ಮುಸಲ್ಮಾನರಲ್ಲ ಸಾವರ್ಕರ್ ಅವರೇ ಭಾರತ ವಿಭಜನೆಗೆ ಮೊದಲು ಬೇಡಿಕೆ ಇಟ್ಟಿದ್ದರು !’ – ಅಸದುದ್ದೀನ್ ಓವೈಸಿ

ಎನ್‌.ಸಿ.ಇ.ಆರ್‌.ಟಿ. ಪಠ್ಯಕ್ರಮದಲ್ಲಿ ಬದಲಾವಣೆಗಳ ಕುರಿತು ಅಸದುದ್ದೀನ್ ಓವೈಸಿ ಅವರ ಹೇಳಿಕೆ

ಭಾಗ್ಯನಗರ (ತೆಲಂಗಾಣ) – ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷದ ಮುಖ್ಯಸ್ಥ ಅಸದುದ್ದೀನ್ ಓವೈಸಿ ಅವರು ಎನ್‌.ಸಿ.ಇ.ಆರ್‌.ಟಿ. (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಪಠ್ಯಕ್ರಮದಲ್ಲಿನ ಬದಲಾವಣೆಗಳ ಕುರಿತು ಬಿಜೆಪಿ ಸರಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಅವರು, ‘ಪರಿಷ್ಕೃತ ಪಠ್ಯಕ್ರಮದಲ್ಲಿ ಭಾರತದ ವಿಭಜನೆಗೆ ಮುಸ್ಲಿಂ ಸಮುದಾಯವನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ; ಆದರೆ ಸತ್ಯವೇನೆಂದರೆ, ವಿಭಜನೆಯ ಕಲ್ಪನೆಯನ್ನು ಮೊದಲು ಮಂಡಿಸಿದವರು ಸಾವರ್ಕರ್. ಅದರ ಹೊಣೆಗಾರಿಕೆ ಮೌಂಟ್‌ಬ್ಯಾಟನ್ ಮತ್ತು ಆ ಸಮಯದ ಕಾಂಗ್ರೆಸ್ ಸರಕಾರದ ಮೇಲಿತ್ತು. ವಿಭಜನೆಗೆ ಮುಸ್ಲಿಮರನ್ನು ದೂಷಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಪಂಡಿತ್ ನಥುರಾಮ್ ಗೋಡ್ಸೆ ಕುರಿತಾದ ಮಾಹಿತಿಯನ್ನು ತೆಗೆದುಹಾಕಿದ ಆರೋಪ

ಸಂಸದ ಓವೈಸಿ ಅವರು, ‘ಮಹಾತ್ಮ ಗಾಂಧೀಜಿಯವರನ್ನು ನಥುರಾಮ್ ಗೋಡ್ಸೆ ಹತ್ಯೆ ಮಾಡಿದರು ಎಂಬ ಮಾಹಿತಿಯನ್ನೂ ಪಠ್ಯಕ್ರಮದಿಂದ ತೆಗೆದುಹಾಕಲಾಗಿದೆ. ‘ಗೋಡ್ಸೆ ಗಾಂಧಿಯವರನ್ನು ಏಕೆ ಕೊಂದರು?’ ಎಂಬುದನ್ನು ನೀವು ಏಕೆ ತೆಗೆದುಹಾಕಿದಿರಿ?’ ಎಂದು ಪ್ರಶ್ನಿಸಿದರು.

ಸಂಪಾದಕೀಯ ನಿಲುವು

ಇಂತಹ ಹೇಳಿಕೆ ನೀಡಿ ಓವೈಸಿ ಅವರು ಭಾರತೀಯರನ್ನು ಮೂರ್ಖರೆಂದು ಭಾವಿಸುತ್ತಾರೆಯೇ? ಈ ಹೇಳಿಕೆಗಾಗಿ ಅವರ ವಿರುದ್ಧ ಕೇಸು ದಾಖಲಿಸಿ ಜೈಲಿಗೆ ಕಳುಹಿಸಬೇಕು!