ಯಾವುದೇ ಜೀವಹಾನಿಯಾಗಿಲ್ಲ!

ಬೀಜಿಂಗ್ (ಚೀನಾ) – ಚೀನಾದಲ್ಲಿ ಹಾರುವ ಕಾರುಗಳ ಪರೀಕ್ಷೆಯ ಸಮಯದಲ್ಲಿ ಎರಡು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಲ್ಲಿ ಒಂದು ಕಾರು ಒಂದು ಮೂಲೆಗೆ ಬಿದ್ದು ಬೆಂಕಿ ಹತ್ತಿಕೊಂಡರೆ, ಇನ್ನೊಂದು ಕಾರು ಸುರಕ್ಷಿತವಾಗಿ ಕೆಳಗಿಳಿದಿದೆ. ಯಾವುದೇ ಜೀವಹಾನಿ ಸಂಭವಿಸಿಲ್ಲ. ಪರೀಕ್ಷಣೆ ನಡೆಯುತ್ತಿದ್ದಾಗ ಈ ಎರಡೂ ಕಾರುಗಳು ಒಂದಕ್ಕೊಂದು ತುಂಬಾ ಹತ್ತಿರ ಬಂದವು ಮತ್ತು ಡಿಕ್ಕಿ ಹೊಡೆದವು. ಒಂದು ಕಾರಿನ ಬೆಲೆ ಎರಡೂವರೆ ಕೋಟಿ ರೂಪಾಯಿಗಳು. ‘XPeng AeroHT’ ಕಂಪನಿಯ ‘eVTOL’ ಹೆಸರಿನ ಈ ಕಾರುಗಳು ಅಪಘಾತಕ್ಕೀಡಾದವು.
ಹಾರುವ ಕಾರುಗಳ ಇತಿಹಾಸದಲ್ಲಿ ಇದು ಮೊದಲ ದೊಡ್ಡ ಅಪಘಾತವೆಂದು ಪರಿಗಣಿಸಲಾಗಿದೆ. ಇದರಿಂದ ಈ ತಂತ್ರಜ್ಞಾನದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಸಂದೇಹಗಳು ಹುಟ್ಟಿಕೊಂಡಿವೆ. ಕಾರುಗಳು ಅಪಘಾತಕ್ಕೀಡಾದಾಗ ಅವು ಚಾಲಕನಿಂದ ನಿಯಂತ್ರಿಸಲ್ಪಟ್ಟಿದ್ದವೆಯೇ ಅಥವಾ ಸ್ವಯಂಚಾಲಿತವಾಗಿದ್ದವೇ ಎಂಬುದನ್ನು ಸಂಬಂಧಪಟ್ಟ ಕಂಪನಿ ಸ್ಪಷ್ಟಪಡಿಸಿಲ್ಲ.
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !