ಅಮೆರಿಕಾದಲ್ಲಿ ಅಕ್ರಮ ವಲಸಿಗ ಭಾರತೀಯ ಮೂಲದ ನಾಗರಿಕನನ್ನು ಹತ್ಯೆ ಮಾಡಿದ ಪ್ರಕರಣ

ವಾಷಿಂಗ್ಟನ್ (ಅಮೆರಿಕಾ) – ಸೆಪ್ಟೆಂಬರ್ 10 ರಂದು ಟೆಕ್ಸಾಸ್‌ನಲ್ಲಿ ಭಾರತೀಯ ಮೂಲದ ಹೋಟೆಲ್ ಮ್ಯಾನೇಜರ್ ಚಂದ್ರ ಮೌಳಿ ನಾಗಮಲ್ಲೆ ಅವರ ಶಿರಚ್ಛೇದನದ ಕುರಿತು ಅಧ್ಯಕ್ಷ ಟ್ರಂಪ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಚಂದ್ರ ಅವರನ್ನು ಕೊಂದ ವ್ಯಕ್ತಿಯ ಹೆಸರು ಯೋರ್ಡಾನಿಸ್ ಕೋಬೋಸ್-ಮಾರ್ಟಿನೆಜ್, ಇವನು ಕ್ಯೂಬಾದವನು. ಈ ಘಟನೆಯ ಕುರಿತು ಟ್ರಂಪ್, “ಒಬ್ಬ ಅಕ್ರಮ ವಲಸಿಗ ಚಂದ್ರ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಆತ ನಮ್ಮ ದೇಶದಲ್ಲಿ ಇರಲೇಬಾರದಿತ್ತು. ಚಂದ್ರ ಅವರು ಡಲ್ಲಾಸ್‌ನ ಗೌರವಾನ್ವಿತ ನಾಗರಿಕರಾಗಿದ್ದರು,” ಎಂದು ಹೇಳಿದರು.
ಟ್ರಂಪ್ ಮಾತು ಮುಂದುವರೆಸಿ, “ಆರೋಪಿಯನ್ನು ಈ ಹಿಂದೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ದೊಡ್ಡ ಕಳ್ಳತನಗಳು ಸೇರಿದಂತೆ ಗಂಭೀರ ಅಪರಾಧಗಳಿಗಾಗಿ ಬಂಧಿಸಲಾಗಿತ್ತು; ಆದರೆ, ಹಿಂದಿನ ಜೋ ಬೈಡನ್ ಅವರ ಅಸಮರ್ಥ ಆಡಳಿತದ ಸಮಯದಲ್ಲಿ, ‘ಇಂತಹ ಕೆಟ್ಟ ವ್ಯಕ್ತಿ ನಮ್ಮ ದೇಶದಲ್ಲಿ ಬೇಡ’ ಎಂದು ಕ್ಯೂಬಾ ಆತನನ್ನು ನಮ್ಮ ದೇಶಕ್ಕೆ (ಅಮೆರಿಕಾಕ್ಕೆ) ಕಳುಹಿಸಿತ್ತು. ಈಗ ನಿಶ್ಚಿಂತೆಯಿಂದ ಇರಿ, ನನ್ನ ಉಸ್ತುವಾರಿಯಲ್ಲಿ ಇಂತಹ ಅಕ್ರಮ ವಲಸಿಗರ ಅಪರಾಧಗಳ ಕುರಿತು ಮೃದು ಧೋರಣೆ ಮುಗಿದಿದೆ, ಎಂದು ಹೇಳಿದರು.
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಬೆಂಗಳೂರಿನಲ್ಲಿ ಕಸ ಹಾಯುವ ಸೈಬುಲ್ನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ!
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್