ಸುರಾಜ್ಯ ಅಭಿಯಾನದಿಂದ ಕೇಂದ್ರ ಸರಕಾರಕ್ಕೆ ಬೇಡಿಕೆ

ಮುಂಬಯಿ – ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್ ಸೇವೆ ಒದಗಿಸುವ ದಲ್ಲಾಳಿಗಳು ಮತ್ತು ಅಗ್ರಿಗೇಟರ್ ಅಪ್ಲಿಕೇಶನ್‌ಗಳ (ಆನ್‌ಲೈನ್ ಟಿಕೆಟ್ ಮಾರಾಟಗಾರರು, ಉದಾ. ರೆಡ್‌ಬಸ್) ಮೂಲಕ ಪ್ರಯಾಣಿಕರಾಗುತ್ತಿರುವ ಲೂಟಿಯನ್ನು ತಡೆಯಲು ಸುರಾಜ್ಯ ಅಭಿಯಾನವು ಕೇಂದ್ರ ಸರಕಾರದ ತುರ್ತು ಹಸ್ತಕ್ಷೇಪಕ್ಕೆ ಆಗ್ರಹಿಸಿದೆ. ಈ ಕುರಿತು ಅಭಿಯಾನದ ಮಹಾರಾಷ್ಟ್ರ ಸಂಯೋಜಕರಾದ ಅಭಿಷೇಕ್ ಮುರುಕಟೆ ಅವರು ಪ್ರಧಾನಸಚಿವ ನರೇಂದ್ರ ಮೋದಿ ಸೇರಿದಂತೆ ೬ ಕೇಂದ್ರ ಸಚಿವಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಲೂಟಿಯನ್ನು ತಡೆಯಲು ಕೇಂದ್ರ ನಿಯಂತ್ರಕ ಪ್ರಾಧಿಕಾರವನ್ನು ಸ್ಥಾಪಿಸಬೇಕು ಎಂದು ಸುರಾಜ್ಯ ಅಭಿಯಾನವು ಮನವಿಯಲ್ಲಿ ಬೇಡಿಕೆ ಇಟ್ಟಿದೆ. ಈ ಬೇಡಿಕೆಗಳ ಮನವಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ, ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಅವರಿಗೂ ನೀಡಲಾಗಿದೆ.
ಸುರಾಜ್ಯ ಅಭಿಯಾನವು ಮನವಿಯಲ್ಲಿ,
೧. ದೀಪಾವಳಿ ಮತ್ತು ಇತರೆ ಹಬ್ಬಗಳು, ಚುನಾವಣೆಗಳು, ಶಾಲಾ ರಜೆಗಳಂತಹ ಸಮಯದಲ್ಲಿ ಖಾಸಗಿ ಬಸ್ ದರಗಳನ್ನು ೩ ರಿಂದ ೫ ಪಟ್ಟು ಹೆಚ್ಚಿಸಲಾಗುತ್ತದೆ. ಖಾಸಗಿ ಬಸ್ ಬಾಡಿಗೆ ಮೇಲೆ ಯಾವುದೇ ಸರಕಾರಿ ನಿಯಂತ್ರಣವಿಲ್ಲ. ರೆಡ್‌ಬಸ್‌ನಂತಹ ಅಪ್ಲಿಕೇಶನ್‌ಗಳು ಟಿಕೆಟ್ ಹೆಸರಿನಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣವನ್ನು ಸಂಗ್ರಹಿಸುತ್ತವೆ; ಆದರೆ ಅವುಗಳ ಮೇಲೆ ನಿಯಂತ್ರಣ ಹೇರಲು ಯಾವುದೇ ಕಾನೂನು ಇಲ್ಲದ ಕಾರಣ ಈ ಲೂಟಿ ಮುಂದುವರಿಯುತ್ತದೆ.
೨. ಕೇಂದ್ರ ಸರಕಾರವು ರಾಷ್ಟ್ರೀಯ ಕಾನೂನನ್ನು ರಚಿಸಿ ಬಸ್ ಬಾಡಿಗೆಯ ಮಿತಿ, ಆಪ್ ಅಗ್ರಿಗೇಟರ್‌ಗಳ ಪರವಾನಗಿ ಮತ್ತು ಅವುಗಳ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡಬೇಕು.
ಸಂಪಾದಕೀಯ ನಿಲುವುವಾಸ್ತವವಾಗಿ, ಇಂತಹ ಬೇಡಿಕೆಯನ್ನು ರಾಷ್ಟ್ರಪ್ರೇಮಿ ಸಂಘಟನೆಗಳ ಮೇಲೆ ಹಾಕುವ ಪ್ರಸಂಗ ಬರಬಾರದಿತ್ತು. ಸರಕಾರವು ತಾನಾಗಿಯೇ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!