸೇರಿದಂತೆ ೨೦ಕ್ಕೂ ಹೆಚ್ಚು ದೇಶಗಳು ಬುರ್ಖಾ ಅಥವಾ ನಕಾಬ್ ಅನ್ನು ನಿಷೇಧಿಸಿವೆ. ಯುರೋಪಿಯನ್ ಮಾನವ ಹಕ್ಕುಗಳ ನ್ಯಾಯಾಲಯವು ಸಹ ಈ ನಿಷೇಧವನ್ನು ಅನುಮೋದಿಸಿದೆ.
ಸಂಪಾದಕೀಯ ನಿಲುವುಪ್ರತಿ ದೇಶವು ತನ್ನ ನಾಗರಿಕರ ಸುರಕ್ಷತೆಗೆ ಪರಮೋಚ್ಚ ಆದ್ಯತೆ ನೀಡುತ್ತದೆ ಎಂಬುದನ್ನು ಗಮನಿಸಿದರೆ, ಭಾರತವೂ ಇದಕ್ಕಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಯಾರಿಗಾದರೂ ಅನಿಸಿದರೆ ತಪ್ಪೇನು? |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು