
ನಾಸಿಕ್ – ಇಲ್ಲಿ ೨೦೨೭ ರಲ್ಲಿ ನಡೆಯಲಿರುವ ಸಿಂಹಸ್ಥಪರ್ವದ (ಕುಂಭಮೇಳ) ಹಿನ್ನೆಲೆಯಲ್ಲಿ ಜಿಲ್ಲೆಯ ‘ಐಟಿಐ’ಗಳಲ್ಲಿ (ಸರಕಾರಿ ಔದ್ಯೋಗಿಕ ತರಬೇತಿ ಸಂಸ್ಥೆಗಳಲ್ಲಿ) ‘ವೈದಿಕ ಸಂಸ್ಕಾರ ಜೂನಿಯರ್ ಅಸಿಸ್ಟೆಂಟ್’ ಎಂಬ ಹೊಸ ಕೋರ್ಸ್ ಅನ್ನು ಪ್ರಾರಂಭಿಸಲಾಗುವುದು ಎಂದು ಕೌಶಲ್ಯ, ಉದ್ಯೋಗ, ಉದ್ಯಮಶೀಲತೆ ಮತ್ತು ನಾವೀನ್ಯತೆ ಸಚಿವ ಮಂಗಲಪ್ರಭಾತ ಲೋಢಾ ಅವರು ಸಚಿವಾಲಯದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಿಂಹಸ್ಥಪರ್ವದ ಸಮಯದಲ್ಲಿ ವೈದಿಕ ವಿಧಿವಿಧಾನಗಳನ್ನು ನೆರವೇರಿಸುವವರ ಕೊರತೆ ಉಂಟಾಗಬಹುದು. ಅದಕ್ಕಾಗಿ ಮೇಲೆ ತಿಳಿಸಿದ ಪ್ರಕಾರ ೩ ರಿಂದ ೬ ತಿಂಗಳ ಅವಧಿಯ ಕೋರ್ಸ್ ಅನ್ನು ಸಿದ್ಧಪಡಿಸಲಾಗಿದೆ. ಇದರಿಂದ ವೈದಿಕ ಸಂಸ್ಕಾರಗಳನ್ನು ಮಾಡುವ ವ್ಯಕ್ತಿಗಳು ಸುಲಭವಾಗಿ ಲಭ್ಯವಾಗಲಿದ್ದಾರೆ. ಪ್ರತಿಯೊಂದು ಸಿಂಹಸ್ಥಪರ್ವದಲ್ಲಿ ಇಂತಹ ವ್ಯಕ್ತಿಗಳ ಕೊರತೆ ಕಂಡುಬರುತ್ತಿದ್ದರಿಂದ ಈ ಉಪಕ್ರಮವನ್ನು ಜಾರಿಗೆ ತರಲಾಗುತ್ತಿದೆ. ಜಿಲ್ಲೆಯ ವಿವಿಧ ‘ಐಟಿಐ’ ಕಾಲೇಜುಗಳಲ್ಲಿ ಈ ಉಪಕ್ರಮವನ್ನು ಅನುಷ್ಠಾನಕ್ಕೆ ತರಲಾಗುವುದು.
📜 ‘Vedic Sanskar’ Course in Nashik Ahead of Simhastha! – @MPLodha
💼 206 New Skill-Based Courses launched across Maharashtra to train youth in Vedic rituals for the upcoming Kumbh Mela.
🖥️ PM Modi to inaugurate the initiative online on Sept 8
⚙️ Focus Areas: Drone Tech | AI |… pic.twitter.com/ODWpIe2ICN
— Sanatan Prabhat (@SanatanPrabhat) October 8, 2025
ಸರಕಾರದಿಂದ ‘ಅಲ್ಪಾವಧಿಯ ಉದ್ಯೋಗ ಕೋರ್ಸ್‌ಗಳು’ ಎಂಬ ಒಂದು ವಿನೂತನ ಉಪಕ್ರಮವನ್ನು ಜಾರಿಗೆ ತರಲಾಗುವುದು. ಇದರ ಅಡಿಯಲ್ಲಿ ಈ ಕೋರ್ಸ್ ಇದೆ. ಇದರ ಅಡಿಯಲ್ಲಿ ರಾಜ್ಯದ ಸರಕಾರಿ ಔದ್ಯೋಗಿಕ ತರಬೇತಿ ಸಂಸ್ಥೆಗಳು ಮತ್ತು ಸರಕಾರಿ ತಾಂತ್ರಿಕ ವಿದ್ಯಾಲಯಗಳಲ್ಲಿ ಹೊಸದಾಗಿ ೨೦೬ ಕ್ಕೂ ಹೆಚ್ಚು ಉದ್ಯೋಗಕ್ಕೆ ಅರ್ಹ ಕೋರ್ಸ್‌ಗಳು ಮತ್ತು ಅವುಗಳಿಗಾಗಿ ೨ ಸಾವಿರದ ೫೦೬ ಬ್ಯಾಚ್‌ಗಳನ್ನು ಪ್ರಾರಂಭಿಸಲಾಗುವುದು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೈಯಿಂದ ಸೆಪ್ಟೆಂಬರ್ ೮ ರಂದು ಈ ಕೋರ್ಸ್‌ಗಳ ಆನ್‌ಲೈನ್ ಉದ್ಘಾಟನೆ ನಡೆಯಲಿದೆ. ಈ ಕೋರ್ಸ್‌ಗಳಲ್ಲಿ ‘ಡ್ರೋನ್ ತಂತ್ರಜ್ಞಾನ’, ‘ಸೈಬರ್ ಸುರಕ್ಷತೆ’, ‘ಸೌರಶಕ್ತಿ’, ‘ಇಂಟರ್ನೆಟ್ ಆಫ್ ಥಿಂಗ್ಸ್’, ‘ಕೃತಕ ಬುದ್ಧಿಮತ್ತೆ’, ‘ಗ್ರೀನ್ ಹೈಡ್ರೋಜನ್’, ‘ಮೊಬೈಲ್ ದುರಸ್ತಿ’, ‘ಸಮಾಜ ಮಾಧ್ಯಮದ ಪ್ರಭಾವಿ ವ್ಯಕ್ತಿ (ಇನ್ಫ್ಲುಯೆನ್ಸರ್)’ ಮುಂತಾದ ವಿಷಯಗಳನ್ನು ಸೇರಿಸಲಾಗಿದೆ.
ಇವುಗಳಲ್ಲಿ ಶೇಕಡಾ ೨೫ ರಷ್ಟು ಸ್ಥಾನಗಳು ಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ಮೀಸಲಾಗಿವೆ. ರಾಜ್ಯಾದ್ಯಂತ ೬೦೦ ಸ್ಥಳಗಳಲ್ಲಿ ಈ ಉಪಕ್ರಮಗಳನ್ನು ಆಯೋಜಿಸಲಾಗುವುದು ಮತ್ತು ಈ ವರ್ಷ ೭೫ ಸಾವಿರ ಯುವಕರಿಗೆ ತರಬೇತಿ ನೀಡಲಾಗುವುದು. ಮಹಿಳೆಯರಿಗಾಗಿ ೩೬೪ ವಿಶೇಷ ಬ್ಯಾಚ್‌ಗಳು ಇರಲಿವೆ.
ಸಂಪಾದಕೀಯ ನಿಲುವುಇಂದು ೨೦೬ ಹೊಸ ಅಲ್ಪಾವಧಿಯ ಉದ್ಯೋಗ ಕೋರ್ಸ್‌ಗಳಿಗೆ ಪ್ರಧಾನಮಂತ್ರಿಗಳಿಂದ ಉದ್ಘಾಟನೆ |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ