ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಿ ಪ್ರಧಾನಿಗೆ ತಿವಿದ ಭಾರತ !

ನ್ಯೂಯಾರ್ಕ್ (ಅಮೆರಿಕ) – ಮೇ 9 ರವರೆಗೆ ಪಾಕಿಸ್ತಾನವು ಭಾರತದ ಮೇಲೆ ಆಕ್ರಮಣ ಮಾಡುವ ಬೆದರಿಕೆ ಹಾಕುತ್ತಿತ್ತು; ಆದರೆ ಮೇ 10 ರಂದು ಭಾರತೀಯ ಸೇನೆಯು ಪಾಕಿಸ್ತಾನದ ವಾಯುಪಡೆಯ ಅನೇಕ ನೆಲೆಗಳನ್ನು ಧ್ವಂಸಗೊಳಿಸಿತು. ಇದರ ನಂತರ ಪಾಕಿಸ್ತಾನವು ಯುದ್ಧ ನಿಲ್ಲಿಸುವಂತೆ ವಿನಂತಿಸಿತು. ಸುಟ್ಟುಹೋದ ವಾಯುಪಡೆಯ ನೆಲೆಯು ವಿಜಯವಾಗಿದ್ದರೆ, ಪಾಕಿಸ್ತಾನ ಅದನ್ನು ಆಚರಿಸಲಿ ಎಂದು ಭಾರತವು ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ತಿವಿದಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ‘ಆಪರೇಷನ್ ಸಿಂದೂರ್’ ಕುರಿತು ಹೇಳಿಕೆ ನೀಡುವಾಗ ಭಾರತವನ್ನು ಸೋಲಿಸಿರುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಭಾರತದ ಪ್ರತಿನಿಧಿ ಪೇಟಲ್ ಗೆಹ್ಲೋಟ್ ಅವರು ಸೂಕ್ತ ಉತ್ತರ ನೀಡುವ ಮೂಲಕ ಷರೀಫ್ ಅವರ ಬಾಯಿ ಮುಚ್ಚಿಸಿದರು.
ಪೇಟಲ್ ಗೆಹ್ಲೋಟ್ ಅವರು ಷರೀಫ್ ಅವರಿಗೆ ನೀಡಿದ ಪ್ರತ್ಯುತ್ತರ
೧. ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವುದು ಪಾಕಿಸ್ತಾನದ ವಿದೇಶಾಂಗ ನೀತಿಯ ಭಾಗ!
ಪಾಕಿಸ್ತಾನದ ಪ್ರಧಾನಿಗಳು ಹಾಸ್ಯಾಸ್ಪದ ನಾಟಕವನ್ನು ಸೃಷ್ಟಿಸಿದ್ದಾರೆ. ಅವರು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಾರೆ. ಇದು ಅವರ ವಿದೇಶಾಂಗ ನೀತಿಯ ಭಾಗವಾಗಿದೆ. ಎಷ್ಟು ನಾಟಕ ಮಾಡಿದರೂ ಅಥವಾ ಸುಳ್ಳು ಹೇಳಿದರೂ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ.
೨. ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ವಿಷಯಗಳನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಬಗೆಹರಿಸಲಾಗುವುದು. ಇದರಲ್ಲಿ ಯಾವುದೇ ಮೂರನೇ ಪಕ್ಷದ ಅಗತ್ಯವಿಲ್ಲ.
೩. ಪಾಕಿಸ್ತಾನವು ಭಾರತ-ದ್ವೇಷದಿಂದ ಬಳಲುತ್ತಿರುವ ಕಾರಣ, ಶಾಂತಿಯ ಕುರಿತಾದ ಅವರ ಹೇಳಿಕೆಗಳು ನಿರರ್ಥಕವಾಗಿವೆ. ಭಾರತವು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ (Zero Tolerance) ನೀತಿಯನ್ನು ಅಳವಡಿಸಿಕೊಂಡಿದೆ.
೪. ಪಾಕಿಸ್ತಾನದ ಸೇನೆಯು ಭಯೋತ್ಪಾದಕರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತದೆ!
‘ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ’ ಎಂದು ಹೇಳಲಾಗುತ್ತದೆ. ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಪಾಕಿಸ್ತಾನದ ಬಹಾವಲ್ಪುರ್ ಮತ್ತು ಮುರೀದ್ಕೆಯಲ್ಲಿನ ಭಯೋತ್ಪಾದಕರ ನೆಲೆಗಳಲ್ಲಿ ಹತರಾದ ಭಯೋತ್ಪಾದಕರ ಅನೇಕ ಛಾಯಾಚಿತ್ರಗಳನ್ನು ನಾವು ನೋಡಿದ್ದೇವೆ. ಪಾಕಿಸ್ತಾನಿ ಸೈನ್ಯ ಮತ್ತು ಅಧಿಕಾರಿಗಳು ಬಹಿರಂಗವಾಗಿ ಭಯೋತ್ಪಾದಕರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ, ಅವರ ಆಡಳಿತದ ಬಗ್ಗೆ ಅನುಮಾನ ಮೂಡದೆ ಇರುತ್ತದೆಯೇ?
ಪಾಕಿಸ್ತಾನವು ಭಯೋತ್ಪಾದಕರ ನೆಲೆಗಳನ್ನು ಮುಚ್ಚಬೇಕು!
ಸತ್ಯವೇನೆಂದರೆ, ಭಾರತದಲ್ಲಿನ ನಿರಪರಾಧಿ ನಾಗರಿಕರ ಮೇಲೆ ನಡೆದ ಎಲ್ಲಾ ಭಯೋತ್ಪಾದಕ ದಾಳಿಗಳಿಗೆ ಪಾಕಿಸ್ತಾನವೇ ಹೊಣೆಗಾರ. ನಮ್ಮ ಜನರನ್ನು ರಕ್ಷಿಸುವ, ಅವರಿಗೆ ಪ್ರತ್ಯುತ್ತರ ನೀಡುವ, ಮತ್ತು ಅಪರಾಧಿಗಳಿಗೆ ನ್ಯಾಯ ಒದಗಿಸುವ ನಮ್ಮ ಹಕ್ಕನ್ನು ನಾವು ಬಳಸಿದ್ದೇವೆ. ಪಾಕಿಸ್ತಾನವು ತಕ್ಷಣವೇ ಎಲ್ಲಾ ಭಯೋತ್ಪಾದಕ ನೆಲೆಗಳನ್ನು ಮುಚ್ಚಬೇಕು ಮತ್ತು ಎಲ್ಲಾ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು.
೫. ಪಾಕಿಸ್ತಾನವು ಲಾಡೆನ್‌ನನ್ನು 10 ವರ್ಷಗಳ ಕಾಲ ಬಚ್ಚಿಟ್ಟಿತ್ತು!
ಇದೇ ಪಾಕಿಸ್ತಾನವು ಏಪ್ರಿಲ್ 25, 2025 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರದಲ್ಲಿ ಪ್ರವಾಸಿಗರ ಹತ್ಯೆಗೆ ಕಾರಣವಾದ ಭಯೋತ್ಪಾದಕ ಸಂಘಟನೆಯನ್ನು ರಕ್ಷಿಸಿತ್ತು. ಇದೇ ಪಾಕಿಸ್ತಾನವು ಒಸಾಮಾ ಬಿನ್ ಲಾಡೆನ್‌ನನ್ನು 10 ವರ್ಷಗಳ ಕಾಲ ಬಚ್ಚಿಟ್ಟಿತ್ತು. ಅವರು ದಶಕಗಳಿಂದಲೂ ಭಯೋತ್ಪಾದಕ ಶಿಬಿರಗಳನ್ನು ನಡೆಸುತ್ತಿದ್ದಾರೆ ಎಂದು ಅವರ ಸಚಿವರು ಈಗ ಒಪ್ಪಿಕೊಳ್ಳುತ್ತಿದ್ದಾರೆ.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine