|

ಅಹಿಲ್ಯಾನಗರ – ಶ್ರೀ ಶಿವಪ್ರತಿಷ್ಠಾನದ ವತಿಯಿಂದ ಅಹಿಲ್ಯಾನಗರದ ಸಮೀಪವಿರುವ ಕೋಟ್ಲಾ ಪ್ರದೇಶದಲ್ಲಿ ಶ್ರೀ ದುರ್ಗಾಮಾತಾ ದೌಡ್ ಅನ್ನು ಆಯೋಜಿಸಲಾಗಿತ್ತು. ದೌಡು ನಡೆಯುತ್ತಿದ್ದಾಗ ಭಾಗವಹಿಸಿದ ಭಕ್ತರ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಈ ದೌಡಿನಲ್ಲಿ ರಸ್ತೆಯ ಮೇಲೆ ‘ಐ ಲವ್ ಮಹಮ್ಮದ್’ ಎಂದು ನಮೂದಿಸಲಾದ ರಂಗೋಲಿಯನ್ನು ಬಿಡಿಸಲಾಗಿತ್ತು. ಈ ರಂಗೋಲಿಯ ಮೇಲೆ ದೌಡು ಮುಂದೆ ಸಾಗಿದ್ದರಿಂದ ಗುಂಪು ಆಕ್ರಮಣಕಾರಿಯಾಯಿತು ಎಂದು ತಿಳಿಸಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ನಗರದ ಮುಸಲ್ಮಾನ ಸಮುದಾಯ ಆಕ್ರಮಣಕಾರಿಯಾಯಿತು. ನಂತರ ಜನಸಮೂಹವು ರಸ್ತೆಗೆ ಇಳಿದು ಪುಣೆ-ಛತ್ರಪತಿ ಸಂಭಾಜಿನಗರ ಹೆದ್ದಾರಿಯ ಕೋಟ್ಲಾ ಪ್ರದೇಶದಲ್ಲಿ ರಸ್ತೆ ತಡೆ ನಡೆಸಿತು. ಈ ವೇಳೆ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಪೊಲೀಸರು ಸ್ಥಳಕ್ಕೆ ತಕ್ಷಣ ಧಾವಿಸಿ ಈ ಮಾರ್ಗವನ್ನು ತೆರವುಗೊಳಿಸಿದರು. ಜನಸಮೂಹವನ್ನು ಚದುರಿಸಲು ಅವರು ಸೌಮ್ಯ ಲಾಠಿ ಪ್ರಹಾರವನ್ನೂ ಮಾಡಿದರು. ಹೀಗೆ ಮಾಡುವಾಗ ಅವರ ಮತ್ತು ಜನಸಮೂಹದ ನಡುವೆ ಸಣ್ಣ ಘರ್ಷಣೆ ಕೂಡ ನಡೆಯಿತು. ನಾಗರಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಲಾಠಿ ಪ್ರಹಾರ! – ಪೊಲೀಸ್ ಆಯುಕ್ತ
ಶ್ರೀ ದುರ್ಗಾಮಾತಾ ದೌಡಿನ ಸಮಯದಲ್ಲಿ ಹಾಕಿದ ಆಕ್ಷೇಪಾರ್ಹ ರಂಗೋಲಿಯಿಂದಾಗಿ ಮುಸಲ್ಮಾನ ಸಮುದಾಯದಲ್ಲಿ ಅಸಂತೋಷ ಉಂಟಾಗಿತ್ತು. ಈ ಆಕ್ಷೇಪಾರ್ಹ ರಂಗೋಲಿಯನ್ನು ಹಾಕಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಬಾರದು ಎಂಬ ಕಾರಣಕ್ಕೆ ಲಾಠಿ ಪ್ರಹಾರ ನಡೆಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ ಘರ್ಗೆ ಅವರು ಸ್ಪಷ್ಟಪಡಿಸಿದ್ದಾರೆ.
ನಿರ್ದಿಷ್ಟ ಧರ್ಮದ ಧ್ರುವೀಕರಣಕ್ಕೆ ಪ್ರಯತ್ನ! – ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್

ಅಹಿಲ್ಯಾನಗರದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಹಿಂದೆ ಯಾವುದೇ ಷಡ್ಯಂತ್ರ ಇದೆಯೇ ಎಂದು ನೋಡಬೇಕಾಗಿದೆ. ‘ಸಮಾಜದಲ್ಲಿ ಯಾರು ಭೇದಭಾವ ಸೃಷ್ಟಿಸುತ್ತಿದ್ದಾರೆ? ಸಾಮಾಜಿಕ ಸೌಹಾರ್ದತೆಯನ್ನು ಹಾಳು ಮಾಡುವವರು ಯಾರು?’ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ನಿರ್ದಿಷ್ಟ ಧರ್ಮದ ಧ್ರುವೀಕರಣಕ್ಕೆ ಪ್ರಯತ್ನ ಮಾಡುತ್ತಿದ್ದಾರೆಯೇ? ಈ ರೀತಿ ಸಾಮಾಜಿಕ ಉದ್ವಿಗ್ನತೆ ಸೃಷ್ಟಿಸುವುದು ತಪ್ಪು ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಹೇಳಿದರು.
ಕಾನೂನನ್ನು ಕೈಗೆತ್ತಿಕೊಳ್ಳುವ ಕೃತ್ಯ! – ರಾಷ್ಟ್ರವಾದಿ ಕಾಂಗ್ರೆಸ್ ಶಾಸಕ ಸಂಗ್ರಾಮ ಜಗತಾಪ್
ಶ್ರೀ ದುರ್ಗಾಮಾತಾ ದೌಡಿನ ಸಮಯದಲ್ಲಿ ಕೆಲವು ಸಮಾಜಘಾತಕ ಶಕ್ತಿಗಳು ಮಾಂಸಾಹಾರ ಸೇವಿಸಿ ಎಲುಬುಗಳನ್ನು ರಸ್ತೆಯಲ್ಲಿ ಎಸೆದಿದ್ದರು. ಶ್ರೀ ಶಿವಪ್ರತಿಷ್ಠಾನ ಹಿಂದುಸ್ತಾನ್ ವತಿಯಿಂದ ಹಲವು ವರ್ಷಗಳಿಂದ ಶ್ರೀ ದುರ್ಗಾಮಾತಾ ದೌಡ್ ಆಯೋಜಿಸಲಾಗುತ್ತಿದೆ. ಅದೇ ಸಮಯದಲ್ಲಿ ‘ಐ ಲವ್ ಮಹಮ್ಮದ್’ ಎಂಬ ಫಲಕಗಳನ್ನು ತೋರಿಸಿ ಪ್ರಚೋದಿಸುವ ಕೃತ್ಯವನ್ನೂ ಮಾಡಲಾಗಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದ ನಂತರವೂ ರಸ್ತೆ ತಡೆ ನಡೆಸುವುದು ತಪ್ಪು ಮತ್ತು ಇದು ಕಾನೂನನ್ನು ಕೈಗೆತ್ತಿಕೊಳ್ಳುವ ಕೃತ್ಯವಾಗಿದೆ ಎಂದು ರಾಷ್ಟ್ರವಾದಿ ಕಾಂಗ್ರೆಸ್ ಶಾಸಕ ಸಂಗ್ರಾಮ ಜಗತಾಪ್ ಅವರು ತಿಳಿಸಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ