
ಮುಂಬಯಿ – ಪೃಥ್ವಿಯ ಇತಿಹಾಸದಲ್ಲಿ ಮೊದಲ ಬಾರಿಗೆ ನೈಋತ್ಯ ಮಾನ್ಸೂನ್ ಹಿಮಾಲಯವನ್ನು ದಾಟಿ ಟಿಬೆಟ್‌ಗೆ ತಲುಪಿದೆ. ಇದರಿಂದ ಜಗತ್ತಿನಲ್ಲಿ ಭೀಕರ ಪರಿಣಾಮಗಳಾಗುವ ಭೀತಿ ವ್ಯಕ್ತವಾಗಿದೆ. ಈ ಅಸಾಮಾನ್ಯ ಘಟನೆ ವಿಜ್ಞಾನಿಗಳ ಗಮನ ಸೆಳೆದಿದೆ. ಮಾನ್ಸೂನ್ ಮೋಡಗಳು ಹಿಮಾಲಯ ಪರ್ವತಗಳನ್ನು ಅಪ್ಪಳಿಸಿ ಭಾರತಕ್ಕೆ ಹಿಂದಿರುಗುತ್ತವೆ ಮತ್ತು ಭಾರತದ ಪರ್ವತ ಹಾಗೂ ಬಯಲು ಪ್ರದೇಶಗಳಲ್ಲಿ ಮಳೆ ಸುರಿಸುತ್ತವೆ. ಹವಾಮಾನ ಶಾಸ್ತ್ರಜ್ಞರ ಪ್ರಕಾರ, ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳು ಈಗ ಇಡೀ ಹಿಮಾಲಯ ಪ್ರದೇಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿವೆ. ಮುಂಬರುವ ದಿನಗಳಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರವಾಗಬಹುದು ಮತ್ತು ಅದರ ಭೀಕರ ಪರಿಣಾಮಗಳು ಕಾಣಿಸಿಕೊಳ್ಳಬಹುದು.
೧. ‘ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿ’ಯ ವಿಜ್ಞಾನಿಗಳ ತಂಡ ಲಡಾಖ್‌ನ ಝಾನ್ಸ್ಕರ್ ಕಣಿವೆಯಲ್ಲಿ ಸಂಶೋಧನೆ ನಡೆಸುತ್ತಿರುವಾಗ ಕೆಲವು ಅಚ್ಚರಿಯ ಸಂಗತಿಗಳನ್ನು ಕಂಡುಹಿಡಿದಿದೆ. ಸಂಸ್ಥೆಯ ವಿಜ್ಞಾನಿಗಳ ಪ್ರಕಾರ, ಮಾನ್ಸೂನ್ ಹಿಮಾಲಯವನ್ನು ದಾಟಿ ಟಿಬೆಟ್‌ಗೆ ಹೋಗಿರುವುದು ಇದು ಮೊದಲ ಬಾರಿಗೆಯಾಗಿದೆ. ಟಿಬೆಟ್ ಒಂದು ಪ್ರಸ್ಥಭೂಮಿ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಭಾರೀ ಮಳೆಯಾದರೆ ವಿನಾಶ ಉಂಟಾಗುತ್ತದೆ. ಮಾನ್ಸೂನ್ ಸಮಯದಲ್ಲಿ ಹಿಮಾಲಯದ ಹಲವು ಭಾಗಗಳಲ್ಲಿ ಹಿಮಪಾತ ಪ್ರಾರಂಭವಾಗಿರುವುದನ್ನು ಕಂಡು ವಿಜ್ಞಾನಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
೨. ಮಾನ್ಸೂನ್ ಮೋಡಗಳು ಹಿಮಾಲಯಕ್ಕೆ ಅಪ್ಪಳಿಸಿ ಭಾರತದಲ್ಲಿ ದೊಡ್ಡ ಜಲ ಸಂಪನ್ಮೂಲಗಳನ್ನು ಸೃಷ್ಟಿಸುವುದು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಪ್ರಸ್ತುತ ವಾತಾವರಣದಿಂದಾಗಿ ಹಿಮಾಲಯ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿದ್ದು, ಇದರಿಂದ ವಿನಾಶ ಉಂಟಾಗಿದೆ. ಸಂಶೋಧನೆಯ ಪ್ರಕಾರ, ಹವಾಮಾನ ಬಿಸಿಯಾಗುತ್ತಿದೆ. ಹಾಗಾಗಿ ಮೋಡಗಳೂ ಎತ್ತರಕ್ಕೆ ಹೋಗುತ್ತಿವೆ. ಮೋಡಗಳು ಹಿಮಾಲಯದಿಂದ ೨ ಸಾವಿರ ಮೀಟರ್‌ಗಳಷ್ಟು ಎತ್ತರದಿಂದ ಮುಂದೆ ಸಾಗುತ್ತಿವೆ. ಕೇದಾರನಾಥದಂತಹ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗಲು ಇದೇ ಕಾರಣ.
೩. ಈ ಘಟನೆಯಿಂದಾಗಿ ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದಂತಹ ರಾಜ್ಯಗಳಲ್ಲಿ ಭೀಕರ ಪ್ರವಾಹ, ಮೇಘ ಸ್ಫೋಟ ಮತ್ತು ಭೂಕುಸಿತಗಳಿಂದಾಗಿ ದೊಡ್ಡ ಹಾನಿಯಾಗಿದ್ದು, ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !