
ಸತನಾ (ಮಧ್ಯಪ್ರದೇಶ) – ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್ ಅವರು ಇತ್ತೀಚೆಗೆ ಸತನಾದಲ್ಲಿ ಒಂದು ಸಮಾವೇಶದಲ್ಲಿ ಮಾತನಾಡುತ್ತಾ, ‘ಪಾಕಿಸ್ತಾನವು ಅವಿಭಜಿತ ಭಾರತದ ಒಂದು ಭಾಗವಾಗಿದೆ. ಆ ಮನೆ ಮತ್ತು ಈ ಮನೆ ಬೇರೆ ಬೇರೆಯಲ್ಲ. ಸಂಪೂರ್ಣ ಭಾರತ ಒಂದೇ ಮನೆಯಾಗಿದೆ. ವಿಭಜನೆ ಎಂದರೆ ಯಾರೋ ನಮ್ಮ ಮನೆಯಿಂದ ಒಂದು ಕೋಣೆಯನ್ನು ತೆಗೆದುಹಾಕಿದಂತೆ. ನಾವು ನಾಳೆ ಅದನ್ನು ಮರಳಿ ಪಡೆಯಬೇಕಾಗುತ್ತದೆ,’ ಎಂದು ಹೇಳಿದರು. ಪ.ಪೂ. ಸರಸಂಘಚಾಲಕರು ರಾಜ್ಯದ ಸತನಾಗೆ ಎರಡು ದಿನಗಳ ಭೇಟಿ ನೀಡಿದ್ದರು. ಈ ಭೇಟಿಯ ಸಮಯದಲ್ಲಿ ಅವರು ಬಾಬಾ ಮೆಹರ್ ಷಾ ದರಬಾರದ ಹೊಸದಾಗಿ ನಿರ್ಮಿಸಿದ ಕಟ್ಟಡವನ್ನು ಉದ್ಘಾಟಿಸಿದರು.
೧. ಭಾಷೆಯ ವಿವಾದದ ಬಗ್ಗೆ ಪ.ಪೂ. ಸರಸಂಘಚಾಲಕರು ಮಾತನಾಡಿ, ‘ಅನೇಕ ಭಾಷೆಗಳಿವೆ; ಆದರೆ ಅರ್ಥ ಒಂದೇಯಾಗಿದೆ. ಮೂಲ ಭಾಷೆಯಿಂದ ಅನೇಕ ಭಾಷೆಗಳು ಹುಟ್ಟಿಕೊಂಡಿವೆ. ಎಲ್ಲಾ ಭಾಷೆಗಳು ಭಾರತದ ರಾಷ್ಟ್ರ ಭಾಷೆಗಳಾಗಿವೆ. ಪ್ರತಿಯೊಬ್ಬ ನಾಗರಿಕನಿಗೂ ಕನಿಷ್ಠ ೩ ಭಾಷೆಗಳು ತಿಳಿದಿರಬೇಕು. ಮನೆ, ರಾಜ್ಯ ಮತ್ತು ರಾಷ್ಟ್ರದ ಭಾಷೆಗಳು ತಿಳಿದಿರಬೇಕು. ಭಾಷಾ ವೈವಿಧ್ಯತೆ ನಮ್ಮ ಏಕತೆಗೆ ಒಂದು ಅಲಂಕಾರವಾಗಿದೆ,’ ಎಂದು ಹೇಳಿದರು.
೨. ಪ.ಪೂ. ಸರಸಂಘಚಾಲಕರು ಮಾತು ಮುಂದುವರೆಸಿ, ‘ನಾವು ಎಲ್ಲರೂ ಒಂದೇ. ನಾವೆಲ್ಲರೂ ಸನಾತನಿ ಮತ್ತು ಹಿಂದೂಗಳು. ಬ್ರಿಟಿಷರು ಇಲ್ಲಿಗೆ ಬಂದು ನಮಗೆ ಒಡೆದ ಕನ್ನಡಿ ತೋರಿಸಿ ನಮ್ಮನ್ನು ವಿಭಜಿಸಿದರು.’
೩. ರಾಷ್ಟ್ರದ ‘ಸ್ವ’ವನ್ನು ಜಾಗೃತಗೊಳಿಸುವಂತೆ ಆಹ್ವಾನ ನೀಡಿದ ಪ.ಪೂ. ಸರಸಂಘಚಾಲಕರು, ‘ಪ್ರತಿಯೊಬ್ಬ ವ್ಯಕ್ತಿಯು ಈ ಪ್ರಯಾಣವನ್ನು ತನ್ನ ಸ್ವಂತ ಮನೆಯಿಂದ ಪ್ರಾರಂಭಿಸಬೇಕು. ಕನಿಷ್ಠ ನಮ್ಮ ಮನೆಯ ಮಿತಿಯಲ್ಲಿ, ನಮ್ಮ ಭಾಷೆ, ಉಡುಗೆ, ಸ್ತೋತ್ರಗಳು, ಕಟ್ಟಡಗಳು, ಪ್ರಯಾಣ ಮತ್ತು ಆಹಾರ ನಮ್ಮ ಸಂಪ್ರದಾಯಗಳ ಪ್ರಕಾರ ಇರಬೇಕು.’
೪. ಅವರು ಮಾತು ಮುಂದುವರೆಸಿ, ‘ಪಹಲ್ಗಾಮ್ ದಾಳಿಯಲ್ಲಿ ಭಯೋತ್ಪಾದಕರು ಹಿಂದೂಗಳನ್ನು ಅವರ ಧರ್ಮವನ್ನು ಕೇಳಿ ಕೊಂದರು. ನಮ್ಮ ಸರರ್ಕಾಕಾರ ಮತ್ತು ಸೈನ್ಯ ಅದಕ್ಕೆ ಪ್ರತ್ಯುತ್ತರ ನೀಡಿತು. ಈ ಘಟನೆಯು ಮಿತ್ರರು ಮತ್ತು ಶತ್ರುಗಳನ್ನು ಬಯಲುಮಾಡಿತು’, ಎಂದು ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ