
ನವದೆಹಲಿ – ನಕ್ಸಲೀಯರ ವಿರುದ್ಧ ಅರೆಸೇನಾ ಪಡೆಗಳಿಂದ ಆಕ್ರಮಣಕಾರಿ ಕಾರ್ಯಾಚರಣೆ ಮುಂದುವರಿದಿದೆ. ಮಾರ್ಚ್ 31, 2026 ರೊಳಗೆ ದೇಶವನ್ನು ನಕ್ಸಲ್-ಮುಕ್ತಗೊಳಿಸುವ ಗುರಿಯನ್ನು ಹೊಂದಲಾಗಿದೆ. ಈ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ನಕ್ಸಲ್ ಸಂಘಟನೆಗಳ ಹಲವು ಹಿರಿಯ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ. ಇದಾದ ನಂತರ, ನಕ್ಸಲ್ ಸಂಘಟನೆಗಳು ಶಾಂತಿಯ ಪ್ರಸ್ತಾಪವನ್ನು ಮುಂದಿಟ್ಟು, ಒಂದು ತಿಂಗಳ ಕದನ ವಿರಾಮಕ್ಕೆ ಬೇಡಿಕೆಯಿಟ್ಟಿದ್ದವು. ಈ ಸಶಸ್ತ್ರ ಹೋರಾಟದ ಕದನ ವಿರಾಮಕ್ಕೆ ಒಂದು ತಿಂಗಳು ಪೂರ್ಣಗೊಂಡಿದೆ. ನಕ್ಸಲೀಯರು ಆಗಸ್ಟ್ 15 ರಂದು ಕದನ ವಿರಾಮಕ್ಕಾಗಿ ಪತ್ರ ಬರೆದಿದ್ದರು. ಸೆಪ್ಟೆಂಬರ್ 16 ರಂದು 1 ತಿಂಗಳ ಅವಧಿ ಪೂರ್ಣಗೊಂಡಿದೆ. ‘ಶಾಂತಿಗಾಗಿ ಪ್ರಯತ್ನಗಳು ನಡೆಯುತ್ತಿವೆ, ಆದರೆ ಹಿಂಸಾಚಾರ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಖಡಕ್ ಆಗಿ ಹೇಳಿದ್ದರು.
1. ಜನವರಿ 2024 ರಲ್ಲಿ, ಭದ್ರತಾ ಪಡೆಗಳ ಸೈನಿಕರು ನಕ್ಸಲೀಯರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದರು.
2. ಕಳೆದ 60 ವರ್ಷಗಳಲ್ಲಿ ನಕ್ಸಲ್ ದಾಳಿಗಳಲ್ಲಿ 4,000 ಹೆಚ್ಚು ನಾಗರಿಕರು ಮತ್ತು 2,500ಕ್ಕೂ ಹೆಚ್ಚು ಭದ್ರತಾ ಪಡೆಗಳ ಸೈನಿಕರು ಸಾವನ್ನಪ್ಪಿದ್ದಾರೆ. ಛತ್ತೀಸ್‌ಗಢ, ಜಾರ್ಖಂಡ್, ಬಿಹಾರ ಮತ್ತು ಒಡಿಶಾ ಮುಂತಾದ ರಾಜ್ಯಗಳಲ್ಲಿ ಈ ಹಿಂಸಾಚಾರ ನಿರಂತರವಾಗಿ ನಡೆಯುತ್ತಿದೆ.
3. ನಕ್ಸಲೀಯರು ಹಿಂಸಾಚಾರವನ್ನು ಬಿಟ್ಟು ಶರಣಾಗಬೇಕು ಮತ್ತು ಮುಖ್ಯವಾಹಿನಿಗೆ ಸೇರಿಕೊಳ್ಳಬೇಕು. ಇಲ್ಲದಿದ್ದರೆ, ನಕ್ಸಲೀಯರಿಗೆ ಅಂತಿಮ ಹೊಡೆತ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಎಚ್ಚರಿಕೆ ನೀಡಿದ್ದರು.
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!