ನವರಾತ್ರಿಯ ಸಮಯದಲ್ಲಿ ಮಾಂಸಾಹಾರದ ಮೇಲೆ ನಿಷೇಧ ಹೇರಬೇಕೆಂಬ ಹಿಂದೂಗಳ ಬೇಡಿಕೆಗೆ ಸಮಾಜವಾದಿ ಪಕ್ಷದ ಮಾಜಿ ಸಂಸದ ಎಸ್. ಟಿ. ಹಸನ್ ಅವರ ಆಕ್ರೋಶ

ಉತ್ತರಪ್ರದೇಶ – ಉತ್ತರ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ನವರಾತ್ರಿಯ ಸಮಯದಲ್ಲಿ, ಅಂದರೆ ಒಂಬತ್ತು ದಿನಗಳ ಕಾಲ ಮಾಂಸಾಹಾರದ ಮೇಲೆ ನಿಷೇಧ ಹೇರಬೇಕೆಂದು ಬೇಡಿಕೆಗಳು ಕೇಳಿ ಬರುತ್ತಿವೆ. ಇದಕ್ಕೆ ಸಮಾಜವಾದಿ ಪಕ್ಷದ ಮಾಜಿ ಸಂಸದ ಎಸ್. ಟಿ. ಹಸನ್ ಆಕ್ರೋಶ ವ್ಯಕ್ತಪಡಿಸಿದ್ದು, “ಆಹಾರದ ಮೇಲೆ ನಿಷೇಧ ಹೇರಲು ನೀವು ಯಾರು? ಮುಸ್ಲಿಮರು ತಮ್ಮ ಮನೆಯ ಫ್ರೀಜರ್‌ನಲ್ಲಿ ಮಾಂಸ ಸಂಗ್ರಹಿಸಿಟ್ಟು ತಿನ್ನುತ್ತಾರೆ; ಆದರೆ ಪಂಚತಾರಾ ಹೋಟೆಲ್‌ಗಳಲ್ಲಿ ಗೋಮಾಂಸವನ್ನು ಯಾರು ನಿಷೇಧಿಸಲಿದ್ದಾರೆ? ಈ ನಾಟಕವೇಕೆ ನಡೆಯುತ್ತಿದೆ? ನವರಾತ್ರಿ ಮತ್ತು ಕಾವಡ ಯಾತ್ರೆಯ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ನಿಷೇಧಿಸುವುದು ಕೇವಲ ಮತ ರಾಜಕಾರಣವಾಗಿದೆ. ಭಕ್ತಿ ಮತ್ತು ಶ್ರದ್ಧೆ ಇದ್ದರೆ, ಪಂಚತಾರಾ ಹೋಟೆಲ್‌ಗಳಲ್ಲಿ ಗೋಮಾಂಸ ಮಾರಾಟವನ್ನು ಏಕೆ ನಿಷೇಧಿಸಬಾರದು?” ಎಂದಿದ್ದಾರೆ.
ಎಸ್. ಟಿ. ಹಸನ್ ಅವರು ಮಾತು ಮುಂದುವರೆಸಿ, “ಈ ದೇಶ ಎಲ್ಲರಿಗೂ ಸೇರಿದ್ದು. ಕೇವಲ ಮುಸ್ಲಿಮರು ಮಾತ್ರವಲ್ಲ, ಕ್ರೈಸ್ತರು ಮತ್ತು ಸಿಖ್ಖರೂ ಕೂಡ ಮಾಂಸಾಹಾರ ಮಾಡುತ್ತಾರೆ. ನವರಾತ್ರಿ ಮತ್ತು ಕಾವಡ ಯಾತ್ರೆಯ ಸಮಯದಲ್ಲಿ ಮಾಂಸಾಹಾರವನ್ನು ಹೇಗೆ ತಡೆಯಬಹುದು? ಇದೆಲ್ಲವೂ ಮತಗಳ ಧ್ರುವೀಕರಣಕ್ಕಾಗಿ ನಡೆಯುತ್ತಿದೆ. ಒಂದು ಕಡೆ ಭಕ್ತಿ, ಇನ್ನೊಂದು ಕಡೆ ವ್ಯಾಪಾರ ನಡೆಯುತ್ತಿದೆ. ಭಾರತವು ಜಗತ್ತಿನ ಎರಡನೇ ಅತಿದೊಡ್ಡ ಗೋಮಾಂಸ ರಫ್ತುದಾರ ರಾಷ್ಟ್ರವಾಗಿದೆ, ಹಾಗಾದರೆ ಈ ನಾಟಕಗಳೇಕೆ ನಡೆಯುತ್ತಿವೆ?” ಎಂದರು.
ಮುಸ್ಲಿಂ ಮಕ್ಕಳು ಗರಬಾಗೆ ಹೋಗಬಾರದು! – ಎಸ್ ಟಿ ಹಸನ್
ಮಧ್ಯಪ್ರದೇಶ ರಾಜ್ಯದಲ್ಲಿ ಭಾಜಪ ಮತ್ತು ಹಿಂದೂ ಸಂಘಟನೆಗಳು ನವರಾತ್ರಿಯ ಸಮಯದಲ್ಲಿ ನಡೆಯುವ ಗರಬಾ ಕಾರ್ಯಕ್ರಮಗಳಿಗೆ ಅನ್ಯಧರ್ಮೀಯರ ಪ್ರವೇಶವನ್ನು ನಿಷೇಧಿಸಿವೆ. ಇದಕ್ಕೆ ಹಸನ್ ಅವರು, “ನಾನು ಈ ನಿರ್ಧಾರವನ್ನು ಬೆಂಬಲಿಸುತ್ತೇನೆ. ಮುಸ್ಲಿಮರು ಇದರಲ್ಲಿ ಭಾಗವಹಿಸಬಾರದು. ಮುಸ್ಲಿಂ ಮಕ್ಕಳಿಗೆ ನಾನು ವಿನಂತಿಸಿಕೊಳ್ಳುವುದೇನೆಂದರೆ, ಅವರು ಹಿಂದೂ ಹೆಣ್ಣುಮಕ್ಕಳನ್ನು ತಮ್ಮ ಸಹೋದರಿಯರು ಎಂದು ಭಾವಿಸಬೇಕು. (ಹಸನ್ ಹೇಳಿದರು ಮತ್ತು ಮುಸ್ಲಿಮರು ಅದಕ್ಕೆ ಒಪ್ಪಿಕೊಂಡರೇ, ಅದು ಶುಭ ದಿನ! – ಸಂಪಾದಕರು)” ಎಂದಿದ್ದಾರೆ.
ಸಂಪಾದಕೀಯ ನಿಲುವುಯಾವಾಗಲೂ ಹಿಂದೂಗಳೇ ಏಕೆ ರಾಜಿ ಮಾಡಿಕೊಳ್ಳಬೇಕು? ‘ಈ ದೇಶ ಎಲ್ಲರಿಗೂ ಸೇರಿದ್ದು’ ಎಂದು ಹೇಳುವವರು ದೇಶದ ಬಹುಸಂಖ್ಯಾತ ಹಿಂದೂಗಳ ಹಬ್ಬಗಳನ್ನು ಗೌರವಿಸಿದರೆ ಏನಾಗಲಿದೆ? |
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft