
ನ್ಯೂಯಾರ್ಕ್ (ಅಮೆರಿಕ) – ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿ ಇತರ ಆಯ್ಕೆಗಳನ್ನು ಪರಿಗಣಿಸಬೇಕು ಎಂದು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಭಾರತಕ್ಕೆ ಸಲಹೆ ನೀಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡುತ್ತಿದ್ದರು.
ರೈಟ್ ಮಾತು ಮುಂದುವರೆಸಿ, “ಯಾರೂ ರಷ್ಯಾದಿಂದ ತೈಲ ಖರೀದಿಸಲು ಇಷ್ಟಪಡುವುದಿಲ್ಲ; ಆದ್ದರಿಂದ ರಷ್ಯಾ ಅಗ್ಗದ ದರದಲ್ಲಿ ತೈಲವನ್ನು ಮಾರಾಟ ಮಾಡುತ್ತಿದೆ. ಭಾರತವು ತನ್ನ ಸ್ವಂತ ಲಾಭಕ್ಕಾಗಿ ರಷ್ಯಾದಿಂದ ತೈಲವನ್ನು ಖರೀದಿಸಲು ನಿರ್ಧರಿಸಿದೆ; ಆದರೆ ಆ ಮೂಲಕ ಗಳಿಸುವ ಹಣವು ಸಾವಿರಾರು ಜನರ ಹತ್ಯೆಗೆ ಕಾರಣವಾಗುತ್ತಿದೆ. ಚೀನಾ, ಭಾರತ ಮತ್ತು ಟರ್ಕಿಯೆ ದೇಶಗಳು ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಖರೀದಿಸುತ್ತಿವೆ ಮತ್ತು ಆ ಮೂಲಕ ಉಕ್ರೇನ್ ವಿರುದ್ಧದ ಯುದ್ಧಕ್ಕಾಗಿ ರಷ್ಯಾಕ್ಕೆ ಪರೋಕ್ಷವಾಗಿ ಹಣವನ್ನು ಒದಗಿಸುತ್ತಿವೆ. ನಮ್ಮಲ್ಲಿ ಯಾರಿಗೂ ಯುದ್ಧ ಬೇಡ; ಅದಕ್ಕಾಗಿಯೇ ನಾವು ಭಾರತಕ್ಕೆ ಇತರ ದೇಶಗಳಿಂದ ತೈಲವನ್ನು ಖರೀದಿಸುವಂತೆ ಸಲಹೆ ನೀಡುತ್ತಿದ್ದೇವೆ. ನಮ್ಮ ಬಳಿಯೂ ಮಾರಾಟ ಮಾಡಲು ಸಾಕಷ್ಟು ತೈಲ ಲಭ್ಯವಿರುವುದರಿಂದ, ನಮ್ಮಿಂದಲೇ ತೈಲವನ್ನು ಖರೀದಿಸಲು ನಾವು ಭಾರತಕ್ಕೆ ಹೇಳುತ್ತಿದ್ದೇವೆ” ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತವು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ಹೇಳಲು ಅಮೆರಿಕ ಯಾರು? ಎಂದು ಭಾರತವು ಅಮೆರಿಕಕ್ಕೆ ಅರ್ಥಮಾಡಿಸಬೇಕು! |
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !