ಇನ್ನು ನಮ್ಮ ಗುರಿ ಕರಾಚಿ ಆಗಿರುತ್ತದೆ ಮತ್ತು ಪಾಕಿಸ್ತಾನದ ಚಿತ್ರಣವನ್ನೇ ಬದಲಾಯಿಸುವೆವು! – Defense Minister Rajnath Singh Warning Pakistan

ಕಚ್ (ಗುಜರಾತ) – ಒಂದು ವೇಳೆ ಕಚ್‌ ನ ‘ಸರ್ ಕ್ರೀಕ್’ ಪ್ರದೇಶದಲ್ಲಿ ಪಾಕಿಸ್ತಾನದ ಕುತಂತ್ರಗಳು ಮುಂದುವರಿದರೆ, ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು. ಪಾಕಿಸ್ತಾನದ ಇತಿಹಾಸ ಮತ್ತು ಭೂಗೋಳ ಎರಡನ್ನೂ ಬದಲಾಯಿಸುತ್ತೇವೆ. ಈಗ ಗುರಿ ಲಾಹೋರ್ ಅಲ್ಲ, ಕರಾಚಿ ಆಗಿರುತ್ತದೆ. ಕರಾಚಿಗೆ ಹೋಗುವ ದಾರಿ ‘ಸರ್ ಕ್ರೀಕ್’ ಮೂಲಕ ಹೋಗುತ್ತದೆ ಎಂಬುದನ್ನು ನೆನಪಿಡಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಲ್ಲಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. ರಾಜನಾಥ್ ಸಿಂಗ್ ಅವರು ವಿಜಯದಶಮಿಯ ನಿಮಿತ್ತವಾಗಿ ಅಕ್ಟೋಬರ್ 2 ರಂದು ಕಚ್‌ ನಲ್ಲಿರುವ ಸೇನಾ ನೆಲೆಯಲ್ಲಿ ಶಸ್ತ್ರಪೂಜೆಯನ್ನು ನೆರವೇರಿಸಿದರು. ಇದರ ನಂತರ ಅವರು ಭಾರತೀಯ ಸೈನ್ಯವನ್ನು ಉದ್ದೇಶಿಸಿ ಮಾತನಾಡುವಾಗ ಮೇಲಿನ ಎಚ್ಚರಿಕೆ ನೀಡಿದರು.

ರಾಜನಾಥ್ ಸಿಂಗ್ ಮಂಡಿಸಿದ ಪ್ರಮುಖ ಅಂಶಗಳು

1. ಸ್ವಾತಂತ್ರ್ಯ ಬಂದು 78 ವರ್ಷಗಳು ಪೂರ್ಣಗೊಂಡಿವೆ. ಪಾಕಿಸ್ತಾನವು ಮತ್ತೆ ಮತ್ತೆ ಕುತಂತ್ರಗಳನ್ನು ಮಾಡುತ್ತಿದೆ. ಸರ್ ಕ್ರೀಕ್ ಪ್ರದೇಶದಲ್ಲಿ ನಿಯಂತ್ರಣ ರೇಖೆಯ ಕುರಿತು ವಿವಾದ ಸೃಷ್ಟಿಸಲಾಗುತ್ತಿದೆ. ಭಾರತವು ಹಲವು ಬಾರಿ ಚರ್ಚೆಯ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದೆ; ಆದರೆ ಪಾಕಿಸ್ತಾನದ ಉದ್ದೇಶದಲ್ಲಿಯೇ ಕಪಟ ಕಾಣುತ್ತಿದೆ. ಪಾಕಿಸ್ತಾನದ ಸೇನೆಯು ಸರ್ ಕ್ರೀಕ್ ನಿಯಂತ್ರಣ ರೇಖೆಯ ಉದ್ದಕ್ಕೂ ಮಿಲಿಟರಿ ಉಪಕರಣಗಳನ್ನು ನಿಯೋಜಿಸಿದೆ, ಜೊತೆಗೆ ಆ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಹ ಮಾಡುತ್ತಿದೆ.

2. ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಪಾಕಿಸ್ತಾನವು ಲೇಹ್‌ ನಿಂದ ಸರ್ ಕ್ರೀಕ್‌ ವರೆಗಿನ ಈ ಗಡಿಯಲ್ಲಿ ಭಾರತದೊಳಗೆ ನುಸುಳಲು ಪ್ರಯತ್ನಿಸಿತು; ಆದರೆ ಅದು ವಿಫಲವಾಯಿತು. ಭಾರತೀಯ ಸೇನೆಯು ಪಾಕಿಸ್ತಾನಿ ವಾಯು ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಷ್ಟಗೊಳಿಸಿತು.

3. ಭಾರತೀಯ ಸೇನೆಯು, ಪಾಕಿಸ್ತಾನಕ್ಕೆ ಯಾವುದೇ ಸಮಯದಲ್ಲಿ ಮತ್ತು ಎಲ್ಲಿ ಬೇಕಾದರೂ ದೊಡ್ಡ ಹಾನಿಯನ್ನು ಉಂಟುಮಾಡಬಲ್ಲರು, ಎಂದು ಜಗತ್ತಿಗೇ ಸಂದೇಶ ನೀಡಿದೆ.

‘ಸರ್ ಕ್ರೀಕ್’ ವಿವಾದ ಎಂದರೇನು?

ಸರ್ ಕ್ರೀಕ್ ಎನ್ನುವುದು ಭಾರತ ಮತ್ತು ಪಾಕಿಸ್ತಾನದ ನಡುವಿನ ಕಚ್‌ ನ ರಣ್‌ ನಲ್ಲಿರುವ 96 ಕಿ.ಮೀ. ಉದ್ದದ ನೀರಿನ ಪಟ್ಟಿಯಾಗಿದೆ. ಈ ಕಡಲ್ಗಾಲುವೆ ಅರಬ್ಬಿ ಸಮುದ್ರಕ್ಕೆ ಸೇರುತ್ತದೆ. ‘ಸರ್ ಕ್ರೀಕ್’ ನೀರಿನ ಪಟ್ಟಿಯು ಗುಜರಾತ್‌ ನ ಕಚ್ ಪ್ರದೇಶವನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ವಿಭಜಿಸುತ್ತದೆ. ಈ ‘ಸರ್ ಕ್ರೀಕ್’ ಪ್ರದೇಶದ ಮೇಲೆ ಪಾಕಿಸ್ತಾನವು ತನ್ನ ಹಕ್ಕನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದೆ.

ಭಾರತವು ಕೇವಲ ಶಸ್ತ್ರಾಸ್ತ್ರಗಳನ್ನು ಪೂಜಿಸುವುದಿಲ್ಲ, ಸಮಯ ಬಂದಾಗ ಅವುಗಳನ್ನು ಹೇಗೆ ಬಳಸಬೇಕೆಂದು ಸಹ ತಿಳಿದಿದೆ ! – ರಕ್ಷಣಾ ಸಚಿವರು

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ‘ಶಸ್ತ್ರಗಳ ಭಕ್ತಿ’ ಎಂದರೆ ಆಸುರೀ ಶಕ್ತಿಗಳ ಮೇಲೆ ದೈವೀ ಶಕ್ತಿಯ ವಿಜಯದ ಮಹತ್ವವನ್ನು ತೋರಿಸುತ್ತದೆ. ಆದ್ದರಿಂದ, ನಾವು ಶಸ್ತ್ರಗಳನ್ನು ಪೂಜಿಸುವಾಗ, ಈ ಶಕ್ತಿಯನ್ನು ಧಾರ್ಮಿಕತೆ ಮತ್ತು ನ್ಯಾಯವನ್ನು ರಕ್ಷಿಸಲು ಬಳಸುವ ಪ್ರತಿಜ್ಞೆಯನ್ನು ಮಾಡುತ್ತೇವೆ. ಭಾರತವು ಕೇವಲ ಶಸ್ತ್ರಾಸ್ತ್ರಗಳನ್ನು ಪೂಜಿಸುವುದಿಲ್ಲ, ಬದಲಾಗಿ ಸಮಯ ಬಂದಾಗ ಅವುಗಳನ್ನು ಹೇಗೆ ಬಳಸಬೇಕೆಂದು ಸಹ ತಿಳಿದಿದೆ. ಭಗವಾನ್ ಶ್ರೀರಾಮನು ರಾವಣನೊಂದಿಗೆ ಹೋರಾಡಿದಾಗ, ಅವನ ಗುರಿ ಕೇವಲ ವಿಜಯ ಸಾಧಿಸುವುದಾಗಿರಲಿಲ್ಲ, ಬದಲಿಗೆ ಧರ್ಮವನ್ನು ಸ್ಥಾಪಿಸುವುದು ಆಗಿತ್ತು.