(ಮೌಲ್ವಿ ಎಂದರೆ ಇಸ್ಲಾಂ ಧರ್ಮದ ಅಧ್ಯಯನಕಾರ)

ಬಲಿಯಾ (ಉತ್ತರ ಪ್ರದೇಶ) – ಇಲ್ಲಿನ ಜಮೀನ ಪಡಸರಾ ಗ್ರಾಮದ ಮೌಲ್ವಿ ಶಹಾಬುದ್ದೀನ್ ಎಂಬವನನ್ನು ಬಂಧಿಸಲಾಗಿದೆ. ಆರೋಪಿ ಮೌಲ್ವಿಯು ಭಾರತದ ತ್ರಿವರ್ಣ ಧ್ವಜದ ಬಗ್ಗೆ ಪ್ರಶ್ನೆ ಎತ್ತಿ, ಅಲ್ಲಿನ ಜನರಿಗೆ ಇಸ್ಲಾಂ ಧ್ವಜ ಹಾರಿಸುವಂತೆ ಸಲಹೆ ನೀಡಿದ್ದನು. ಮೌಲ್ವಿಯ ಮೇಲೆ ಹಿಂದುತ್ವ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಭಾಷಣ ಮಾಡಿದ ಆರೋಪವೂ ಇದೆ. ಮೌಲ್ವಿಯ ಬಂಧನದ ನಂತರ, ನೂರಾರು ಮುಸ್ಲಿಮರು ಅವನ ಬಿಡುಗಡೆಗಾಗಿ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ್ದರು. (ಆರೋಪಿ ಮೌಲ್ವಿಯರ ಬಿಡುಗಡೆಗಾಗಿ ಪೊಲೀಸರ ಮೇಲೆ ಒತ್ತಡ ಹೇರುತ್ತಿರುವ ಮುಸ್ಲಿಮರ ವಿರುದ್ಧವೂ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು, ಆಗ ಅವರು ಕಾನೂನನ್ನು ಕೈಗೆತ್ತಿಕೊಳ್ಳುವ ಧೈರ್ಯ ತೋರುವುದಿಲ್ಲ – ಸಂಪಾದಕರು)
ಮೌಲ್ವಿ ಶಹಾಬುದ್ದೀನ್ ಬಾರಾವಫಾತ್ ಮೆರವಣಿಗೆಯ ಸಮಯದಲ್ಲಿ ಜಾಮಾ ಮಸೀದಿಯಲ್ಲಿ ಭಾಷಣ ಮಾಡುವಾಗ ಸಂಘ ಮತ್ತು ಹಿಂದುತ್ವದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದನು. ‘ಅರ್ಧ ಚಡ್ಡಿ ಮತ್ತು ಅರ್ಧ ಪೈಜಾಮ ಧರಿಸುವವರು ಇಸ್ಲಾಂ ಮತ್ತು ದೇಶದ ವಿಶ್ವಾಸಘಾತುಕರು’ ಎಂದು ಹೇಳಿದ್ದನು. ‘ಹಿಂದೂಗಳು ತಮ್ಮ ಸಿದ್ಧಾಂತವನ್ನು ಹರಡಲು ಧ್ವಜಗಳನ್ನು ಹಾರಿಸುತ್ತಾರೆ, ಮುಸ್ಲಿಮರೂ ಇಸ್ಲಾಂ ಧ್ವಜ ಹಾರಿಸಬೇಕು’ ಎಂದೂ ಮೌಲ್ವಿ ಹೇಳಿದ್ದನು. ಭಾರತದ ತ್ರಿವರ್ಣ ಧ್ವಜದ ಬದಲಿಗೆ ಇಸ್ಲಾಂ ಧ್ವಜ ಹಾರಿಸುವಂತೆ ಆತ ಕರೆ ನೀಡಿದ್ದನು.
ಈ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿತು. ನಂತರ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿ, ಮೌಲ್ವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ನಗರಾ ಪೊಲೀಸ್ ಠಾಣೆಯ ಪ್ರಭಾರಿ ಅಜಯ ಕುಮಾರ ತ್ರಿಪಾಠಿ ಅವರು ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಮುಸ್ಲಿಮರಿಗೆ ದೇಶಕ್ಕಿಂತ ಧರ್ಮವೇ ದೊಡ್ಡದು ಎಂಬುದು ಈ ಘಟನೆಯಿಂದ ಸಾಬೀತಾಗುತ್ತದೆ. ಮೌಲ್ವಿಯ ಈ ಸಲಹೆಯನ್ನು ಯಾವುದೇ ಮುಸ್ಲಿಮರು, ಕಾಂಗ್ರೆಸ್ ನಾಯಕರು, ಅಥವಾ ಜಾತ್ಯತೀತವಾದಿಗಳು ವಿರೋಧಿಸುವುದಿಲ್ಲ ಎಂಬುದನ್ನು ನಾವು ಗಮನಿಸಬೇಕು. |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ